ಕನ್ನಡ ರಾಜ್ಯೋತ್ಸವ: ವಿಶೇಷ ಸಂಗೀತ ಕಾರ್ಯಕ್ರಮ

ರಾಯಚೂರು.ನ.೩-ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ೬೬ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ದಿನಾಂಕ ೧ನೇ ನವೆಂಬರ್, ೨೦೨೧ ರಂದು ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಾಯಚೂರಿನ ಶ್ರೀ ಸೇತುಮಾಧವ ಕೆರೂರ್ ಇವರ ನೇತೃತ್ವದ ಸಂಗೀತ ಕಲಾವಿದರ ತಂಡವು ಕನ್ನಡದ ಕಂಪು ಚೆಲ್ಲುವ ೨೦ಕ್ಕೂ ಹೆಚ್ಚು ಸುಮಧುರ ಗೀತೆಗಳನ್ನು ಹಾಡುವುದರ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಸದರಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಕೆ.ಎನ್. ಕಟ್ಟಿಮನಿ ಯವರು ಮಾತನಾಡಿ ಕನ್ನಡ ಭಾಷೆಯ ಉಗಮ ಹಾಗೂ ನೆಲ-ಜಲದ ಮಹತ್ವ ಅರಿತು ನಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ಡಿ.ಎಂ. ಚಂದರಗಿ, ಡಾ. ಎಂ. ಭೀಮಣ್ಣ, ಡಾ. ಅಶೋಕ ಜೆ., ಡಾ. ಎಸ್.ಬಿ. ಗೌಡಪ್ಪ, ಡಾ. ಜಾಗ್ರ್ರತಿ ಬಿ. ದೇಶಮಾನ್ಯ, ಡಾ. ಮಚೇಂದ್ರನಾಥ್, ಶ್ರೀ ರವಿ ಆರ್. ಮೆಸ್ತಾ, ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಯವರು, ಕೃಷಿ ಕಾರ್ಮಿಕರು ಹಾಗೂ ವಿಶ್ವವಿದ್ಯಾಲಯದ ರಾಯಚೂರು ಆವರಣದ ವಸತಿನಿಲಯಗಳ ನಿವಾಸಿಗಳು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕನ್ನಡ ಘಟಕದ ಅಧ್ಯಕ್ಷರು ಹಾಗೂ ಶಿಕ್ಷಣ ನಿರ್ದೇಶಕರಾದ ಡಾ. ಎಂ.ಜಿ ಪಾಟೀಲ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾಗಳಾದ ಡಾ. ಪ್ರಮೊದ ಕಟ್ಟಿ ಇವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.