ಕನ್ನಡ ರಾಜ್ಯೋತ್ಸವ: ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್, ಪ್ಯಾಡ್ ವಿತರಣೆ

ಲಿಂಗಸೂಗೂರು.ನ.೦೨- ಪಟ್ಟಣದ ನಡುವಿನಮನಿ ಆಸ್ಪತ್ರೆ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ತಾಲೂಕ ಘಟಕ ವತಿಯಿಂದ ೬೮ ನೇಯ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ೧೦೦ ಜನ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು, ಪ್ಯಾಡ್ ವಿತರಣೆ ಮಾಡಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಅಧ್ಯಕ್ಷ ಮಾದೇಶ ಸರ್ಜಾಪೂರ ಧ್ವಜಾರೋಹಣ ನೆರವೇರಿಸಿದರು. ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ಅಮರೇಶ ತಾವರಗೇರಿ, ಪ್ರಭು ಹವಲ್ದಾರ್, ಎಂ.ಸಿ.ಚಂದ್ರಶೇಖರ, ಮಂಜುನಾಥ ವಕೀಲರು, ಆನಂದ ನರಕಲದಿನ್ನಿ, ಕರವೇ ಉಪಾಧ್ಯಕ್ಷ ಬಸವರಾಜ ಪೇರಿ, ಗೌರವಧ್ಯಕ್ಷ ರಮೇಶ ಸುಂಕದ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಸಂ.ಕಾರ್ಯದರ್ಶಿ ಮುತ್ತಣ್ಣ ಗುಡಿಹಾಳ, ಮಹಾಂತೇಶ ಹೂಗಾರ, ರಾಜು ರಡ್ಡಿ, ಜೀವಾ ನಾಯಕ, ಅಂಜಿ ನಾಯಕ, ಮೌನೇಶ ನಾಯಕ, ಕುಮಾರ ಸ್ವಾಮಿ, ಜಗನ್ನಾಥ ಜಾಧವ,ಬಸವರಾಜ,ಗಂಗಣ್ಣ ನಾಯಕ, ಶ್ರೀಕಾಂತ ಮಾಚನೂರು, ಪ್ರಕಾಶ ಮಡ್ಡಿಕಾರ, ಅಮರೇಶ ಪವಾರ್ ಇದ್ದರು.