ಕನ್ನಡ ರಾಜ್ಯೋತ್ಸವ : ಫಥ ಸಂಚಲನ


ಗದಗ ನ.02 : ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ನಂತರ ವಿವಿಧ ದಳಗಳ ವೀಕ್ಷಣೆ ಮಾಡಿದರು. ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಿದ್ಯಾನಂದ ನಾಯಕ ಅವರು ವಹಿಸಿದ್ದರು. ಜಿಲ್ಲಾ ಪೆÇೀಲಿಸ ಬ್ಯಾಂಡಿನ ಮೇರೆ ದೇಶ ಕಿ ಧರತಿ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಪಿಎಸ್‍ಐ ಶಿವಾನಂದ ಕಾರಜೋಳ ನೇತೃತ್ವದಲ್ಲಿ ಗದಗ ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್ ಪಡೆ, ರಾಘವೇಂದ್ರ ಕೋತ್ ಅವರ ನೇತೃತ್ವದ ನಾಗರೀಕ ಪೆÇಲೀಸ್ ಪಡೆ, ವಿ.ಎಂ.ಪಾಸ್ತೆ ಅವರ ನೇತೃತ್ವದ ಗೃಹ ರಕ್ಷಕ ಪಡೆ, ಡೆಪ್ಯೂಟಿ ಆರ್.ಎಫ್.ಓ ಎಸ್.ಬಿ.ಪೂಜಾರ ಅವರ ನೇತೃತ್ವದ ಅರಣ್ಯ ರಕ್ಷಕ ಪಡೆ ಹಾಗೂ ಪಿಎಸ್‍ಐ ವಿವೇಕಾನಂದ ಬಿ.ಎಂ ನೇತೃತ್ವದಲ್ಲಿ ಅಬಕಾರಿ ದಳ, ಎಫ್.ಎಸ್.ಓ ಆನಂದ ಚಿನಗುಂಡಿ ಅವರ ನೇತೃತ್ವದ ಅಗ್ನಿ ಶಾಮಕ ದಳಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು.
ಸನ್ಮಾನಿತರು:- ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ರಾಜ್ಯೋತ್ಸವ ಸಂದೇಶದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸಿಗೆ ಭಾಜನರಾದ ರಾಮಣ್ಣ ಬ್ಯಾಟಿ, ಶಿಕ್ಷಣ ಕ್ಷೇತ್ರದಲ್ಲಿ ಬಿ.ಎಫ್,ದಂಡೀನ ಅವರುಗಳಿಗೆ ಸಚಿವರು ಹಾಗೂ ಅತಿಥಿಗಳು ಸನ್ಮಾನಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕು.ಶ್ರೇಯಾ ಗೌಡಗೇರಿ, ದ್ವಿತೀಯ ಸ್ಥಾನ ಪಡೆದ ಕು. ತೃಪ್ತಿ ಮಾಳಗಿ, ತೃತೀತಯ ಸ್ಥಾನ ಪಡೆದ ಕು.ರಾಧಿಕಾ ಪಾಟೀಲ, ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕು.ಲಿಂಬಣ್ಣ ಬಡಿಗೇರಿ, ದ್ವಿತೀಯ ಸ್ಥಾನ ಪಡೆದ ಕು.ಗಂಗಮ್ಮ ಕುರ್ತಕೋಟಿ, ತೃತೀಯ ಸ್ಥಾನ ಪಡೆದ ಕು.ಶೇಫಾ ಬೋದ್ಲಲೇಖಾ, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕು, ಪ್ರಶಾಂತ ನಾಕೋಡ, ದ್ವೀತಿಯ ಸ್ಥಾನ ಪಡೆದ ಕು.ಶ್ರೇಯಾ ಕುಷ್ಟಗಿ, ಕು.ಪ್ರತೀಕ್ಷಾ ಬನಸಾಲಿ, ತೃತೀಯ ಸ್ಥಾನ ಪಡೆದ ಕು. ಅರುಣಕುಮಾರ ಗದಗಿನ, ಕುಮಾರಿ ಅನಿತಾ ಸಿದ್ದರಾಮಪ್ಪ, ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕು.ಅಂಕಿತಾ ಸಂಶಿ, ಕು.ಸೌರಬ ಮೆನಸಗಿ, ದ್ವೀತಿಯ ಸ್ಥಾನ ಪಡೆದ ಕು.ಮನೋಜಗೌಡ ರಬ್ಬಗೌಡರ, ತೃತೀಯ ಸ್ಥಾನ ಪಡೆದ ಕು.ಯೋಗೇಶ ದೇಸಾಯಿ ಇವರುಗಳನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾದ ಡಿ.ಹೆಚ್.ಪರಂಗಿ, ಸಾಹಿತ್ಯ ಕ್ಷೇತ್ರದಲ್ಲಿ ಐ.ಕೆ.ಕಮ್ಮಾರ, ಶಿಕ್ಷಣ ಕ್ಷೇತ್ರದಲ್ಲಿ ಆರ್.ಎಲ್.ಪೆÇೀಲಿಸ್‍ಪಾಟೀಲ, ರಂಗಭೂಮಿ ಕಲಾವಿದ ಹನುಮಪ್ಪ ರಂಗಣ್ಣವರ, ಸಂಗೀತ ಕ್ಷೇತ್ರದಲ್ಲಿ ಸಿದ್ದೇಶ್ವರ ತೆಲ್ಲೂರ ಇವರುಗಳನ್ನು ಸಚಿವರು ಹಾಗೂ ಗಣ್ಯರು ಸನ್ಮಾನಿಸಿದರು.