ಕನ್ನಡ ರಾಜ್ಯೋತ್ಸವ : ಪ್ರಶಸ್ತಿ- ಸನ್ಮಾನ

ಗಬ್ಬೂರು.ನ.09- ಸಮಾಜ ಸೇವೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಂಡು ಹಗಲಿರುಳು ಎನ್ನದೇ ರಾಜ್ಯ ಪ್ರವಾಸ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕುರಿಗಳು, ರಸ್ತೆಗಳು,ರೈತಪರ ಬಗ್ಗೆ ಇನ್ನಿತರ ಸಮಾಜದ ಯಾವುದೇ ಸಮಸ್ಯೆಗಳಿಗೆ ಕ್ಷಣಾರ್ಧದಲ್ಲಿ ಸ್ಪಂದಿಸಿ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಜನರ ಪ್ರೀತಿಗೆ ಪಾತ್ರರಾಗಿರುವ ಕನ್ನಡಭಿಮಾನಿ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಜರ್ನಾಲಿಸ್ಟ್ ಯೂನಿಯನ್ ಸಿರಿವಾರ ಘಟಕದ ಕನ್ನಡಮ್ಮನಿಗೆ ನುಡಿ ನಮನ ಸಾಧಕರಿಗೆ ಸನ್ಮಾನ ಸಮಾರಂಭ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಕರ್ನಾಟಕ ಜರ್ನಾಲಿಸ್ಟ್ ಯೂನಿಯನ್ ಸಿರವಾರ ಘಟಕದ ವತಿಯಿಂದ ಸಿರಿವಾರ ಪಟ್ಟಣದಲ್ಲಿ ನವೆಂಬರ್ 8 ನೇ ಸಂಜೆ 6 ಗಂಟೆಯಿಂದ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ಕನ್ನಡಮ್ಮನಿಗೆ ನುಡಿ ನಮನ ಸಮಾರಂಭದಲ್ಲಿ ಶ್ರೀ ಅಯ್ಯಪ್ಪ ಗಬ್ಬೂರು ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸಿರಿವಾರ ಪಟ್ಟಣದ ಸರಕಾರಿ ಕಾಲೇಜು ಆವರಣದಲ್ಲಿ ನಡೆದಿರುವ ಸಮಾರಂಭದ ಸಾನಿಧ್ಯವನ್ನು ನವಲಕಲ್ ಬೃಹನ್ಮಠ ಅಭಿನವ ಸೋಮನಾಥ ಶಿವಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.ಯೂನಿಯನ್ ರಾಜ್ಯಧ್ಯಕ್ಷರು ಬಿ.ನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮಾನವಿ ಶಾಸಕ ರಾಜ ವೆಂಕಟಪ್ಪ ನಾಯಕ ಸಮಾರಂಭ ಉದ್ಘಾಟನಾ ಮಾಡಿದರು.
.ಸಿರಿವಾರ ತಾಲ್ಲೂಕು ಪಂಚಾಯತ ಅಧ್ಯಕ್ಷ ದೇವರಾಜ ನಾಯಕ.ಯೂನಿಯನ್ ಜಿಲ್ಲಾಧ್ಯಕ್ಷರು ಮಾರುತಿ ಬಡಿಗೇರ ಮಾಜಿ.ಜಿಲ್ಲಾ ಪಂಚಾಯತ ಸದಸ್ಯರು ಆಸ್ಲಂಪಾಷ ಶ್ರೀಮತಿ ವಿಜಯ ರಾಜೇಶ್ವರಿ ಗೋಪಶೆಟ್ಟಿ ಶ್ರೀದೇವಿ ಆರ್ ನಾಯಕ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.