ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಯಪ್ಪ ಗಬ್ಬೂರು ಆಯ್ಕೆ

ಗಬ್ಬೂರು.ನ.6-ಸಮಾಜ ಸೇವೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಂಡು ಹಗಲಿರುಳು ಎನ್ನದೇ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಕುರಿಗಳು, ರಸ್ತೆಗಳು, ರೈತಪರ ಬಗ್ಗೆ ಇನ್ನಿತರ ಸಮಾಜದ ಕಳಕಳಿ ಹೊಂದಿರುವ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಜನರ ಪ್ರೀತಿಗೆ ಪಾತ್ರರಾಗಿರುವ ಕನ್ನಡಭಿಮಾನಿ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕರ್ನಾಟಕ ಜರ್ನಾಲಿಸ್ಟ್ ಯೂನಿಯನ್ ವತಿಯಿಂದ ಕೊಡು ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಕರ್ನಾಟಕ ಜರ್ನಾಲಿಸ್ಟ್ ಯೂನಿಯನ್ ಸಿರವಾರ ಘಟಕದ ವತಿಯಿಂದ ಸಿರವಾರ ಪಟ್ಟಣದಲ್ಲಿ ನವೆಂಬರ್ 8 ರಂದು ಸಂಜೆ 6 ಗಂಟೆಗೆ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿರುವ ಕನ್ನಡಮ್ಮನಿಗೆ ನುಡಿ ನಮನ ಸಮಾರಂಭದಲ್ಲಿ ಅಯ್ಯಪ್ಪ ಗಬ್ಬೂರು ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಸಿರವಾರ ಪಟ್ಟಣದ ಸರಕಾರಿ ಕಾಲೇಜು ಆವರಣದಲ್ಲಿ ನಡೆಯಲಿರುವ ಈ ಸಮಾರಂಭದ ಸಾನಿಧ್ಯವನ್ನು ನವಲಕಲ್ ಬೃಹನ್ಮಠ ಅಭಿನವ ಸೋಮನಾಥ ಶಿವಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ಯೂನಿಯನ್ ರಾಜ್ಯಾಧ್ಯಕ್ಷರು ಬಿ.ನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾನವಿ ಶಾಸಕ ರಾಜ ವೆಂಕಟಪ್ಪ ನಾಯಕ ಸಮಾರಂಭ ಉದ್ಘಾಟನಾ ಮಾಡಲಿದ್ದಾರೆ. ಸಿರವಾರ ತಾಲ್ಲೂಕು ಪಂಚಾಯತ ಅಧ್ಯಕ್ಷ ದೇವರಾಜ ನಾಯಕ. ಯೂನಿಯನ್ ಜಿಲ್ಲಾಧ್ಯಕ್ಷರು ಮಾರುತಿ ಬಡಿಗೇರ, ಜಿಲ್ಲಾ ಪ್ರದಾನ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಅತ್ತನೂರು, ಕೆ.ಜೆ.ಯು ಸಿರವಾರ ತಾಲ್ಲೂಕು ಅಧ್ಯಕ್ಷರಾದ ಶಿವರಾಜ ಜಗ್ಲಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಆಸ್ಲಂಪಾಷ, ಪಿ.ಎಸ್.ಐ ಸುಜಾತ ನಾಯಕ, ಪಿ.ಎಸ್.ಐ ವೆಂಕಟೇಶ ಸೇರಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.