ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ

ವಿಜಯಪುರ, ನ.3-ಕರ್ನಾಟಕ ನವ ನಿರ್ಮಾಣ ವೇದಿಕೆ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಜರುಗಿತು.
ಕವಿಗೋಷ್ಠಿಯ ಅಧ್ಯಕ್ಷರಾಗಿ ಭಾರತಿ ಪಾಟೀಲ ಮಾತನಾಡಿ ಕನ್ನಡ ಭಾಷೆ ಇದೊಂದು ಶ್ರೀಮಂತ ಭಾಷೆ ಪ್ರತಿದಿನ ಅದರ ಅಭಿಮಾನ ಇರಬೇಕು. ನಾಡಿನ ಸಂಸ್ಕøತಿ ಪರಂಪರೆಗಳು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿ ಬರೆಯುವ ಸಾಹಿತ್ಯ ನಿರ್ಮಾಣವಾಗಬೇಕು. ಸರ್ವ ಜಾತಿ ಧರ್ಮಗಳು ಸೇರಿ ಕನ್ನಡ ಕಟ್ಟುವ ಕೆಲಸ ನಡೆಯಬೇಕು ಎಂದರು.
ಕವಿಗೋಷ್ಠಿ ಉದ್ಘಾಟಕರಾಗಿ ವಿದ್ಯಾವತಿ ಅಂಕಲಗಿ ಮಾತನಾಡಿ ಬಹಳ ಪುಸ್ತಕ ಬರೆದವರು ಕವಿಗಳಲ್ಲ ಒಂದೆ ಪುಸ್ತಕ ಇಡಿ ವಿಶ್ವವನ್ನೆ ಪರಿವರ್ತನೆಗೊಳಿಸುವಂತಹ ಶಕ್ತಿ ಸಾಮಥ್ರ್ಯ ಹೊಂದಿರಬೇಕು. ಜ್ಞಾನದ ಹಸಿವು ಸಾಹಿತ್ಯಿಗಳಿದ್ದರೆ ಬದುಕಿನ ಹಸಿವು ಜನಸಾಮಾನ್ಯರಿಗೆ ಇದೆ ಈ ಎರಡರ ಮಧ್ಯ ಅಂತರವನ್ನು ಹೆಚ್ಚಿಸುವ ಸಾಹಿತ್ಯ ಮೂಡಿಬರಬೇಕು ಎಂದರು.
ಮುಖ್ಯ ಅತಿಥಿಯಾಗಿ ಶೇಷರಾವ ಮಾನೆ ಮಾತನಾಡಿ ಸಾಹಿತ್ಯ ಸಮಾಜ ತಿದ್ದುವ ಜೊತೆಗೆ ಮುನ್ನಡೆಯಬೇಕು. ಸಾಹಿತ್ಯಕ್ಕೆ ಹೃದಯವಿರಬೇಕು. ಕಣ್ಣು ಇರಬೇಕು. ಕಿವಿಯು ಇರಬೇಕು ಅಂದಾಗ ಮಾತ್ರ ಮಾನವೀಯ ಸಾಹಿತ್ಯ ನಿರ್ಮಾಣವಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯ ಬೆಸೆಯುವ ಸೇತುವೆಯಂತೆ ನಿರ್ಮಾಣವಾಗಬೇಕೆಂದರು.
ಎಂ.ಎಂ. ಖಲಾಸಿ ಮಾತನಾಡಿ ಸಾಹಿತ್ಯ, ಸಂಗೀತ, ಸಂಸ್ಕøತಿ, ಕಲೆ ನಮ್ಮ ಬದುಕಿನ ಅವಿಭಾಜ್ಯ ಅಂಗಗಳು ಇವೆಲ್ಲವನ್ನು ಒಳಗೊಂಡು ಮೂಡಿಬರತಕ್ಕಂತಹ ಸಾಹಿತ್ಯ ನಮ್ಮ ಭಾವಿ ಭವಿಷ್ಯದ ನಿರ್ಮಾಣಕ್ಕೆ ಸೂಕ್ತ ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ ಚುಟುಕು ಸಾಹಿತ್ಯದಲ್ಲಿ ಅಘಾದವಾದ ಶಕ್ತಿ ಇದೆ. ವಜ್ರಕ್ಕಿಂತ ಅಮೂಲ್ಯವಾದ ಬೆಲೆ ಚುಟುಕು ಸಾಹಿತ್ಯಕ್ಕೆ ಇದೆ ಎಂದರು.
ವೇದಿಕೆ ಮೇಲೆ ನಗರದ ಹಿರಿಯ ನ್ಯಾಯವಾದಿ ಕೆ.ಎಫ್. ಅಂಕಲಗಿ ಉಪಸ್ಥಿತರಿದ್ದರು.
ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಡಾ. ಸುರೇಶ ಕಾಗಲಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೀಮಾಶಂಕರಯ್ಯ ವಿರಕ್ತಮಠ ನಿರೂಪಿಸಿದರು. ಕೆ.ಕೆ.ಬನ್ನಟ್ಟಿ ಸ್ವಾಗತಿಸಿದರು. ವಸಂತರಾವ ಕೋರ್ತಿ ವಂದಿಸಿದರು.
ಜಿಲ್ಲಾ ಕವಿಗೋಷ್ಠಿಯಲ್ಲಿ ಹಯಾತ ರೋಜಿನದಾರ, ಪ್ರಕಾಶಸಿಂಗ್ ರಜಪುತ, ಸುನೀಲ ಭೈರಿದೊರೆ, ಶಿವಾಜಿ ಮೊರೆ, ಈರಣ್ಣ ಭೋವಿ, ಅಶೋಕ ಹೊಸಮನಿ, ಡಾ. ಸುರೇಶ ಕಾಗಲಕರ, ಎಂ.ಎಂ. ಕತ್ನಳ್ಳಿ, ಮಲ್ಲಿಕಾರ್ಜುನ ಮ. ಬುರ್ಲಿ (ಮನಗೂಳಿ) ಶೇಷರಾವ ಮಾನೆ (ಬೀಳಗಿ) ವಸಂತರಾವ ಕೊರ್ತಿ (ಬೀಳಗಿ) ಸೋಮಶೇಖರಯ್ಯ ಹಿರೇಮಠ (ಮಿಣಜಗಿ) ರಾಮಚಂದ್ರ ಆರ್. ಹಂಚನಾಳ (ವಿಜಯಪುರ) ಶಿವಪುತ್ರ ಅಜಮನಿ (ಮುದ್ದೇಬಿಹಾಳ) ಧರೆಪ್ಪ ಸಿದ್ದನಾಥ (ಹೊನವಾಡ)ದಿನೇಶ ಭೋವಿ ರಾಜು ಬರಡೋಲ (ವಿಜಯಪುರ) ಬಾಬು ಅವತಾಡೆ (ವಿಜಯಪುರ) ಎಂ.ಎಂ. ಖಲಾಸಿ (ಬಾಗಲಕೋಟ) ಸಂತೋಷ ಕಬಾಡೆ (ವಿಜಯಪುರ) ಯಮನಪ್ಪಾ ಎಸ್. ಅರಬಿ (ವಿಜಯಪುರ) ಶಾಂತಾಬಾಯಿ ಜೋಗಣ್ಣವರ (ವಿಜಯಪುರ) ಲಕ್ಷ್ಮೀಕಾಂತ ಪು. ಮಾನೆ (ಭತಗುಣಕಿ) ಶ್ರೀರಂಗ ಪುರಾಣಿಕ (ವಿಜಯಪುರ), ಆನಂದ ಅಲದಿ, ಶಾಹನವಾಜ ತೊರವಿ, ರಾಜಶೇಖರ ಕುಲಕರ್ಣಿ, ಶಿಕ್ಷಕ ಬನಸೋಡೆ ಕವನವಾಚನ ಮಾಡಿದರು.