ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ : ಚಂದ್ರಪ್ರಭ ಕಮಲಾಪುರಕರ್

ಕಲಬುರಗಿ:ನ.1- ಕನ್ನಡದ ಬಗೆಗಿರುವ ಅಭಿಮಾನ, ಪ್ರೀತಿ ಕೇವಲ ರಾಜ್ಯೋತ್ಸವ ದಿನದಂದು ಮಾತ್ರ ಸೀಮತಗೊಳಿಸುವುದು ಬೇಡ. ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕøತಿ, ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ. ಕನ್ನಡದಲ್ಲಿಯೇ ಮಾತನಾಡುವ, ಬರೆಯುವ, ಓದುವ ಕನ್ನಡತನ ಪ್ರವೃತ್ತಿ ಮೈಗೂಡಿಸಿಕೊಂಡು ಕನ್ನಡ ನಿತ್ಯೋತ್ಸವವಾಗಬೇಕು ಎಂದು ಉಪನ್ಯಾಸಕಿ ಚಂದ್ರಪ್ರ¨s ಕಮಲಾಪುರಕರ್ ಹೇಳಿದರು.

 ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಸರ್ಕಾರಿ ಪಿಯು ಕಾಲೇಜು, ಪ್ರೌಢಶಾಲೆ, ಉರ್ದು ಶಾಲೆ ಮತ್ತು ಮೌಲಾನಾ ಆಜಾದ್ ಪ್ರೌಢಶಾಲೆ ಇವುಗಳು ಸಂಯುಕ್ತವಾಗಿ ಸೋಮವಾರ ಏರ್ಪಡಿಸಿದ್ದ ‘66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ’ದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪೂಜೆ, ರಾಷ್ಟ್ರೀಯ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಯಿಮಾ ನಾಹಿದ್, ಎಚ್.ಬಿ.ಪಾಟೀಲ, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ಪ್ರ.ದ.ಸ ನೇಸರ ಬೀಳಗಿ, ಮೌಲಾನಾ ಆಜಾದ ಪ್ರೌಢಶಾಲೆಯ ಪ್ರಾಚಾರ್ಯೆ ಲಕ್ಷ್ಮೀ ನಾಯಕ, ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿಕರ್, ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಪಾಟೀಲ, ಸಹ ಶಿಕ್ಷಕರುಗಳಾದ ಸೋಮಶೇಖರ ಪಾಟೀಲ, ದಯಾನಂದ ಹಿರೇಮಠ, ಅನೀಲಕುಮಾರ ಸರಾಫ್, ತನುಜಾರಾಣಿ ಎಸ್., ಶಾಂತಾಬಾಯಿ ಮರ್ಚಲ್, ಚಿನ್ನು ಪಟೇಲ್, ಸುಮಿತ್ರಾ ಹತಗುಂದಿ, ದೇವರಾಜ ಹೊಸಮನಿ, ಮಲ್ಲಿಖ್ ಷರಾಫ್, ನಗ್ಮಾ ಶೇಖ್, ಸಿಬ್ಬಂದಿಗಳಾದ ಭೀಮಣ್ಣ ಪಾಟೀಲ, ಲಾಲುಸಿಂಗ ರಾಠೋಡ, ಮೆಹಬೂಬಸಾಬ್ ಉಸ್ತಾದ, ಮಹ್ಮದ್ ಮೈನೂದ್ದೀನ್ ಸೇರಿದಂತೆ ಕಾಲೇಜು, ಪ್ರೌಢಶಾಲೆ, ಉರ್ದು ಶಾಲೆ ಮತ್ತು ಮೌಲಾನಾ ಆಜಾದ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.