ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಸನ್ಮಾನ

ಮುದ್ದೇಬಿಹಾಳ:ನ.2: ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ರವಿವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ ಆಗಿ ಕಾರ್ಯನಿರ್ವಹಿಸಿದ ತಾಲೂಕಿನ ತಾಳಿಕೋಟಿ,ನಾಲತವಾಡ ಸೇರಿದಂತೆ ಎಲ್ಲ ಪತ್ರಕರ್ತರಿಗೆ ತಾಲೂಕಾ ಆಡಳಿತವತಿಯಿಂದ ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ಅವರ ನೇತೃತ್ವದಲ್ಲಿ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು, ದಕ್ಷಿಣ ಭಾರತದಲ್ಲಿಯೆ ಕರ್ನಾಟಕ ರಾಜ್ಯವು ಸಂಪಧ್ಭರಿತ ರಾಜ್ಯವಾಗಿದೆ. ಇಡಿ ವಿಶ್ವದಲ್ಲಿಯೆ ಪಾರ್ಲಿಮೇಂಟ್ ವ್ಯವಸ್ಥೆಯ ಕಲ್ಪನೆ ಮೂಡಿಸಿದ ವಿಶ್ವಗುರು ಬಸವಣ್ಣನವರು ಜನಿಸಿದ ನಾಡು ಕರ್ನಾಟಕವಾಗಿದ್ದು ಕರ್ನಾಟಕ ಜನತೆ ಯಾವುದರಲ್ಲಿಯು ಕಡಿಮೆ ಇಲ್ಲ ಎಂದು ಇಡು ಜಗತ್ತಿಗೆ ತೋರಿಸಿಕೋಟ್ಟಿದ್ದಾರೆ ಎಂದು ಅವರು ಹೇಳಿದರು.
ಇತಿಹಾಸದಲ್ಲಿ ಕರ್ನಾಟಕ ಅರಸರು, ರಾಜ ಮಹಾರಾಜರು ಉತ್ತರ ಭಾರತ ಸೇರಿದಂತೆ ವಿವಿಧ ದೇಶಗಳನ್ನು ಕೂಡಾ ಆಳಿದ ನಾಡು ಕರ್ನಾಟಕ ರಾಜ್ಯ ಮೋದಲಿನಿಂದಲು ನೈಸರ್ಗಿಕವಾಗಿ ಶ್ರೀಮಂತವಾಗಿದೆ. ಕರ್ನಾಟಕವು ಹೆಚ್ಚು ಕಪ್ಪುಮಣ್ಣಿನಿಂದ ಕೂಡಿರುವದರಿಂದ ಕರ್ನಾಟಕ ಎಂಬ ಹೆಸರು ಬಂದಿದೆ. ಸಂವಿಧಾನದ ನಾಲ್ಕನೆ ಅಂಗವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಸೇವೆಯು ಅನನ್ಯವಾಗಿದೆ. ಕೊರೊನಾ ಸಮಯದಲ್ಲಿ ಪತ್ರಕರ್ತರು ಹಗಲಿರಳು ಎನ್ನದೆ ಜನತೆಗೆ ಸುದ್ದಿ ಬಿತ್ತರಿಸು ಕಾರ್ಯ ಮಾಡಿರುವದು ಸಾಮಾನ್ಯವಾದುದಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಮಹಾಬಲೇಶ ಗಡೇದ, ನಾರಾಯಣ ಮಾಯಾಚಾರಿ, ಮಾರುತಿ ಹಿಪ್ಪರಗಿ, ಪುಂಡಲಿಕ ಮುರಾಳ, ಪರಶುರಾಮ ಕೋಣ್ಣೂರ, ಅಂಬಾಜಿ ಘೋರ್ಪಡೆ, ಶಂಕರ ಹೆಬ್ಬಾಳ,ಮಕಬುಲ್ ಬನ್ನೆಟ್ಟಿ, ಮಂಜುನಾಥ ಚಲವಾದಿ,ಗುರುನಾಥ ಕತ್ತಿ, ಮೆಹಬೂಬ ಹಳ್ಳೂರ, ಶಿವು ಶಾರದಳ್ಳಿ, ಮುತ್ತು ವಡವಡಗಿ,ಯುನಸ್ ಮೂಲಿಮನಿ,ಬಸವರಾಜ ಕುಂಬಾರ, ಕೃಷ್ಣಾ ಕುಂಬಾರ, ಸಿದ್ದು ಚಲವಾದಿ,ರವಿ ಕುಂಬಾರ, ಚೇತನ ಕೆಂದುಳಿ, ಬಸವರಾಜ ಹುಲಗಣ್ಣಿ, ಸಚಿನ ಚಲವಾದಿ, ರವಿ ಕುಂಬಾರ, ಮುತ್ತು ಬಿರಗೋಂಡ, ಸಚಿನ ಲಮಾಣಿ, ಶ್ರೀಪಾದ ಜಂಬಗಿ,ಬಸವರಾಜ ಯಂಕಂಚಿ, ನೂರೆನಬಿ ನದಾಪ, ಅಮೀನಸಾ ಮುಲ್ಲಾ, ರವಿ ನಂದೆಪ್ಪನವರ ಸೇರಿದಂತೆ ತಾಲೂಕಿನ ವಿವಿಧ ಪತ್ರಕರ್ತರನ್ನು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ,ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ತಹಶೀಲ್ದಾರ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಗ್ಮೋರೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಆರೋಗ್ಯಾಧಿಕಾರಿ ಸತೀಶ ತಿವಾರಿ, ಪುರಸಭೆ ಸದಸ್ಯರಾದ ಮೆಹಬೂಬ ಗೋಳಸಂಗಿ, ರಿಯಾಜ ಡವಳಗಿ, ಅಶೋಕ ವನಹಳ್ಳಿ, ಚನ್ನಪ್ಪ ಕಂಠಿ, ಭಾರತಿ ದೇಗಿನಾಳ, ಸಂಗೀತಾ ದೇವರಹಳ್ಳಿ, ಕನ್ನಡಪರ ಸಂಘಟನೆಯ ಪ್ರಕಾಶ ಕೆಂದುಳಿ, ಸಂಗಯ್ಯ ಸಾರಂಗಮಠ, ಅರುನ ಪಾಟೀಲ, ಕಿರಣ ಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಟಿ.ಡಿ.ಲಮಾಣಿ ನಿರೂಪಿಸಿ ವಂದಿಸಿದರು.