ಕನ್ನಡ ರಾಜ್ಯೋತ್ಸವ ಆಚರಣೆ

ಕೋಲಾರ ನ,೨:ನೆಲಗಂಗಮ್ಮ ಚಾರಿಟಬಲ್ ಟ್ರಸ್ಟ್ ಮತ್ತು ನವ ಚೇತನ ಅಂಬೇಡ್ಕರ್ ಯುವಕರ ಸಂಘ ಹಾರೋಹಳ್ಳಿ ರವರ ಆಶ್ರಯದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಮಾಕೊಂಡಪ್ಪ ಮಾತನಾಡಿ ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಪ್ರತಿಯೊಬ್ಬರನ್ನು ಕನ್ನಡ ಮಾತನಾಡುವುದನ್ನು ಕಲಿಯಬೇಕು. ಕನ್ನಡ ಬಾಷೆ ಘೋಷಣೆ ಮಾಡುವ ಬಗ್ಗೆ ಇನ್ನು ಅನೇಕ ಕನ್ನಡ ಕಾರ್ಯಕ್ರಮಗಳು ಅತಿ ಹೆಚ್ಚು ಯುವಕರು ಮಾಡಬೇಕೆಂದು ತಿಳಿಸಿದರು.
ಸಂಜೆ ನಿಗಧಿ ಪಡೆಸಲಾಗಿದ್ದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಜಡಿ ಮಳೆಯ ಕಾರಣ ನ ೯ರ ಬುಧವಾರ ಸಂಜೆಗೆ ಮುಂದೂಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುನಿಯಪ್ಪ ನಾರಾಯಣಪ್ಪ, ಮುನಿವೆಂಕಟಪ್ಪ, ಮಾಕೊಂಡಪ್ಪ, ಪಾಪಣ್ಣ, ಗಂಗಪ್ಪ ವಕೀಲರು ನಾರಾಯಣಸ್ವಾಮಿ, ಎಂ ಶ್ರೀನಿವಾಸ್, ವಿ.ಶ್ರೀನಿವಾಸ್ ಇನ್ನು ಹಲವು ಮುಖಂಡರುಗಳು ಹಾಗೂ ಯುವಕರು ಭಾಗವಹಿಸಿದ್ದರು.