ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಧಕರಿಗೆ ಸನ್ಮಾನ

ಅಫಜಲಪುರ:ನ.4:ಅಫಜಲಪುರ ಪಟ್ಟಣದ ಮಾತೋಶ್ರೀ ಮನೋರಮಾ ಮಧ್ವರಾಜ ಪ್ರೌಢ ಶಾಲೆಯಲ್ಲಿ ರವಿವಾರದಂದು 65ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಯಂಕಂಚಿ ನೆರವೇರಿಸಿದರು.

ಸಮಾರಂಭದಲ್ಲಿ ಅಫಜಲಪುರ ತಾಲೂಕಿನ ಗೌರ (ಬಿ) ಗ್ರಾಮದ ಪ್ರವೀಣ.ವಿ.ಗಂಟೆ ಅವರು ಇತ್ತೀಚಿಗೆ ಪಿ.ಎಸ್.ಐ. ಹುದ್ದೆಗೆ ನೇಮಕವಾಗಿದ್ದರಿಂದ ಹಾಗೂ ದ್ವಿತೀಯ ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ಅಫಜಲಪುರ ಪಟ್ಟಣದ ವಿದ್ಯಾರ್ಥಿನಿ ಕು.ಆರತಿ ದೀಲಪ ಕಳಸಿ ಅವರಿಗೆ ಸನ್ಮಾನಿಸಿದರು.

ಸಂಸ್ಥೆ ಅಧ್ಯಕ್ಷರಾದ ಮಲ್ಲಿಕಾರ್ಜುನ ಯಂಕಂಚಿ ಮಾತನಾಡಿ ಪ್ರತಿಯೊಬ್ಬರು ಕನ್ನಡ ಭಾಷೆಗೆ, ಕನ್ನಡ ನಾಡಿಗೆ ಪ್ರಥಮ ಆದ್ಯತೆ ನೀಡಬೇಕು. ಇತರ ಭಾಷೆಗಳನ್ನು ವ್ಯವಹಾರಕ್ಕಾಗಿ ಕಲಿಯಬೇಕು ಎಂದು ತಿಳಿಸಿದ ಅವರು ಸಂಸ್ಥೆ ಮುಂದೆ ಬರಬೇಕಾದರೆ ಶಿಕ್ಷಕರು ಹಾಗೂ ಸಿಬ್ಬಂದಿಗಳು ಪ್ರಾಮಾಣಿಕ ಕೆಲಸ ಮಾಡಬೇಕು. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮಕ್ಕಳ ಜೊತೆ, ಪಾಲಕರ ಜೊತೆ ಉತ್ತಮ ಸಂಬಂಧಗಳು ಹೊಂದಬೇಕು ಎಂದು ಕಿವಿ ಮಾತು ಹೇಳಿದರು.

ಮು.ಗು.ಗುರು ಬಸವರಾಜ ನಿಂಬರ್ಗಿ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದರು ಸಂಸ್ಥೆ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆ ಮಾಜಿ ಅಧ್ಯಕ್ಷ ಅವಣ್ಣ ಮ್ಯಕೇರಿ, ಸಂಸ್ಥೆ ಕಾರ್ಯದರ್ಶಿ ಬಸವರಾಜ ಸಪ್ಪನಗೂಳ ತಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ಮಂಗೂಳರ, ಕೋಲಿ ಸಮಾಜದ ಕಾರ್ಯದರ್ಶಿ ದೀಲಿಪ ಕಳಸಿ, ರವಿ ಕಳಸಿ, ಶಿಕ್ಷಕರಾದ ಎಸ್.ಎಮ್.ಕರಿಕಲ್, ಎಮ್.ಕೆ.ಪಡಸಲಗಿ,ಎ.ಸಿ. ಕುಲಕರ್ಣಿ, ಎ.ವಿ.ರಾಠೋಡ, ಸಂಗೀತಾ ನಾಟೀಕಾರ,ಜಿ.ವಿ.ದಳವಾಯಿ, ಪ್ರಭಾಕಾರ ಯಂಕಂಚಿ, ರಮೇಶ ಇಂಗಳಗಿ ಸೇರಿದಂತೆ ಅನೇಕರಿದ್ದರು.