ಕನ್ನಡ ರಥಯಾತ್ರೆ, ಸಂವಿಧಾನ ಜಾಥಾ ಮಾರ್ಗ ಪರಿಶೀಲನೆ

ಕೊಲ್ಹಾರ:ಫೆ.5: ಸರ್ಕಾರ ಸರಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ ಕನ್ನಡ ಜ್ಯೋತಿ ರಥಯಾತ್ರೆ ಫೆಬ್ರವರಿ 5 ಹಾಗೂ ಸಂವಿಧಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಸ್ತಬ್ದಚಿತ್ರ ಫೆಬ್ರವರಿ 7 ರಂದು ಕೊಲ್ಹಾರ ತಾಲೂಕಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ಹಾಗೂ ಪ.ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ ರವಿವಾರ ಪಟ್ಟಣದಲ್ಲಿ ಸಂಚರಿಸಿ ಮಾರ್ಗ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎನ್.ಕೆ ನದಾಫ, ಗ್ರಾಮ ಆಡಳಿತಾಧಿಕಾರಿ ಜಿ.ಎನ್ ಜಿಡ್ಡಿಮನಿ, ಸಿಬ್ಬಂದಿಗಳಾದ ಎಂ.ಎ ಚುಳಚಕಡ್ಡಿ, ಪ್ರವೀಣ ಕೋಲಕಾರ ಹಾಗೂ ಇತರರು ಇದ್ದರು.