ಕನ್ನಡ ಮಾಧ್ಯಮ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿದೆ


ನವಲಗುಂದ,ಫೆ.26: ಗ್ರಾಮೀಣ ಮಟ್ಟದಲ್ಲಿ ಇಂದಿಗೂ ಕನ್ನಡ ಮಾಧ್ಯಮದ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದು ಕ್ಷೇತ್ರ ಶಿಕ್ಷಣ ಇಲಾಖೆಯ ಕ್ಷೇತ್ರ ಸಮೂಹ ಸಂಪನ್ಮೂಲ ಅಧಿಕಾರಿ ಶ್ರೀನಿವಾಸ ಅಮಾತೆಣ್ಣವರ ಹೇಳಿದರು.
ಅವರು ಪಟ್ಟಣದ ಶ್ರೀ ಅಜಾತ ನಾಗಲಿಂಗೇಶ್ವರ ಸಭಾ ಭವನದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಧಾರವಾಡ ಹಾಗೂ ಕ್ಷೇತ್ರ ಶಿಕ್ಷಣಾಧಿಕರಿಗಳ ಕಾರ್ಯಾಲಯ ನವಲಗುಂದ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕಾ ಮಟ್ಟದ ಪಾಲಕರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಅಸಗಮಿಸಿದ್ದ ಹ್ಯೂಮನ್ ಮೈಂಡಸಟ್ ಸಂಸ್ಥೆಯ ನಿರ್ದೇಶಕರಾದ ಮಹೇಶ ಮಾಶಾಳ ಮಾತನಾಡಿ ಮಕ್ಕಳ ಶೈಕ್ಷಣಿಕ ಬದುಕಲ್ಲಿ ಪಾಲಕರ ಪಾತ್ರ ಜವಾಬ್ದಾರಿ ಕುರಿತು ಮಕ್ಕಳ ಶೈಕ್ಷಣಿಕ ಬದುಕಲ್ಲಿ ಪಾಲಕರ ಕರ್ತವ್ಯ ಜವಾಬ್ದಾರಿಗಳ ಕುರಿತು ಪಾಲಕರ ಮನಮುಟ್ಟುವಂತೆ ಅರ್ಥೈಸಿದರು
ಜಯಂತ್, ಬಸವರಾಜ ಕಳ್ಳಿಮನ, ಜಯಕುಮಾರ್, ಶ್ರೀಕಾಂತ್ ಹಂಜಿ, ಉಮೇಶ ಪತ್ತಾರ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು