ಕನ್ನಡ ಮಾತೆಯ ಮಕ್ಕಳಾದ ನಾವು ನಮ್ಮ ಭಾಷೆಯನ್ನು ಗೌರವಿಸಿ ಬೆಳೆಸಿ, ಉಳಿಸುವ ಕೆಲಸ ಮಾಡಬೇಕು: ಎಂ.ಶಿವಮೂರ್ತಿ

ಕೆ.ಆರ್.ಪೇಟೆ. ನ.02:- ಕನ್ನಡ ಬಾಷೆಗೆ ತನ್ನದೇ ಆದ ಇತಿಹಾಸಿವಿದ್ದು, ಕನ್ನಡ ಮಾತೆಯ ಮಕ್ಕಳಾದ ನಾವು ನಮ್ಮ ಭಾಷೆಯನ್ನು ಗೌರವಿಸಿ ಬೆಳೆಸಿ, ಉಳಿಸುವ ಕೆಲಸ ಮಾಡಬೇಕು ಎಂದು ತಹಶಿಲ್ದಾರ್.ಎಂ.ಶಿವಮೂರ್ತಿ ಕರೆ ನೀಡಿದರು.
ಅವರು ಪಟ್ಟಣಡ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ದ್ವಜ ಸಂದೇಶ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟ ಪ್ರಾಂತ್ಯಗಳು ಸ್ವಾತಂತ್ರದ ನಂತರ 1950 ರಲ್ಲಿ ಬಾರತ ಗಣರಾಜ್ಯವಾದ ನಂತರ ಭಾಷಾವಾರು ಪ್ರಾಂತ್ಯಗಳಾಗಿ ವಿಭಾಗಿಸಲ್ಪಟ್ಟವು, ನಂತರ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು, ಇದಾದ ನಂತರ 1 ನವಂಬರ್ 1973 ರಂದು ಕರ್ನಾಟಕ ರಾಜ್ಯ ಉದಯವಾಯಿತು. ಇದರ ಹಿಂದೆ ನೂರಾರು ಸಾಧಕರು ಕನ್ನಡ ನಾಡಿನ ಭಾಷೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಬಾಷೆ ಉಳಿಸುವ ಕೆಲಸಗಳನ್ನುನಾವೆಲ್ಲರೂ ಸಂಘಟಿತರಾಗಿ ಮಾಡಬೇಕು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲಸ.ದೇವರಾಜು, ಜಿಪಂ ಮಾಜಿ ಸದಸ್ಯ ರಾಮದಾಸ್, ಕಸಾಪ ಮಾಝಿ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಬಾ ಅಧ್ಯಕ್ಷೆ ಮಹಾದೇವಿನಂಜುಂಡ ದ್ವಜಾರೋಹಣ ನೆರವೇರಿಸಿದರು. ಪುರಸಬಾ ಉಪಾದ್ಯಕ್ಷೆ ಗಾಯಿತ್ರಮ್ಮ, ತಾಲ್ಲೂಕು ಪಂಚಾಯಿತಿ ಇಓ ಹೆಚ್.ಎಸ್.ಚಂದ್ರಶೇಖರ್, ಪುರಸಬಾ ಸದಸ್ಯರಾದ ಕೆ.ಎಸ್.ಸಂತೋಷ್ ಕುಮಾರ್, ಶಾಮಿಯಾನ ತಿಮ್ಮೇಗೌಡ. ಹೆಚ್.ಆರ್.ಲೋಕೇಶ್, ಗಿರೀಶ್, ಕ್ಷೇತ್ರಶಿಕ್ಷನಾಧಿಕಾರಿ ಬಸವರಾಜು, ಬಿಆರ್‍ಸಿ ಲಿಂಗರಾಜು, ಟಿಹೆಚ್‍ಓ ಡಾ.ಮಧುಸೂಧನ್, ಸಿಡಿಪಿಓ ದೇವಕುಮಾರ್, ಪೊಲೀಸ್ ನಿರೀಕ್ಷಕ ಎಂ.ಕೆ.ದೀಪಕ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ. ಬಿಸಿಎಂ ಅಧಿಕಾರಿ ಎಂ.ಎನ್.ವೆಂಕಟೇಶ್, ಸಮಾಜಕಲ್ಯಾನಾಧಿಕಾರಿ ಮಹೇಶ್, ಎಇಇ ಈರಣ್ಣ, ಆರ್.ಎಫ.ಓ ಗಂಗಾಧರ್, ಪುರಸಬಾ ಮುಖ್ಯಾಧಿಕಾರಿ ಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.