ಕನ್ನಡ ಮಾತನಾಡಲು ಹಿಂಜರಿಯುವ ಮನೋಭಾವ ಸರಿಯಲ್ಲ

ಮೈಸೂರು,ನ.9:- ಅರವಿಂದ ನಗರ ನಿವಾಸಿಗಳಿಂದ ಅರವಿಂದ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಭಾವ-ವೈಭವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಕನ್ನಡದ ಅಸ್ಮಿತೆ ಸದಾ ಇರಬೇಕು’ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ನಮ್ಮಲ್ಲಿ ಕನ್ನಡದ ಅಸ್ಮಿತೆ ಸದಾ ಇರಬೇಕು’ ಎಂದು ಹೇಳಿದರು.
ಕನ್ನಡದ ನೆಲದಲ್ಲಿ ಜನಿಸಿದ ನಾವು ಬೇರೆ ಬೇರೆ ಭಾಷೆಗಳನ್ನು ಗೌರವಿಸಬೇಕು. ಆದರೆ, ಕನ್ನಡ ನಮ್ಮ ಉಸಿರಾಗಿರಬೇಕು. ಕನ್ನಡ ಭಾಷೆಗೆ ನಶಿಸುವ ಆತಂಕವಿಲ್ಲ. ಆದರೆ, ಹೆಚ್ಚೆಚ್ಚು ಬಳಸುವಂತಾಗಬೇಕು. ಕನ್ನಡ ಮಾತನಾಡಲು ಹಿಂಜರಿಯುವ ಮನೋಭಾವ ಸರಿಯಲ್ಲ’ಕನ್ನಡ ಕುಟುಂಬದ ಭಾಷೆ. ಅದು ನಮ್ಮ ಹಕ್ಕು. ಅದನ್ನು ಸದಾ ಬಳಸಿಕೊಳ್ಳಬೇಕು; ರಕ್ಷಿಸಿಕೊಳ್ಳಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಕನ್ನಡ ಶಾಲು ಹಾಗೂ ಕನ್ನಡ ಪುಸ್ತಕ ನೀಡಲಾಯಿತು.
ಇದೇ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಜಗದೀಶ್ ,ಶೋಭಾ, ಶಿವೆ ಗೌಡ್ರು, ಮಲ್ಲೇಶ್,ಮುನ್ನ ರಾಜೇಶ್ , ಗಿರೀಶ್ ಗೌಡ, ಜೋಗಿ ಸುನೀಲ್ ಇನ್ನಿತರರು ಹಾಜರಿದ್ದರು.