ಕನ್ನಡ ಮರೆತ ಯುವ ಜನ ಸೇವಾ ಇಲಾಖೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.04: ನಾಡಿನ ಕನ್ನಡ ಭಾಷೆ ಸರ್ಕಾರದ ಆಡಳಿತ ಬಳಕೆಯಲ್ಲಿ ಆಧ್ಯತೆ ಇರಬೇಕು ಎಂಬುದು ಆದೇಶ. ಆದರೆ ಯುವ ಜನಸೇವಾ ಇಲಾಖೆಗೆ ಇದು ಸಂಬಂಧಿಸಿಲ್ಲವೇ ಎಂಬಂತಿದೆ ಈ ಜಾಹಿರಾತು.
ಬೇಸಿಗೆ ಅವಧಿಯ ರಜಾ ದಿನಗಳಲ್ಲಿ ಯುವಕರು ಮಕ್ಕಳಿಗೆ ಈಜು ಮತ್ತು ಬ್ಯಸಡ್ ಮಿಂಟನ್, ಷಟಲ್ ಮೊದಲಾದ ತರಬೇತಿ ಶಿಬಿರದ ಜಾಹಿರಾತನ್ನು ನಗರದ ಪಾಲಿಕೆಯ ಹಳೇ ಕಚೇರಿ ಬಳಿ ಬರೀ ಇಂಗ್ಲೀಷ್ ಭಾಷೆಯಲ್ಲಿ  ಹಾಕಲಾಗಿದೆ.
ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಎಂಬ ಒಂದು ವಾಕ್ಯ ಬಿಟ್ಟರೆ ಉಳಿದಿದ್ದೆಲ್ಲ ಬರೀ ಇಂಗ್ಲೀಷ್ ನಲ್ಲಿದೆ.
ಸರ್ಕಾರಿ ಇಲಾಖೆಯೇ ಹೀಗೆ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿದರೇ ಹೇಗೆ ಎಂಬುದು ಕನ್ನಡಾಭಿಮಾನಿಗಳ ಪ್ರಶ್ನೆಯಾಗಿದೆ.
ಜಾಹೀರಾತು ಬ್ಯಾನರ್ಗಳು, ಬಳ್ಳಾರಿಯ ಜಿಲ್ಲಾ ಬೇಸಿಗೆಯಲ್ಲಿ  ಮತ್ತು ಕನ್ನಡಪರ ಸಂಘಟನೆಗಳು ಕಣ್ಣು ಮುಚ್ಚಿ ಕುಳಿತಿವೆಯ.