ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕುವೆಂಪುಜನ್ಮ ದಿನಾಚರಣೆ

????????????????????????????????????

ಬಳ್ಳಾರಿ,ಡಿ.30:ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆವರಣದಲ್ಲಿ ನಿನ್ನೆ ಕುವೆಂಪು ಅವರ ಜನ್ಮ ದಿನಾಚರಣೆ ಸರಳವಾಗಿ ಆಚರಿಸಲಾಯಿತು.ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ವರ ರಂಗಣನವರ್ ಅವರು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿದ ಅವರು ಕುವೆಂಪುರವರ ಸಾಹಿತ್ಯದಲ್ಲಿ ದೇಶಭಕ್ತಿ, ಕನ್ನಡ ಪ್ರೀತಿ, ಭಾಷಾ ಪ್ರೇಮ, ನಿಸರ್ಗ ಪ್ರೇಮ ಸೇರಿದಂತೆ ಅನೇಕ ವಿಷಯಗಳು ಅಡಕವಾಗಿವೆ. ಕನ್ನಡ ನಾಡು ನುಡಿಗಾಗಿ ಸಾಕಷ್ಟು ಹೋರಾಟ ಮಾಡಿದ ಹಿರಿಯ ಸಾಹಿತಿ ಕುವೆಂಪು ಆಗಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ, ಕಲಾವಿದರಾದ ಮಂಜುನಾಥ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಹಾಗೂ ಕಲಾವಿದರು ಮತ್ತಿತತರರು ಇದ್ದರು.