ಕನ್ನಡ ಮತ್ತು ರಾಜಕುಮಾರ್ ಒಂದೇ ನಾಣ್ಯದ 2 ಮುಖಗಳು

ಮೈಸೂರು:ಏ:23: ಡಾ.ರಾಜ್ ಕುಮಾರ್ ಸೇವಾ ಸಮಿತಿ ಸಂಘದ ವತಿಯಿಂದ ರಾಜ್ ಕುಮಾರ್ ಜನ್ಮದಿನದ ಪ್ರಯುಕ್ತ
ವಸ್ತುಪ್ರದರ್ಶನ ಆವರಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ನೀಡಿ ಮಾತನಾಡಿದ ನಂತರ ಮಾತನಾಡಿದ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ರಘು ಕೌಟಿಲ್ಯ, ಡಾ ರಾಜ್ ಕುಮಾರ್ ರವರು ಬದುಕಿ ನಡೆದಂಥ ಸಂದೇಶ ನಮಗೆ ಎದುರಿಸಲು ಈ ಕರೋನವನ್ನು ಎದುರಿಸಲು ಸ್ಫೂರ್ತಿಯನ್ನು ತರುವಂತದ್ದು ಹೀಗೆಂದರೆ ಆಡು ಮುಟ್ಟದ ಸೊಪ್ಪಿಲ್ಲ ದಟ್ಟ ಡಾಕ್ಟರ್ ರಾಜ್ ಕುಮಾರ್ ರವರು ಅಭಿನಯಿಸದ ಪಾತ್ರವಿಲ್ಲ ಇದನ್ನ ಮಾರ್ಪಾಡು ಮಾಡಿಕೊಂಡು ಹೇಳುವುದಾದರೆ ಹಾಗಾಗಿ ಈ ದಿನದ ಸುಸಂದರ್ಭದಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವಂತಹ ಸೇವೆ ಸಲ್ಲಿಸಿ ಅನೇಕ ಕ್ಷೇತ್ರಗಳಲ್ಲಿ ಅದು ಸೇವೆ ಸಲ್ಲಿಸಿ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಸಾಧಕರಿಗೆ ಡಾಕ್ಟರ್ ರಾಜ್ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ಮಾಡಿದ್ದೀರಾ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ ಇದು ಎಲ್ಲರೂ ಶ್ಲಾಘನೀಯವಾಗಿದೆ ಮೆಚ್ಚುವಂಥದ್ದು ಈ ಸುಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಕರೋನ ಎರಡನೇ ಅಲೆ ಇಡೀ ರಾಜ್ಯವನ್ನು ಆತಂಕದಿಂದ ಆವರಿಸಿದೆ ನಾವುಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕೆಲಸ ಕಾರ್ಯಗಳನ್ನು ರಾಜ್ ರವರ ಅಭಿಮಾನದಿಂದ ಮಾಡಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಇಂದಿನ ಈ ಕೆಟ್ಟ ದಿನ ಸಂಬಂಧಗಳು ಬಂಧು ಬಳಗಗಳು ಬಹಳ ಕೊನೆ ಹಂತಕ್ಕೆ ತಲುಪುವಂತಹ ಸ್ಥಿತಿ ಕುರಾನಿನ ಉಂಟಾಗಿದೆ ಈ ತೀವ್ರತೆಯ ಸನ್ನಿವೇಶವನ್ನು ತೊಲಗಿಸಲು ಪ್ರತಿಯೊಬ್ಬರು ಶ್ರಮಿಸಬೇಕಾದದ್ದು ಆದ್ಯ ಕರ್ತವ್ಯ ಇಂತಹ ದುಸ್ಥಿತಿ ನಮ್ಮಗಳ ಕಣ್ಣು ಮುಂದೆ ಬಂದದ್ದು ವಿಷಾದಕರ ಮೌಲ್ಯದ ಅರಿವನ್ನು ಪರೋಕ್ಷವಾಗಿ ಕರೋನ ಜನರಿಗೆ ಕಲಿಸುತ್ತಿದೆ ಇಂತಹ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ಮ ಜೀವನದ ಉದ್ದಕ್ಕೂ ಅಳವಡಿಸಿ ಕೊಳ್ಳು ವಂತಹ ವಿಚಾರಧಾರೆಯನ್ನು ಡಾಕ್ಟರ್ ರಾಜ್ ಕುಮಾರ್ ರವರು ತಮ್ಮ ನಟನೆಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಇದನ್ನೇ ಅವರು ಸಾರುತ್ತಿದ್ದರು ಎಂದರು.
ಕನ್ನಡ ಎಂದರು ಡಾ.ರಾಜ್; ಕನ್ನಡ ಮತ್ತು ರಾಜಕುಮಾರ್ ಒಂದೇ ನಾಣ್ಯದ 2 ಮುಖಗಳು ಏಕೆಂದರೆ ಮಗ ಸಲ್ಲಿಸಿದ ಯಾರನ್ನಾದರೂ ಗುರುತಿಸಬೇಕೆಂದರೆ ದೊಡ್ಡ ದೊಡ್ಡ ಸಾಧಕರನ್ನು ಗುರುತಿಸಬೇಕೆಂದರೆ ಕುಲದ ನೆಲೆಯನ್ನು ಹುಡುಕುತ್ತೇವೆ ಕನಕದಾಸರು ಕುಲದ ನೆಲೆಯನ್ನು ಏನಾದರೂ ಬಲ್ಲಿರಾ ಎಂದರೆ ಕನಕದಾಸರನ್ನು ಕೂಡ ನಾವು ಕುಲದ ನೆಲೆಯನ್ನು ಹುಡುಕಕ್ಕೆ ಹೋಗುತ್ತೇವೆ ಆದರೆ ಕುಲದ ನೆಲೆ ಇಲ್ಲದೆ ಕನ್ನಡದ ನೆಲದಲ್ಲಿ ಬದುಕಿ ಬಾಳಿದ ಒಬ್ಬನೇ ವ್ಯಕ್ತಿ ಕರ್ನಾಟಕದಲ್ಲಿ ಎಂದರೆ ಅದು ಡಾ.ರಾಜ್ ಕುಮಾರ್ ಕನ್ನಡ ನುಡಿ ಇದರ ನೈಜವಾದ ರಾಯಭಾರಿಯಾಗಿ ಕನ್ನಡ ಇರುವವರೆಗೆ ರಾಜ್ ಇರುತ್ತಾರೆ ಎಂಬ ಸಂದೇಶದೊಂದಿಗೆ ಇವತ್ತು ಒಂದೊಂದು ದೇಶದಲ್ಲಿ ರಾಷ್ಟ್ರಕವಿ ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಕೊಡುಗೆ ಕೊಟ್ಟು ವಿಶ್ವಮಾನ್ಯರಾದರೆ ವಿಶ್ವ ಕುವೆಂಪು ರವರು ಕಲ್ಪಿಸಿದಂತಾ ಒಬ್ಬ ವಿಶ್ವಮಾನವನಾಗಿ ರಾಜ್ ಹೊರಹೊಮ್ಮಿದ್ದು ಕರ್ನಾಟಕದ ಇತಿಹಾಸ ಅತ್ಯಂತ ದೊಡ್ಡ ಹೆಮ್ಮೆಯ ಸಂಗತಿ ಅಂತ ಹೇಳುತ್ತಾ ನಿಮಗೆಲ್ಲರಿಗೂ ರಾಜ್ ನೆನಪು ನಿಮ್ಮ ಹೃದಯದಲ್ಲಿ ಹಸಿರಾಗಿರಲಿ ರಾಜ್ ನೆನಪಲ್ಲಿ ಕರೋನ ಕತ್ತಲೆ ಆದಷ್ಟು ಬೇಗ ತೊಲಗಿ ಹೋಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ಹೇಳಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತಕುಮಾರ್ ಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅನೇಕ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವುದು ಸಮಾಜದ ಆದ್ಯ ಕರ್ತವ್ಯವಾಗಿದೆ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ರೀತಿಯಲ್ಲಿ ಈ ದಿನ ನಟ ರಾಜ್ ಕುಮಾರ್ ರವರ ಜನ್ಮ ದಿನದ ಸ್ಮರಣಾರ್ಥವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸುತ್ತಿರುವುದು ಸಂತಸದ ವಿಚಾರವಾಗಿದೆ ರಾಜ್ ಕುಮಾರ್ ರವರು ಜನಮಾನಸದಲ್ಲಿ ಚಿರಾಯು ಯಾವುದೇ ಕ್ಷೇತ್ರದಲ್ಲಿ ರಾಜ್ ಕುಮಾರ್ ಅವರ ನಟನೆ ಹಾಡು ಜನಜನಿತ ಇಂತಹ ಮೇಧಾವಿಯಾದ ಸರಳ ಸಜ್ಜನಿಕೆಯ ಹೆಸರುವಾಸಿಯಾದ ಡಾಕ್ಟರ್ ರಾಜ್ ಕುಮಾರ್ ಎಂದು ಗರ್ವದಿಂದ ಬೀಗಿದವರಲ್ಲ ಅಭಿಮಾನಿಗಳಿಗೆ ದೇವರ ರೂಪವನ್ನು ಕೊಟ್ಟು ಹೃದಯ ಮಂದಿರದಲ್ಲಿ ಆರಾಧಿಸಿದವರು ಇಂತಹ ಮನಸ್ಥಿತಿ ಇಂದು ಮುಂದು ಎಂದೆಂದೂ ರಾಜ್ ಕುಮಾರ್ ಅವರಿಂದ ನಿರಂತರ ಕೇವಲ ನಟನಾ ಕ್ಷೇತ್ರವಲ್ಲದೆ ಸಾಮಾನ್ಯ ವ್ಯಕ್ತಿಯಾಗಿ ಜನರಿಗೆ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿದ ಜನಸಾಮಾನ್ಯ ನಾಯಕ ಇತ್ತೀಚಿನ ದಿನಗಳಲ್ಲಿ ಸಾಧನೆಯ ಬೆನ್ನಟ್ಟಿದ ವ್ಯಕ್ತಿಗಳ ಜನಸಾಮಾನ್ಯರ ಜೊತೆ ನಡೆದುಕೊಳ್ಳುವ ರೀತಿಯು ಅಪ್ರತಿಮ ಸಾಧಕರಾದ ಡಾಕ್ಟರ್ ರಾಜಕುಮಾರ್ ಅವರ ವ್ಯಕ್ತಿತ್ವದ ರೀತಿಯು ಅಸಾಮಾನ್ಯವಾದುದು ಎಂದರು.
ಕಾರ್ಯಕ್ರಮದಲ್ಲಿ ದೇವರಾಜು ಅರಸು ಹಿಂದುಳಿದ ವರ್ಗಗಳ ನಿಗಮ ಮಂಡಳಿ ಅಧ್ಯಕ್ಷ ಆರ್. ರಘು ಕೌಟಿಲ್ಯ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ, ಬಿಜೆಪಿ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಸಮಾಜ ಸೇವಕರಾದ ಲಯನ್ ವೆಂಕಟೇಶ್, ಡಾ. ರಾಜ್ ಕುಮಾರ್ ಸೇವಾ ಸಮಿತಿ ಸಂಘದ ಕಾರ್ಯಾಧ್ಯಕ್ಷರಾದ ಸುಚೀಂದ್ರ, ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್, ಮಧು ಎನ್ ಪೂಜಾರ್, ಹರೀಶ್ ನಾಯ್ಡು ಹಾಗೂ ಇನ್ನಿತರರು ಹಾಜರಿದ್ದರು.
ಪ್ರಶಸ್ತಿ ಪುರಸ್ಕøತರು: ಕರುನಾಡ ಕಣ್ಮಣಿ ಪ್ರಶಸ್ತಿ ಸ್ವೀಕರಿಸಿದ ರಾಮೇಗೌಡ (ಸಾಮಾಜಿಕ ಕ್ಷೇತ್ರ), ಅಂಬಳೆ ಶಿವಣ್ಣ (ಕಲಾವಿದ ಕ್ಷೇತ್ರ), ಜಿ ಶ್ರೀನಾಥ್ ಬಾಬು (ಸಾಮಾಜಿಕ ಕ್ಷೇತ್ರ), ಚಕ್ರಪಾಣಿ (ಧಾರ್ಮಿಕ ಕ್ಷೇತ್ರ), ಗಿರೀಶ್ (ವೈದ್ಯಕೀಯ ಕ್ಷೇತ್ರ), ಮಂಜುನಾಥ್ (ರಂಗಭೂಮಿ ಕಲಾವಿದ ಕ್ಷೇತ್ರ), ಅಮೂಲ್ಯ (ಕ್ರೀಡಾ ಕ್ಷೇತ್ರ), ಪರಮೇಶ್ವರಯ್ಯ (ಸಾಮಾಜಿಕ ಕ್ಷೇತ್ರ), ಡಾಕ್ಟರ್ ಬಿ ಎಚ್ ಮೋಹನ್ ಕುಮಾರ್ (ಪಶು ವೈದ್ಯ ಕ್ಷೇತ್ರ)ರವರುಗಳಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ವಿತರಿಸಿ ಅಭಿನಂದಿಸಲಾಯಿತು.