ಕನ್ನಡ ಭೂಮಿ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕಲಬುರಗಿ:ನ.1- ಕನ್ನಡ ಭೂಮಿ ಜಾಗೃತಿ ಸಮಿತಿ ಕಚೇರಿಯಲ್ಲಿ ಇಂದು ೬೬ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.ನಂತರ ಮಾತನಾಡಿದ ಅವರು ಕನ್ನಡ ಭಾಷೆ,ನೆಲ,ಜಲ ಉಳಿಸಲು ಎಲ್ಲರೂ ಕಂಕಣಬದ್ಧರಾಗಬೇಕು.ಕನ್ನಡ ಭಾಷೆಯ ಪರಂಪರೆ, ಸಂಸ್ಕೃತಿ ಶ್ರೀಮಂತ ಇತಿಹಾಸ ಹೊಂದಿದೆ.ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಇಚ್ಛಾಶಕ್ತಿ ತೊರಬೇಕು ಎಂದ ಅವರು ಗಡಿಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಲು ನಮ್ಮ ಸಂಘಟನೆ ಮುಂದಾಗಿದೆ ಎಂದು ತಿಳಿಸಿದರು
. ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ ತಂಬೂರಿ, ಯುವ ಮುಖಂಡರಾದ ಶರಣು ಇಕ್ಕಳಕೀಮಠ,ಬಸು ಮಾಲಿಪಾಟೀಲ,ರೇವಣಸಿದ್ಧ ಕಾರಬಾರಿ,ಆಕಾಶ ಕಲಮನಿ,ಶರಣು ಹಂಗರಗಿ ಸೇರಿದಂತೆ ಅನೇಕರು ಇದ್ದರು.