ಕನ್ನಡ ಭಾಷೆ ಸ್ವತಂತ್ರವಾದ ಅಸ್ತಿತ್ವ ಹೊಂದಿತ್ತು

ಧಾರವಾಡ,ಜು16 :ಕನ್ನಡ ಭಾಷೆ ಸಂಸ್ಕøತದಿಂದ ಹುಟ್ಟಿತು ಎಂಬುದು ಸಮಂಜಸವಲ್ಲ. ಕನ್ನಡ ಭಾಷೆ ಸ್ವತಂತ್ರವಾದ ಶಕ್ತಿ ಮತ್ತು ಅಸ್ತಿತ್ವವನ್ನು ಹೊಂದಿತ್ತು. ಕನ್ನಡ ಯಾವತ್ತೂ ದುರ್ಬಲವಾದ ಭಾಷೆಯಲ್ಲಎಂದು ಸಾಹಿತಿ ಆನಂದ ಝಂಜರವಾಡ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ.ರಾ. ಯ.ಧಾರವಾಡ ಕರದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ`ಡಾ. ರಾ. ಯ.ಧಾರವಾಡಕರ ಅವರ ಕನ್ನಡ ಭಾಷಾಶಾಸ್ತ್ರ’ ಎಂಬ ಕೃತಿಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿಇದು ಮಹತ್ವದಕೃತಿಯಾಗಿದ್ದು, ನೆರೆಹೊರೆಯ ಭಾಷೆಗಳು ಕನ್ನಡ ಭಾಷೆಯ ಮೇಲೆ ಬೀರಿದ ಪ್ರಭಾವಗಳೇನು ?ಕನ್ನಡ ಭಾಷೆಅನ್ಯ ಭಾಷೆಗಳ ಮೇಲೆ ಬೀರಿದ ಪ್ರಭಾವಗಳೇನು ಎಂಬುದನ್ನು ಈ ಕೃತಿಯಲ್ಲಿಧಾರವಾಡಕರಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.ನವೋದಯಕಾಲಘಟ್ಟದಲ್ಲಿ ಸಾಹಿತ್ಯ ಕೃಷಿ ಮಾಡಿದರಾ.ಯ.ಧಾರವಾಡಕರಅವರಜೀವನ ಮತ್ತು ಬರಹಗಳನ್ನು ಅವಲೋಕಿಸಿದಾಗ ಭಾಷಾ ಶಾಸ್ತ್ರ ಸಾಹಿತ್ಯಕ್ಕೆಒಲಿದ ಮನೋಭಾವಅವರದಾಗಿತ್ತು.ಭಾಷಾಶಾಸ್ತ್ರವನ್ನುತತ್ವಶಾಸ್ತ್ರ, ಸಾಹಿತ್ಯಶಾಸ್ತ್ರಎರಡುರೀತಿಯಿಂದ ಪ್ರವೇಶ ಮಾಡಬಹುದು.ರಾ. ಯ.ಧಾರವಾಡಕರಅವರು ಸಾಹಿತ್ಯಶಾಸ್ತ್ರದ ಮುಖಾಂತರ ಭಾಷಾ ಶಾಸ್ತ್ರವನ್ನು ಪ್ರವೇಶ ಮಾಡಿರುವುದು ತಿಳಿದು ಬರುತ್ತದೆ.ಭಾಷಾಶಾಸ್ತ್ರವನ್ನು ಶಾಸ್ತ್ರೀಯವಾಗಿ, ಶೈಕ್ಷಣಿಕವಾಗಿಕಾಲದದೃಷ್ಟಿಯಿಂದಅಧ್ಯಯನ ಮಾಡಬೇಕಾದಅಗತ್ಯತೆಯನ್ನುಅರಿತುಕೊಂಡು ಭಾಷಾ ಶಾಸ್ತ್ರವನ್ನು ರಚಿಸಿರುವುದು ಕಂಡು ಬರುತ್ತದೆಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಸಾಹಿತಿಡಾ. ಜಿ. ಎಂ. ಹೆಗಡೆಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕøತಿಗಾಗಿ ಶ್ರಮಿಸಿದವರು ರಾ.ಯ.ಧಾರವಾಡಕರ.ಸಾಹಿತ್ಯದಯಾವದೇ ಪ್ರಕಾರವನ್ನುತೆಗೆದುಕೊಂಡರೂರಸವತ್ತಾದರೀತಿಯಲ್ಲಿ ಪಾಠವನ್ನು ಮಾಡುವಕಲೆಯನ್ನುಧಾರವಾಡಕರಅವರು ಹೊಂದಿದ್ದರು.ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ನಿರಂತರ ಪ್ರೋತ್ಸಾಹ ನೀಡಿದವರು.ಯುವಜನರ ಮನಸ್ಸನ್ನು ಸೆರೆಹಿಡಿಯುವ ಬರವಣಿಗೆಯನ್ನುಅವರ ಪ್ರಬಂಧಗಳಲ್ಲಿ ಕಾಣುತ್ತೇವೆ. ಅವರ ವಿಮರ್ಶಾ ಕೃತಿಗಳನ್ನು ಅವಲೋಕಿಸಿದಾಗ ಅವರೊಬ್ಬ ಶ್ರೇಷ್ಟ ವಿಮರ್ಶಕರಾಗಿದ್ದರುಎಂಬುವದು ಸ್ಪಷ್ಟವಾಗುತ್ತದೆ.ಗಾಂಧಿ ಸಾಹಿತ್ಯವನ್ನು ಬೆಳೆಸಿದ ಕೀರ್ತಿಗೆ ಪಾತ್ರರಾದವರು.ಪತ್ರಿಕಾ ವ್ಯವಸಾಯ, ಪ್ರವಾಸ ಸಾಹಿತ್ಯಕುರಿತು ಕೃತಿಗಳನ್ನು ರಚಿಸಿದ್ದಾರೆ.ಧೀನದಲಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರಾ.ಯ.ಧಾರವಾಡಕರಅವರುಕನ್ನಡ ಹೋರಾಟಗಳಲ್ಲಿ ತಮ್ಮನ್ನುತಾವು ತೊಡಗಿಸಿಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿತ್ವ ಹೊಂದಿದ್ದಧಾರವಾಡಕರಅವರ ಸಮಗ್ರ ಸಾಹಿತ್ಯ ಹೊರಬರಬೇಕಾದಅಗತ್ಯವಿದೆಎಂದರು.
ಇದೇ ಸಂದರ್ಭದಲ್ಲಿ ಬಸವರಾಜ ಸಿರೇಷ ಅವರುತಮ್ಮ ಗುರುಗಳಾದ ರಾ.ಯ.ಧಾರವಾಡಕರಅವರಕುರಿತತಮ್ಮ ಅನುಭವಗಳನ್ನು ಹಂಚಿಕೊಂಡರು. ದತ್ತಿದಾನಿಗಳ ಪರವಾಗಿ ಅನಿಲ ಧಾರವಾಡಕರಅವರುತಮ್ಮತಂದೆಯವರ ಸಾಹಿತ್ಯಕೃಷಿಯನ್ನುಕುರಿತು, ಅವರ ಶೈಕ್ಷಣಿಕಅನುಭವಕುರಿತು ಮಾತನಾಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು.ಶಂಕರ ಹಲಗತ್ತಿ ವಂದನೆ ಸಲ್ಲಿಸಿದರು.ಎಸ್. ಎ. ದೇವಲಾಪೂರ ಪ್ರಾರ್ಥಿಸಿದರು.
ಸುಜಾತಾಧಾರವಾಡಕರ, ಹರ್ಷ ಡಂಬಳ, ಎಂ.ಎಂ ಚಿಕ್ಕಮಠ, ಎಂ. ಬಿ. ಕಟ್ಟಿ, ಎಸ್. ಬಿ.ಗುತ್ತಲ, ಸೋಮಣ್ಣಕುಂದರಗಿ ನಿಂಗಣ್ಣಕುಂಟಿ, ಎಸ್.ಎನ್. ಭಟ್, ಕೆ.ಎಸ್. ಭೀಮಣ್ಣವರ, ಮನೋಜ ಪಾಟೀಲ, ಹಾ.ವೆಂ.ಖಾಕಂಡಕಿ, ಅನಿತಾಚಿಕ್ಕಮಠ, ಎಸ್. ವಿ.ಕಲ್ಲಾಪೂರ ಸೇರಿದಂತೆಅನೇಕರು ಭಾಗವಹಿಸಿದ್ದರು.