ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಕಲೆ ವೈಭವದ ನಾಡು ನಮ್ಮ ಕರ್ನಾಟಕ

ಸೇಡಂ,ನ.1: ತಾಲೂಕಿನ ಎಲ್ಲೆಡೆ 65ನೇ ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕ ರಕ್ಷಣಾ ವೇದಿಕೆಯು ತಾಲೂಕ ಘಟಕದಿಂದ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ಧ್ವಜಾರೋಹಣ ನಂತರ ಮಾಧ್ಯಮದವರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಘಟಕದ ಅಧ್ಯಕ್ಷರಾದ ಅಂಬರೀಶ್ ಎಸ್ ಊಡಗಿ ಮಾತನಾಡಿದ ಅವರು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಲೆ ವೈಭವದಿಂದ ಕೂಡಿದ ನಾಡು ಕಂಡ ಕರ್ನಾಟಕ ಅಂದಿನ ಕಾಲದಲ್ಲಿ ರನ್ನ, ಜನ್ನ, ಪಂಪ,
ಕುವೆಂಪು, ಅಯ್ಯಂಗಾರ್, ಡಿವಿಜಿ ಗುಂಡಪ್ಪ,ಕರ್ನಾಟಕದಲ್ಲಿ ಅನೇಕ ರೀತಿಯ ಕನ್ನಡಕ್ಕಾಗಿ ಹುಟ್ಟಿದಂತಹ ಮಹನೀಯರು, 12 ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು, ಅಲ್ಲಮಪ್ರಭು ಸರ್ವಜ್ಞ, ಅಕ್ಕಮಹಾದೇವಿ, ಅನೇಕ ಶರಣರು ವಚನಗಳ ಮುಖಾಂತರ ಕನ್ನಡ ಸಾಹಿತ್ಯ ಇಡೀ ಜಗತ್ತಿಗೆ ಸಾರಿ ದಂತಹ ಕೀರ್ತಿ ಈ ಕನ್ನಡಕ್ಕೆ ಇದೇ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕಲ್ಪಿಸಿದೆ. ಆದರೂ ಕನ್ನಡ ಭಾಷೆ ಕರ್ನಾಟಕದಲ್ಲಿ ಎಷ್ಟರಮಟ್ಟಿಗೆ ಅಭಿವೃದ್ಧಿ ಹೊಂದುತ್ತಿದೆ ಎಷ್ಟರಮಟ್ಟಿಗೆ ಕನ್ನಡ ಭಾಷೆ ಪ್ರತಿ ಸರ್ಕಾರಿ ಇಲಾಖೆಯಲ್ಲಿ ಬಳಕೆಯಾಗುತ್ತಿದೆ ಕರ್ನಾಟಕದಲ್ಲಿ ಎಷ್ಟು ಇಂಟರ್ಸಿಯಲ್ ಕಂಪನಿಗಳಲ್ಲಿ ಕನ್ನಡ ಎಷ್ಟರಮಟ್ಟಿಗೆ ಬಳಕೆಯಾಗುತ್ತಿದೆ ಇಲಾಖೆಯಲ್ಲಿ ಎಷ್ಟರಮಟ್ಟಿಗೆ ಕನ್ನಡ ಭಾಷೆಯನ್ನು ಬಲಗೊಳ್ಳುತ್ತಿದೆ ಬಳಸುತ್ತಿದ್ದಾರೆ ಎಂಬುದು ಆಲೋಚಿಸುವಂತದು. ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯ, ಜಾಗೃತಿ ಅರಿವು ಕನ್ನಡ ಅಭಿಮಾನಿದ ಗೌರವ ಬೆಳೆಯಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಬಸವರಾಜ್ ಕಾಳಗಿ ಕರ್, ಶೇಖರ್ ನಾಟಿಕರ್, ಅನಿಲ್ ಹಳಿಮನಿ, ಅಶೋಕ್ ಗುತ್ತೇದಾರ್, ಶಿವರಾಜ್ ಊಡುಗಿ, ಚನ್ನವೀರ, ಉಮೇಶ್ ಚೌಹಾಣ್, ಲೋಕೇಶ್ ಹಂದರಕಿ, ರವಿ ಕಾಂಬಳೆ, ಆರೀಫ್ ಖಾನ್, ಮಹೇಶ ದಾರಿ, ಚಂದ್ರು ಹಡಪದ್, ಮಹಮ್ಮದ್ ಫೈಬರ್, ಅನೇಕ ಕನ್ನಡಪರ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.