
ವಿಜಯಪುರ:ಮಾ.24: ಕನ್ನಡ ಭಾಷೆ, ಸಂಸ್ಕøತಿಯನ್ನು ನಾವು ಸದಾ ಉಳಿಸಿಕೊಂಡು ಹೋಗಬೇಕು ಅದು ನಮ್ಮೆಲ್ಲರ ಕರ್ತವ್ಯ ಎಂದು ಸಮ್ಮೇಳನಾಧ್ಯಕ್ಷ ಸಿದ್ದಣ್ಣ ಉತ್ನಾಳ ಹೇಳಿದರು.
ನಗರದ ಕಂದಗಲ್ ಹನುಮಂತರಾಯರಂಗಮಂದಿರದಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಅವರು ಮಾತನಾಡಿದರು.
ವಿಜಯಪುರಜಿಲ್ಲೆಯಲ್ಲಿಅತೀ ಪ್ರಾಚೀನ ಕಾಲದಿಂದಲೂ ವಿದ್ಯಾ ಕೇಂದ್ರಗಳಾದ ಅಗ್ರಹಾರ, ಘಟಿಕಾಸ್ಥಾನ, ಬ್ರಹ್ಮಪುತ್ರಿ ಶಾಲೆಗಳಿದ್ದವು. ರಾಷ್ಟ್ರಕೂಟರಕಾಲದಲ್ಲಿಯೇ ಸಾಲೋಟಗಿ ಶಿಕ್ಷಣ ಕೇಂದ್ರವಾಗಿತ್ತು. ಜಗತ್ತಿಗೆಗಣಿತ ಶಾಸ್ತ್ರಕ್ಕೆ ಸೊನ್ನೆಯ ಪರಿಕಲ್ಪನೆ ಮಾಡಿಕೊಟ್ಟಕ್ರಿ.ಶ 1114ರಲ್ಲಿ ಜನಿಸಿದ ಭಾಸ್ಕರಾಚಾರ್ಯರು ವಿಜಯಪುರಜಿಲ್ಲೆಯ ಬಿಜ್ಜರಿಗಿಯವರೆಂದು ಹೇಳಲು ಹೆಮ್ಮೆಎನ್ನಿಸುತ್ತದೆಎಂದರು.
ಸಾಹಿತ್ಯ ಲೋಕಕ್ಕೆ ವಿಜಯಪುರಜಿಲ್ಲೆಯಕೊಡುಗೆಅಪಾರವಾಗಿದ್ದು, ಅವರಲ್ಲಿ ನೋಡುವುದಾದರೆ ಶ್ರೀರಂಗರ ಭರಮಪ್ಪ ಭೂತ ಪತ್ತೇದಾರಿಕಾದಂಬರಿಯಿಂದ ಪ್ರಾರಂಭವಾದಕಥಾ ಸಾಹಿತ್ಯ, ಸಿಂಪಿಲಿಂಗಣ್ಣನವರ ಬೆಟ್ಟದ ಹೊಳೆ, ರಂ.ಶ್ರೀ ಮುಗಳಿಯವರ ಅನ್ನ, ಲಕ್ಕಪ್ಪ ಶಿರಹಟ್ಟಿಯವರ ಕ್ರಾಂತಿಗಂಗೋತ್ರಿ, ದೇವರಗೆಣ್ಣೂರಕುಸುಮಾಕರ, ಶಂ.ಗು ಬಿರಾದರ, ಡಾ.ಮ.ಗು.ಬಿರಾದರ, ಜೀವಣ್ಣ ಮಸಳಿ, ವಿಜಯ ಸಾಸನೂರ, ನಿರ್ಮಲಾ ಬೀಳಗಿ, ಲಕ್ಷ್ಮೀಬಾಯಿ ಬೊಮ್ಮನಹಳ್ಳಿ ಸೇರಿದಂತೆ ಹಲವಾರು ಮಹಾನ್‍ಕಾದಂಬರಿಕಾರರು ಪ್ರಮುಖರಾಗಿದ್ದಾರೆ.ಇನ್ನುಜಾನಪದ ಸಾಹಿತ್ಯದಲ್ಲಿ ಹಲಸಂಗಿ ಗೆಳೆಯರದ್ದು ಪ್ರಥಮಯುಗವಾದರೆ, ಡಾ.ಬಿ.ಎಸ್.ಗದ್ದಗಿಮಠಅವರದ್ದು ದ್ವಿತಿಯಯುಗಇವರಕನ್ನಡಜನಪದ ಗೀತೆಗಳು ಮತ್ತುಅವರು ಸಂಗ್ರಹಿಸಿದ ಕಂಬಿ ಹಾಡುಗಳು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಂತವು. ಹಾಗೂ ಈಶ್ವರಚಂದ್ರಚಿಂತಾಮಣಿಅವರಗರತಿಯರ ಮನೆಯಿಂದ ಮತ್ತುಡಾ. ಶ್ರೀರಾಮ ಇಟ್ಟನ್ನವರ, ಡಾ.ಎಂ.ಎಂ ಪಡಶೆಟ್ಟಿಜಾನಪದಅಕಾಡೆಮಿಗಾಗಿ ಸಲ್ಲಿಸಿದ ಸೇವೆ ಅಪಾರಎಂದರು.
ಮತ್ತು ವಚನ ಸಾಹಿತ್ಯಕ್ಕೆ ವಿಜಯಪುರಜಿಲ್ಲೆ ಸಲ್ಲಿಸಿದ ಕೊಡುಗೆಅಪಾರ 12ನೇ ಶತಮಾನದ ಸಕಲ ಜೀವಾತ್ಮ ಲೇಸನ್ನೇ ಬಯಸಿದ್ದ ಯುಗಪುರುಷ ಬಸವಣ್ಣನವರೇ ವಚನ ಸಾಹಿತ್ಯದ ಮೇರು ಪರ್ವತವಾಗಿಜಗತ್ತಿನ ಸಾಹಿತ್ಯ ಪ್ರಪಂಚಕ್ಕೆ ವಿಜಯಪುರಜಿಲ್ಲೆಯನ್ನು ಗುರುತುಸಿವಂತೆ ಮಾಡಿದವರು.ದಲಿತ, ದಮನಿತ ಮಹಿಳೆಯರ ಮುಂತಾದ ತುಳಿತಕ್ಕೊಳಗಾದವರನ್ನು ಕಾಯಕದ ಮುಖಾಂತರ ಭಕ್ತಿಯರಸವನ್ನುತುಂಬಿದಂತವರುಅಣ್ಣ ಬಸವಣ್ಣನವರು. ಇವರಜೊತೆ ಮಡಿವಾಳ ಮಾಚಿದೇವ, ನೂಲಿ ಚಂದಯ್ಯ, ಗಂಗಾಂಬಿಕಾ, ಅಕ್ಕನಾಗಮ್ಮ, ಅಕ್ಕಮಹಾದೇವಿ, ನೀಲಾಂಬಿಕೆ, ಅಲ್ಲಮಪ್ರಭು ಸೇರಿದಂತೆ ಹಲವಾರು ವಚನಗಾರರು ನೀಡಿದಂತಹ ವಚನಸಾಹಿತ್ಯ ಸೂರ್ಯಚಂದ್ರಇರುವವರೆಗೂ ಬೆಳಗುವುದು ಶತಸಿದ್ಧ.ಇಂತಹ ವಚನ ಸಾಹಿತ್ಯವನ್ನು ಕಾಲ ಗಜಗರ್ಭದಲ್ಲಿ ನಸಿಸಿ ಹೋಗದಂತೆ ನೋಡಿಕೊಂಡು ವಚನಗಳನ್ನು ಸಂಗ್ರಹಿಸಿಟ್ಟು ವಚನ ಪಿತಾಮಹರೆಂದು ಹೆಗ್ಗಳಿಕೆಗೆ ಪಾತ್ರರಾದವರು ಫ.ಗು.ಹಳಕಟ್ಟಿಯವರು ಎಂದು ಹೇಳಿದರು.
ಹೀಗೆ ಸಾಹಿತ್ಯ ಲೋಕ ಸೇರಿದಂತೆ ನಮ್ಮ ಭಾಷೆಗೆ ಹಲವಾರು ಮಹಾನ್ ವ್ಯಕ್ತಿಗಳು ಕೊಡುಗೆ ನೀಡಿದ್ದಾರೆ.ಅವರಂತೆ ನಾವು ಕೂಡ ನಮ್ಮ ಭಾಷೆಯನ್ನು ಉಳಿಸಿ-ಬೆಳೆಸಕೊಂಡು ಹೋಗಬೇಕಾಗಿದೆಎಂದರು.
ಬಾಗಲಕೋಟದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್.ಜಿ.ಕರೂರಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ 2 ಸಾವಿರ ವರ್ಷಗಳಿಗಿಂತಲೂ ಮಿಗಿಲಾದಇತಿಹಾಸವಿದೆ.ಕನ್ನಡ ಸಾಹಿತ್ಯಕ್ಕೆ ವಿಜಯಪುರಕೊಡುಗೆಅಪಾರ. ಮತ್ತು ಫ.ಗು ಹಳಕಟ್ಟಿಯವರು ವಚನ ಸಾಹಿತ್ಯಕ್ಕೆಕೊಟ್ಟಂತಹಕೊಡುಗೆ ಮರೆಯುವಂತಿಲ್ಲ. ಈ ಜಿಲ್ಲೆಯಲ್ಲಿ ಸೂಫಿ ಸಂತರ ಸಾಹಿತ್ಯ, ವಚನ ಸಾಹಿತ್ಯ, ಶಿಶು ಕವಿ ಸಂಗಮೇಶ, ಸಾಹಿತಿಸಂಗು ಬಿರಾದರಇವರನ್ನು ಸೇರಿದಂತೆಇನ್ನು ಹಲವಾರು ಮಹಣಿಯರು ಈ ಭೂಮಿಯಿಂದತಮ್ಮದೇಆದಕೊಡುಗೆ ನೀಡಿದ್ದಾರೆಅವರೆಲ್ಲರನ್ನು ಮರೆಯಲು ಸಾಧ್ಯವೇಇಲ್ಲ.
ಜನಪದಸಾಹಿತ್ಯಕ್ಕೆಮಧುರಚೆನ್ನ, ಸಿಂಪಿ ಲಿಂಗಣ್ಣಮತ್ತು ಪತ್ರಿಕೋದ್ಯಮಕ್ಕೆಮೋರೆ ಹನುಮಂತರಾಯ, ವಿ.ಬಿ.ನಾಯಕ, ಸೇರಿದಂತೆ ಹಲವಾರು ಪ್ರಮುಖರುತಮ್ಮದೇಆದಕೊಡುಗೆ ನೀಡಿದ್ದಾರೆಎಲ್ಲ ರಂಗಗಳಲ್ಲಿಯೂ ವಿಜಯಪುರಜಿಲ್ಲೆ ಸಮೃದ್ಧವಾಗಿದ್ದುಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಶಕ್ತಿಯನ್ನುತುಂಬಿದೆಎಂದರು.
ಇನ್ನುಇಂತಹ ಹಲವಾರು ಸಮ್ಮೇಳನಗಳಲ್ಲಿ ಭಾಗಿಯಾಗುತ್ತಾ ಬಂದಿದ್ದೇನೆ ವಿಜಯಪುರ-ಬಾಗಲಕೋಟೆ ಅವಳ ಜಿಲ್ಲೆಗಳಲ್ಲಿ ಹಲವಾರುಕನ್ನಡ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದೇನೆಆದರೆ ಈ ವಿಜಯಪುರಜಿಲ್ಲೆಯ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ನನ್ನಜೀವನದಲ್ಲಿಅತ್ಯಂತ ವಿಶೇಷವಾಗಿದ್ದು, ನನ್ನ ಬದುಕಿನಲ್ಲಿ ಮರೆಯಲಾಗದಂತಹ ಗಳಿಗೆ ಎಂದು ಹೇಳಿದರು.
ನಾಗಠಾಣ ಮತಕ್ಷೇತ್ರದ ಶಾಸಕ ದೇವನಾಂದಚವ್ಹಾಣ ಮಾತನಾಡಿ,ಕಸಾಪ ಅಧ್ಯಕ್ಷಹಾಸಿಂಪೀರ ವಾಲೀಕಾರಅವರು ಸಾಕಷ್ಟು ಶ್ರಮಪಡುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯ ಲೋಕದಲ್ಲಿ ಹೊಸ ಚಿಗುರನ್ನು ಹುಟ್ಟುಬೆಳೆಸುತ್ತಿದ್ದಾರೆ.ಅವರಜೊತೆಗೆ ನಾನು ಎಂದೆಂದಿಗೂಇರುತ್ತೇನೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಮಯ ಕಳೆಯಲು ಇಚ್ಛೆಯಿದ್ದರೂ ಸಹ ಚುನಾವಣಾ ಸಂದರ್ಭವಿರುವಕಾರಣ ನಾನು ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಕ್ಷಮಿಸಿ ಆದರೆಇಂತಹಕನ್ನಡಪರಯಾವುದೇ ಸಮಾರಂಭಗಳನ್ನು ಹಾಸಿಂಪೀರ ವಾಲೀಕಾರ್‍ಅವರು ಮಾಡಿದ್ದರುಅವರೊಂದಿಗೆ ನಾನು ತನು-ಮನ-ಧನದೊಂದಿಗೆ ಸದಾಜೊತೆಯಲ್ಲಿರುತ್ತೇನೆಎಂದು ಹೇಳಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ.ಭುವನೇಶ್ವರಿ ಮೇಲಿನಮಠ ಮಾತನಾಡಿ, ನಮ್ಮಲ್ಲಿ ಸದಾಕನ್ನಡಕ್ಕಾಗಿಏನನ್ನಾದರೂ ಮಾಡಬೇಕು.ನಮ್ಮಕೊಡುಗೆಯನ್ನು ಸಲ್ಲಿಸಬೇಕು ಎಂಬ ತುಡಿತ ಸದಾಇರಬೇಕುಅಂದಾಗ ಮಾತ್ರ ನಾವು ನಮ್ಮತಾಯಿ ಭಾಷೆಕನ್ನಡಕ್ಕಾಗಿಏನ್ನನ್ನಾದರೂ ನೀಡಲು ಸಾಧ್ಯಎಂದು ಹೇಳಿದರು.
ನಮ್ಮ ಮಾತೃಭಾಷೆ ನಮ್ಮ ಮನದ ಭಾಷೆಇದ್ದಂತೆಅದನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.ನಾನು ತಾಂತ್ರಿಕ ಭಾಷೆಯಲ್ಲಿಕನ್ನಡ ಪದಗಳ ಜೊಡಣೆ ಮಾಡಬೇಕಾದರೆ ಸಾಕಷ್ಟು ಕಷ್ಟಗಳನ್ನು ಸವಾಲುಗಳನ್ನು ಎದುರಿಸಿದ್ದೇ ಆದರೆಅದುಯಶಸ್ಸುಆದ ಮೇಲೆ ಒಂದು ಸಾರ್ಥಕ ಭಾವನೆ ನನ್ನಲ್ಲಿ ಮೂಡಿದೆಎಂದರು.
ಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷಹಾಸಿಂಪೀರ್ ವಾಲೀಕಾರ್ ಮಾತನಾಡಿ, ನನಗೆಸಾಕಷ್ಟು ಸಂಕಷ್ಟಗಳು ಬರುತ್ತಾ ಇವೆ. ಯಾವ ಸಮಾರಂಭವನ್ನು ನಾವೂ ಪೂಜ್ಯರಿಲ್ಲದೇ ಮಾಡುವುದಿಲ್ಲ ಎಂದುಚುನಾವಣೆಗೂ ಮುಂಚೆ ಹೇಳಿದ್ದೆ ಅದರಂತೆ ನಾನು ನಡೆದುಕೊಳ್ಳುವ ಮೂಲಕ ಸುಮಾರುಇಲ್ಲಿಯವರೆಗೆ 133 ಪರಮ ಪೂಜ್ಯರನ್ನು ನಾವು ಗೌರವಿಸಿ ಅವರೊಂದಿಗೆ ಸಮಾರಂಭವನ್ನು ಮಾಡಿದ್ದೇವೆ. ಯಾರು ಏನೇ ಹೇಳಲಿ ನಾನು ಈ ಮಾತಿನಿಂದ ಹಿಂದೆ ಸರೆಯುವುದಿಲ್ಲ. ಪೂಜ್ಯರು ತಪಸ್ವಿಗಳು, ಜ್ಞಾನವಂತರು ಅವರನ್ನೊಳಗೊಂಡು ಕಾರ್ಯಕ್ರಮ ಮಾಡುವುದರಿಂದಜ್ಞಾನವನ್ನು ಪಸರಿಸಲು ಸಾಧ್ಯವಾಗುತ್ತದೆಇನ್ನು ಮುಂದೆಯೂ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ ಮೂಲಕ ಹಮ್ಮಿಕೊಳ್ಳಲಾಗುವುದು ಎಂದುಎಂದುಆಶಯ ನುಡಿಗಳನ್ನು ಆಡಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯವಹಿಸಿದ್ದ ಬೆಂಗಳೂರಿನ ನಿಡುಮಾಮಿಡಿಮಠದ ಜಗದ್ಗುರುಗಳಾದ ಡಾ. ವೀರಭಧ್ರಚನ್ನಮಲ್ಲ ಸ್ವಾಮಿಜಿ ಹಾಗೂ ರಾಜ್ಯ ಸರಕಾರಿ ನೌಕರರ ಸಂಘದಉಪಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಿಗೌರವಿಸಲಾಯಿತು. ಸಮಾರಂಭದಲ್ಲಿಭಾರತಿ ಪಾಟೀಲ, ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ಕುಲಸಚಿವ ವಿ.ವಿಮಾಳಗಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಹಿತಿಗಳು ಮುಂತಾದವರುಉಪಸ್ಥಿತರಿದ್ದರು.