ಕನ್ನಡ ಭಾಷೆ ಸಂರಕ್ಷಣೆ ಅಗತ್ಯವಿದೆ : ಸುರೇಶ ಚನಶಟ್ಟಿ

ಬೀದರ:ನ.2: ಒಂದು ಜನಾಂಗದ ಸಂಸ್ಕøತಿ ನಾಶಗೊಳಿಸಬೇಕೆಂದರೆ ಆ ಜನಾಂಗದ ಭಾಷೆ ನಾಶಗೊಳಿಸದರೆ ಸಾಕು ಆದ್ದರಿಂದ ಇಂದು ಭಾಷೆ ಸಂರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶಟ್ಟಿ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.

ಸಮಾರಂಭದಲ್ಲಿ ಕಸಾಪ ಮಹಿಳಾ ಪ್ರತಿನಿಧಿ ಕಸ್ತೂರಿ ಪಟಪಳ್ಳಿ, ಉಪಾಧ್ಯಕ್ಷ ವಿಜಯಕುಮಾರ ಗೌರೆ, ತಾಲ್ಲೂಕು ಘಟಕದ ಕೋಶಾಧ್ಯಕ್ಷ ವೀರಶೆಟ್ಟಿ ಚನಶಟ್ಟಿ ಸಾಹಿತಿ ಓಂಕಾರ ಪಾಟೀಲ ಪ್ರಮುಖರಾದ ಆನಂದ ಪಾಟೀಲ, ಸಿದ್ದಾರೂಢ ಭಾಲ್ಕೆ, ಅಶೋಕ ದಿಡಗೆ ಮೊದಲಾದವರು ಉಪಸ್ಥಿತರಿದ್ದರು.