ಕನ್ನಡ ಭಾಷೆ ವಿಚಾರದಲ್ಲಿ ರಾಜಿ ಇಲ್ಲ;  ಟಿ.ಎ.ನಾರಾಯಣಗೌಡ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಮಾ.15; ಕನ್ನಡ ಭಾಷೆ ವಿಚಾರದಲ್ಲಿ ರಾಜಿ ಇಲ್ಲ, ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾದ್ಯವಿಲ್ಲ, ಕನ್ನಡ ನಾಡು, ನುಡಿಗಾಗಿ ನಾನು ಜೈಲಿಗೆ ಹೋಗಲು ಸಿದ್ದ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.ಪಟ್ಟಣದ ಹಳೇಬಸ್ ನಿಲ್ದಾಣದಲ್ಲಿ  ಕರವೇ ತಾಲೂಕು ಘಟಕದವರು ಆಯೋಜಿಸಿದ್ದ ಕನ್ನಡದ ಹಬ್ಬ -2024 ಹಾಗೂ ತಮಗೆ ನೀಡಿದ ಚಳುವಳಿ ಭೀಷ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.ಕನ್ನಡಕ್ಕಾಗಿ ಯಾವ ರಾಜಕಾರಣಿ ಜೈಲಿಗೆ ಹೋಗಿರುವ ಊದಾಹರಣೆ ಇಲ್ಲ, ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಬಾರಿ ಎಂದು ನಾಮಕರಣ ಮಾಡಿದ್ದಾರೆ, ಆದರೆ ಬಸವಣ್ಣನವರ ವಿಚಾರಧಾರೆಗಳನ್ನು ಯಾವುದಾದದೂ ರಾಜಕಾರಣಿ ಅಳವಡಿಸಿಕೊಂಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು.ಇಂದು ಬೆಂಗಳೂರು ಭಾಷಾ ಅಲ್ಪಸಂಖ್ಯಾತರ, ಬಂಡವಾಳಶಾಹಿಗಳ ಮುಷ್ಟಿಯಲ್ಲಿದೆ, ಕನ್ನಡಿಗರ ಊರು ಬೆಂಗಳೂರು ಆಗಬೇಕು, ಕಳೆದ ಡಿ.27 ರಂದು ಬಹುದೊಡ್ಡ ಬದಲಾವಣೆಯಾಯಿತು, ಇಂದು ಬೆಂಗಳೂರು ಕನ್ನಡಿಕೀರಣ ವಾಗುವ ಹಾದಿಯಲ್ಲಿದೆ ಎಂದು ಹೇಳಿದರು.ಎಂ.ಪಿ.ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಮಾತನಾಡಿ ಕನ್ನಡದ ಇತಿಹಾಸವನ್ನು ಮಕ್ಕಳಿಗೆ ಹೇಳಿ ಕೊಡುವ ಕೆಲಸವಾಗಬೇಕು, ಆಂಗ್ಲ ಭಾಷೆಯ ಒತ್ತಡಿಂದ ಕನ್ನಡ ನಲುಗುತ್ತದೆ, ಇಂತಹ ದಿನಗಳಲ್ಲಿ ನಾರಾಯಣಗೌಡರಂತವರ ಅಗತ್ಯತೆ ಇದೆ ಎಂದರು.ಒAದು ಭಾಷೆ ಸತ್ತರೆ ಸಂಸ್ಕೃತಿ ಸತ್ತು ಹೋಗುತ್ತದೆ, ಕನ್ನಡ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.ನೀಲಗುಂದ ಗುಡ್ಡದ ವಿರಕ್ತಮಠದ ಮ.ನಿ.ಪ್ರ.ಚೆನ್ನಬಸವ ಶಿವಯೋಗಿ ಸ್ವಾಮಿಜಿ ಮಾತನಾಡಿ ನಾನೂ ಕನ್ನಡ ಮಾದ್ಯಮ ಶಾಲೆಯಲ್ಲಿ ಆರಂಭಿಸಿದ್ದೇನೆ, ಕನ್ನಡ, ನೆಲ, ಭಾಷೆಗಾಗಿ ಅವಿರತವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.