ಕನ್ನಡ ಭಾಷೆ ರಕ್ಷಣೆ, ಬೆಳವಣಿಗೆ ಎಲ್ಲರ ಕರ್ತವ್ಯ

ಭಾಲ್ಕಿ:ನ.30:ಕನ್ನಡ ನಾಡು, ನುಡಿ, ನೆಲ-ಜಲ, ಸಾಹಿತ್ಯ, ಸಂಸ್ಕøತಿ, ಕಲೆಗಳನ್ನು ಉಳಿಸಿ ಬೆಳೆಸುವ ಪ್ರತಿಯೊಬ್ಬ ಕನ್ನಡಿಗನರ ಆದ್ಯ ಕರ್ತವ್ಯವಾಗಿದೆ ಎಂದು ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಜೈ ಕರವೇ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ, ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಭಾಷೆ, ನೆಲ, ಜಲ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಕನ್ನಡ ನಮ್ಮ ಅನ್ನದ ಭಾಷೆಯಾಗಬೇಕು. ಕನ್ನಡ ಜಾಗೃತಿಗೆ ಸರ್ವರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕನ್ನಡ ನಾಡಲ್ಲಿ ಅನೇಕ ರಾಜ ಮನೆತನಗಳು ಆಳ್ವಿಕೆ ನಡೆಸಿವೆ. ಎಲ್ಲಾ ಮನೆತನಗಳು, ಬಸವಾದಿ ಶರಣರು, ಸಂತರು, ದಾಸರು ನಾಡು, ನುಡಿಯನ್ನು ಪೆuಟಿಜeಜಿiಟಿeಜ?ಷಿಸುತ್ತಾ ಬಂದಿದ್ದಾರೆ. ಕನ್ನಡಿಗ ಎಂದೂ, ಯಾರಿಗೂ ಕಡಿಮೆ ಇಲ್ಲ. ಜಗತ್ತಿನಲ್ಲಿ ಅನೇಕ ಶೇಷ್ಠ ಸಾಧನೆಗಳನ್ನು ಕನ್ನಡಿಗರು ಮಾಡಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ವೀರಶೆಟ್ಟಿ ಪಟ್ನೆ, ಶ್ರೀಮಂತ ಸಪಾಟೆ, ಜೇ ಕರವೇ ತಾಲ್ಲೂಕು ಅಧ್ಯಕ್ಷ ಸತೀಶ ಮಡಿವಾಳ ಮಾತನಾಡಿದರು.

ವಿವಿಧ ಕನ್ನಡ ಸಂಘಟನೆಗಳ ಮುಖಂಡರಾದ ಸಂಗಮೇಶ ಗುಮ್ಮೆ, ಗಣೇಶ ಪಾಟೀಲ, ಗೋರಖನಾಥ ಶ್ರೀಮಾಳೆ, ಚನ್ನಬಸಪ್ಪ ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ ಪಾಟೀಲ, ಧನರಾಜ ಪಾಟೀಲ, ಮಹೇಶ ಮಠಪತಿ, ಹಣಮಂತ ಪ್ರಭಾ, ಸಂಜುಕುಮಾರ ನಾವದಗಿ, ರಾಜಕುಮಾರ ಡಾವರಗಾವೆ ಇದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ರಾಜೇಶ್ ಮುಗಟೆ, ಜ್ಯೋತಿ ಶ್ರೀಮಂತ ಸಪಾಟೆ ಅವರ ವಿಶೇಷ ಸನ್ಮಾನ ನಡೆಯಿತು.

ಪತ್ರಕರ್ತ ಬಸವರಾಜ ಪ್ರಭಾ ಪ್ರಾಸ್ತಾವಿಕ ಮಾತನಾಡಿದರು.

ಶಿಕ್ಷಕ ಹುಲೇಪ್ಪಾ ಕುಪ್ಪೆ ನಿರೂಪಿಸಿ, ವಂದಿಸಿದರು.