ಕನ್ನಡ ಭಾಷೆ ಭಾರತದ ಪುರಾತನ ಭಾಷೆ

ಹನೂರು, ನ.01: ಕನ್ನಡ ಭಾಷೆ ಭಾರತದ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ಜಗತ್ತಿನ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ 29 ನೇ ಸ್ಥಾನವನ್ನು ಹೊಂದಿದ ಹೆಗ್ಗಳಿಕೆ ಕೂಡ ಇದೆ ಎಂದು ಹನೂರು ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರವಿನಾಯಕ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದರು.
ಒಂದು ಸಾವಿರದ ಐದುನೂರು ವರ್ಷಗಳ ಹಿಂದೆಯೇ ಹರಪ್ಪ ನಾಗರೀಕತೆ ನಿಕಟ ಸಂಬಂಧವನ್ನು ಹೊಂದಿರುವ ಉದಾಹರಣೆಗಳಿವೆ ಎಂದ ಅವರು ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಏಕಿಕರಣದ ಮೂಲಕ ಮತ್ತೇ ಒಗ್ಗೂಡಿಸಲಾಯಿತು. ಕನ್ನಡ ಎಂದು ಅಭಿಮಾನವಿದ್ದರೆ ಸಾಲದು ಅದನ್ನು ಜತನದಿಂದ ಕಾಪಾಡುವ ಮೂಲಕ ಗೌರವ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ನಾಗೇಂದ್ರ, ಶೀರೆಸ್ಧಾರ ಸುರೇಶ್, ಆರ್.ಐ.ಮಾದೇಶ್, ಗ್ರಾಮ ಲೆಕ್ಕಿಗ ಶೇಷಣ್ಣ, ಗ್ರಾಮ ಸಹಾಯಕ ಸಿದ್ದರಾಜು, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.