ಕನ್ನಡ ಭಾಷೆ, ನೆಲ, ಜಲ ಕುರಿತು ಚಿಂತಿಸುವುದರಿಂದ ಸಮಸ್ಯೆಗಳು ಪರಿಹರಿಸಬಹುದು:ಡಾ. ಟಿಂ. ಭಾಸ್ಕರ

ಕಲಬುರಗಿ:ಮಾ.9: ಕನ್ನಡ ಭಾಷೆ, ನೆಲ, ಜಲ ಕುರಿತು ಚಿಂತಿಸುವುದರಿಂದ ನಮ್ಮ ಸಮಸ್ಯೆಗಳು ಪರಿಹರಿಸಬಹುದು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನೆ, ಚರ್ಚೆ ನಡೆಯಬೇಕು ಎಂದು ಗೋಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ.ಭಾಸ್ಕರ್ ಹೇಳಿದರು.
ಬದಲಾಗುತ್ತಿರುವ ಈ ದಿನಮಾನಗಳಲ್ಲಿ ಕನ್ನಡ ಸ್ಥಿತಿ ಗತಿ ಏನು? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೇಕೆ? ನೀರಾವರಿ ಯೋಜನೆಯಿಂದಾಗಿ ಏನು ಪ್ರಯೋಜನಗಳಾಗಿವೆ? ಧರ್ಮ, ಸಾಹಿತ್ಯ ಯಾವ ಕಡೆ ಸಾಗಿದೆ ಎಂಬುದರ ಬಗ್ಗೆ ಅರಿತುಕೊಳ್ಳಬೇಕೆಂದರು.

 ಗುರುವಾರದಂದು ಆಳಂದ ತಾಲ್ಲೂಕಿನ ಜಿಡಗಾ ಕ್ಷೇತ್ರದಲ್ಲಿ ಗುರುವಾರ ಆರಂಭವಾದ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗದ ಮೇಲೆ ಹೆಚ್ಚಿನ ಜವಾಬ್ದಾರಿಯಿದ್ದು, ಕಾರ್ಯಾಂಗ, ಶಾಸಕಾಂಗವನ್ನು ಕಾಯುವ, ಎಚ್ಚರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಸ್ವಾಮೀಜಿ ಮಾತನಾಡಿ, ಧರ್ಮ, ಸಂಸ್ಕøತಿಯ ಜೊತೆಗೆ ಕನ್ನಡ ಜ್ಯೋತಿಯು ಬೆಳಗುತ್ತಿರುವುದು ಸಂತಸದ ಸಂಗತಿ. ಕನ್ನಡ ಉಳಿದರೆ ನಾವು ಉಳಿಯಲು ಸಾಧ್ಯ. ಕನ್ನಡ  ಕೇವಲ ಗ್ರಂಥಸ್ಥವಾಗಿರದೆ, ಹೃದಯಸ್ಥವಾಗಿರಬೇಕು. ಗಡಿ ಭಾಗದಲ್ಲಿ ಕನ್ನಡ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎಂದರು.
ಬೇರೆ ಬೇರೆ ಭಾμÉ ಕಲಿಯಬೇಕು. ಆದರೆ ಕನ್ನಡಕ್ಕೆ ತಾಯಿ ಸ್ಥಾನ ಕೊಡಬೇಕು. ಬರವಣಿಗೆಯಿಂದ ಸಮಾಜ ಪರಿವರ್ತನೆ ಸಾಧ್ಯ. ಕನ್ನಡದ ಹಿಂದಿನ ಸಾಹಿತಿಗಳಿಗೆ ಆತ್ಮಸ್ಥೈರ್ಯ ಇತ್ತು. ಅಂತಹ ಆತ್ಮಸ್ಥೈರ್ಯ ವನ್ನು ಇಂದಿನ ಸಾಹಿತಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
 ಮಳಿಗೆಗಳ ಉದ್ಘಾಟನೆ ಮಾಡಿದ ಶಾಸಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸುಭಾಷ ಆರ್. ಗುತ್ತೇದಾರ, ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
  ಲೇಖಕ ಡಾ. ಶಿವಶರಣಪ್ಪ ಮೋತಕಪಳ್ಳಿ ಹಾಗೂ ಶಿವರಾಜ ಅಂಡಗಿ ಸಂಪಾದಕತ್ವದ ವಿಜಯ ಕಲ್ಯಾಣ ಸ್ಮರಣ ಸಂಚಿಕೆಯನ್ನು   ಗುಲ್ಬರ್ಗ ವಿವಿ ಕುಲಪತಿ ಡಾ.ದಯಾನಂದ ಅಗಸರ ಬಿಡುಗಡೆ ಮಾಡಿ, ಶೈಕ್ಷಣಿಕ ಕೇಂದ್ರಗಳು, ಧಾರ್ಮಿಕ ಕ್ಷೇತ್ರಗಳು ಪರಿವರ್ತನೆ ಕೇಂದ್ರಗಳಾಗಬೇಕು ಎಂದು ತಿಳಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸುಭಾಷಚಂದ್ರ ಕಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪ್ರಸ್ತಾವಿಕ ಮಾತನಾಡಿದರು.

ಶ್ರೀ ಶ್ರೀ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಖಜೂರಿ ಕೋರಣೇಶ್ವರ ಮಠದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಆಳಂದ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಜಿಡಗಾ ಗ್ರಾ.ಪಂ. ಅಧ್ಯಕ್ಷ ಸಿದ್ಧರಾಮ ಯಾದವಾಡ ಮುಖ್ಯ ಅತಿಥಿಗಳಾಗಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಕಲ್ಯಾಣರಾವ ಜಿ. ಪಾಟೀಲ ಮಾತನಾಡಿದರು.

  ಸಿದ್ಧರಾಮ ಹಂಚಿನಾಳ ಪ್ರಾರ್ಥಿಸಿದರು. ಶಿವರಾಜವಾಂಡಗಿ ಸ್ವಾಗತಿಸಿದರು. ಡಾ. ಚಿದಾನಂದ ಚಿಕ್ಕಮಠ ನಿರೂಪಿಸಿದರು. ಶರಣಬಸಪ್ಪ ಕಾಳೆಕಿಂಗೆ ವಂದಿಸಿದರು. ಶರಣರಾಜ ಚಪ್ಪರಬಂದಿ, ಯಶವಂತರಾಯ ಅಷ್ಟಗಿ ಹಾಗೂ ಎಲ್ಲ ತಾಲ್ಲೂಕು ಕಸಾಪ ಅಧ್ಯಕ್ಷರು ವೇದಿಕೆಯಲ್ಲಿದ್ದರು.

ಇದಕ್ಕೂ ಮೊದಲು ಸಮ್ಮೇಳನಾಧ್ಯಕ್ಷರ ಮೇರವಣಿಗೆ ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಿ ಆಳಂದ ಪ್ರದೀಪಕುಮಾರ ಹಿರೇಮಠ ಜಿಡಗಾ ಗ್ರಾಮದ ಮುಖ್ಯ ವೃತ್ತದಿಂದ ಸಮ್ಮೇಳನದ ವೇದಿಕೆಯವರೆಗೆ ಮೆರವಣಿಗೆ ಮುಖಾಂತರ ಹೊರಟಿತು. ಶಾಲಾ ಕಾಲೇಜಿನ ಮಕ್ಕಳು ಹಾಗೂ ಗಣ್ಯರು ಭಾಗವಹಿಸಿದರು.
ರಾಷ್ಟ್ರ ಧ್ವಜಾರೋಹಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ರಾಷ್ಟ್ರ ಧ್ವಜಾರೋಹಣ ನೇರವೇರಿಸಿದರು. ತಾಲೂಕಾ ಕ.ಸಾ.ಪ. ಅಧ್ಯಕ್ಷರಾದ ಹಣಮಂತ ಶೇರಿ ನಾಡ ಧ್ವಜಾರೋಹಣ ನೇರವೇರಿಸಿದರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪರಿಷತ್ ಧ್ವಜಾರೋಹಣ ನೇರವೆರಿಸಿದರು.
ಪುರಸಭೆ ಅಧ್ಯಕ್ಷ ರಾಜಶ್ರೀ ಶ್ರೀಶೈಶೈಲ ಖಜೂರಿ, ಜಿಡಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದರಾಮ ಯಾದವಾಡ, ಸಿದ್ಧರಾಮ ಹಂಚನಾಳ, ನಾಡಗೀತೆ, ನಿರೂಪಣೆ ಡಾ. ಚಿದಾನಂದ ಚಿಕ್ಕಮಠ, ವಂದನಾರ್ಪಣೆ ಶರಣಬಸಪ್ಪ ಕಾಳೆಕಿಂಗ್ ಜಿಡಗಾ ಅವರು ಮಾಡಿದರು.