ಕನ್ನಡ ಭಾಷೆ ನಾಡು,ನುಡಿ,ಜಲ ನಮ್ಮಲ್ಲೆರ ರಕ್ಷಣೆ

ಹಗರಿಬೊಮ್ಮನಹಳ್ಳಿ.ನ.02 : ಕನ್ನಡ ನಾಡು, ನುಡಿ, ಜಲ ರಕ್ಷಣೆಗಾಗಿ ಕಂಕಣ ತೊಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಗೌರವಾಧ್ಯಕ್ಷ ಚಿಂತ್ರಪಳ್ಳಿ ದೆವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ವಾಲ್ಮೀಕಿ ಭವನದ ಆವರಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಕನ್ನಡ ಮಾತೆ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿ ಕನ್ನಡ ಭಾಷೆಯನ್ನು ಮಾತನಾಡುವ ಎಲ್ಲಾ ಪ್ರದೇಶಗಳನ್ನು ವೀಲಿನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ನಾಡಹಬ್ಬದಂತೆ ಆಚರಿಸಲಾಗುತ್ತದೆ ,ಕನ್ನಡ ನಾಡಿನ ಭಾಷೆ,ನಾಡು ನುಡಿ ಜಲ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.ಕನ್ನಡ ನಾಡು, ಭಾಷೆ, ಸಂಸ್ಕೃತಿ ,ಸಾಹಿತ್ಯದ ಬಗ್ಗೆ ಎಷ್ಟು ಹೇಳಿದರು ಸಾಲುವುದಿಲ್ಲವೆಂದರು.
ತಾಲೂಕು ಅಧ್ಯಕ್ಷ ಭೀಮರಾಜ್ ಮಾತನಾಡಿ ಕರ್ನಾಟಕ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರವಾಗಿದೆ, ನಮ್ಮ ಕನ್ನಡ ನಾಡು ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ಕರ್ನಾಟಕ ರಾಜ್ಯವು ನಮ್ಮ ದೇಶದಲ್ಲೇ ಬಂದಾಗಿದೆ, ಪ್ರಕೃತಿ ಸೌಂದರ್ಯ, ವನ್ಯ ಜೀವಿಗಳ ಸಮೃಧ್ಧಿ ಹಾಗೂ ವಿಶ್ವ ಪರಂಪರೆಯ ಸಾಲಿನಲ್ಲಿ ಪ್ರಸಿದ್ದಿ ಪಡೆದ ಕೀರ್ತಿ ಕರುನಾಡಿಗಿದೆ ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ಹುಡೇದ್ ಗುರುಬಸವರಜ್, ಜಿಲ್ಲಾ ನಿದೇಶಕ ರವಿ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಜಾವಲಿ ಗಡ್ಡದ್, ಉಪಾಧ್ಯಕ್ಷ ಉಮೇಶ್, ನವೀನ್, ಫಣಿರಾಜ್, ಚರಣರಾಜ್, ವಟಮ್ಮನಹಳ್ಳಿ ಶಿವುರಾಜ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.