ಕನ್ನಡ ಭಾಷೆ ಎಂಬುದೇ ಅದ್ಭುತ ಅನನ್ಯ

ಹನೂರು, ನ.01: ಕನ್ನಡ ಭಾಷೆ ಎಂಬುದೇ ಅದ್ಭುತ ಅನನ್ಯ ಅವಿಸ್ಮರಣಿಯವಾದದ್ದು, ಕುವೆಂಪು, ದ.ರಾ.ಬೇಂದ್ರೇಯಂತಹ ಮಹಾನ್ ಕವಿ ಶ್ರೇಷ್ಠರು, ಸಾಹಿತಿಗಳನ್ನು ನೀಡಿದ ಕೀರ್ತಿ ನಮ್ಮ ಕನ್ನಡ ಭಾಷೆಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ಮೂರ್ತಿ ಬಣ್ಣಿಸಿದರು.
ಹನೂರು ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಕನ್ನಡ ಭಾಷೆ ತನ್ನದೇ ಆದ ಸ್ಥಾನಮಾನವನ್ನು ಹೊಂದಿರುವುದನ್ನು ನೋಡಿದರೆ ಕನ್ನಡ ಭಾಷೆಯ ಗತ್ತು ಎಂತಹದ್ದು ಎಂದು ತಿಳಿಯುತ್ತದೆ. ಇಂತಹ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ತಿಳಿಸಿದರು.
ಪ.ಪಂ.ಸದಸ್ಯ ಹರೀಶ್‍ಕುಮಾರ್ ಮಾತನಾಡಿ, ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೇಷ್ಟತೆಯನ್ನು ಹೊಂದಿದೆ. ನಿರ್ಗಳವಾಗಿ ಮಾತನಾಡಬಲ್ಲ ಭಾಷೆಯಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡ ನಾಡು ನುಡಿಗಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ.ಪಂ.ಸದಸ್ಯರುಗಳಾದ ಸಂಪತ್‍ಕುಮಾರ್, ಗಿರೀಶ್‍ಕುಮಾರ್, ಮಹೇಶ್‍ನಾಯಕ, ಮುಮ್‍ತಾಜ್ ಬಾನು, ಮಂಜುಳ, ಮುಖಂಡರುಗಳಾದ ಸುದರ್ಶನ್, ಸತೀಶ್, ಗೋವಿಂದ, ಪ.ಪಂ.ಸಿಬ್ಬಂದಿಗಳು ಇದ್ದರು.