ಕನ್ನಡ ಭಾಷೆ ಉಳಿಸಿ ಬೆಳೆಸಲು ಪಣ ತೋಡೊಣ

ಮರಿಯಮ್ಮನಹಳ್ಳಿ, ನ.02: ಬೇರೆ ಬೇರೆ ಭಾಷೆಗಳ ವ್ಯಾಮೋಹಕ್ಕೆ ಒಳಗಾಗದೇ ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಪಣ ತೊಡಬೇಕಾಗಿದೆ ಎಂದು ಮರಿಯಮ್ಮನಹಳ್ಳಿ ಹೋಬಳಿ ರಕ್ಷಣಾ ವೇದಿಕೆಯ ಹೋಬಳಿ ಅಧ್ಯಕ್ಷ ಈ. ರಮೇಶ್ ಅಭಿಪ್ರಾಯಪಟ್ಟರು.
ಅವರು ಮರಿಯಮ್ಮನಹಳ್ಳಿಯ ನಾಣಿಕೇರಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯವರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಖಾಸಗಿ ಸಂಸ್ಥೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದೇ ರೀತಿಯ ಶಿಕ್ಷಣ ಹಾಗೂ ಸೌಲಭ್ಯ ಒದಗಿಸುವಲ್ಲಿ ಕಡಿಮೆ ಇಲ್ಲ. ಆದ್ದರಿಂದ ನಾವೆಲ್ಲರೂ ನಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡವನ್ನು ಉಳಿಸಿ ಬೆಳೆಸೋಣ. ಇತ್ತೀಚೆಗಿನ ದಿನಗಳಲ್ಲಿ ಎಲ್ಲೆಡೆ ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ಹೆಚ್ಚಾಗುತ್ತಿದ್ದು, ನಮ್ಮ ಭಾಷೆ, ನಾಡು ನುಡಿ ಹಾಗೂ ಸಂಸ್ಕೃತಿಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ಅಲ್ಲದೇ ನಮ್ಮ ಮಾತೃಭಾಷೆ ಕನ್ನಡದ ಮೇಲೆ ಮಲತಾಯಿಯ ಧೋರಣೆ ತೋರಲಾಗುತ್ತಿದೆ. ಆದ್ದರಿಂದ ನಾವುಗಳು ಮಾತೃಭಾಷೆಯ ಜೊತೆಗೆ ಕನ್ನಡ ನೆಲ, ಜಲ, ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯವನ್ನು ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎನ್.ಸತ್ಯನಾರಾಯಣ, ವರ್ತಕ ಎಂ. ಬದ್ರಿನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ಮರಿಯಮ್ಮನಹಳ್ಳಿ ರಕ್ಷಣಾ ವೇದಿಕೆಯ ಡಿ. ಭೀಮಪ್ಪ, ಜಿ. ಶ್ರೀನಿವಾಸ, ಯರ್ರಿಸ್ವಾಮಿ ಗೌಡ, ಟೈಲರ್ ಸ್ವಾಮಿ, ಮಲ್ಡಿ ರಾಮಣ್ಣ, ಕೆ.ಟಿ. ಹುಲುಗಪ್ಪ, ಗರಗ ಘಟಕದ ಅಧ್ಯಕ್ಷ ಮಾರೇಶ್ ಯಾದವ್, ಗಾಳೆಮ್ಮನಗುಡಿ ಘಟಕದ ಅಧ್ಯಕ್ಷ ಗಾಳೇಶ್, ರಕ್ಷಣಾ ವೇದಿಕೆಯ ಪ್ರಕಾಶ್ ಎಂ, ರಾಜು, ಹೂಗಾರ್ ಲಲಿತಮ್ಮ, ಬಿ. ಪಾರ್ವತಮ್ಮ, ದೇವಮ್ಮ ಬಡಿಗೇರ ಹಾಗೂ ಇತರರು ಇದ್ದರು.