ಕನ್ನಡ ಭಾಷೆ ಉಳಿವಿಗಾಗಿ ಜೀವ ಸವೆಸಿದವರು_ ಪ್ರೋ. ಶೇಷಗಿರಿರಾವ್


ಧಾರವಾಡ.,ಮೇ.28: :ಇಂಗ್ಲೀಷ ಸಾಹಿತ್ಯವನ್ನುಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದವರಲ್ಲಿ ಮೊದಲಿಗರಲ್ಲದೇಕನ್ನಡ ಸಾಹಿತ್ಯದಲ್ಲಿ ವಿಮರ್ಶಾ ಲೋಕಕ್ಕೆ ಮಾರ್ಗ ಹಾಕಿಕೊಟ್ಟವರು ಪ್ರೊ. ಎಲ್.ಎಸ್. ಶೇಷಗಿರಿರಾವ್‍ಎಂದು ಬೆಂಗಳೂರಿನ ಹಿರಿಯ ಲೇಖಕ, ಕನ್ನಡಪರ ಹೋರಾಟಗಾರರಾ.ನಂ. ಚಂದ್ರಶೇಖರ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು, ದಿ.ಪ್ರೊ.ಎಲ್.ಎಸ್. ಶೇಷಗಿರಿರಾವ್‍ಜನ್ಮಶತಮಾನೋತ್ಸವ ನಿಮಿತ್ತಆಯೋಜಿಸಿದ್ದ `ಎಲ್.ಎಸ್.ಎಸ್. ಅವರ ಬದುಕು-ಬರಹ’ ವಿಶೇಷ ಉಪನ್ಯಾಸಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.
ಇಪ್ಪತ್ತು ಸಾವಿರಕ್ಕೂ ಹೆಚ್ಚು ಪುಟಗಳಷ್ಟು ಸಾಹಿತ್ಯ ಬರೆದಿದ್ದಾರೆ. ಹದಿನೆಂಟು ಸಾವಿರಕ್ಕಿಂತ ಹೆಚ್ಚು ಪುಟಗಳನ್ನು ಸಂಪಾದನೆ ಮಾಡಿ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಬರೆದವರುಕನ್ನಡಿಗರಿಲ್ಲ. ನೂರಾರುಕನ್ನಡ ಚಳುವಳಿಗಳಲ್ಲಿ ಭಾಗವಹಿಸಿ ಕನ್ನಡ ಭಾಷೆಯ ಉಳಿವಿಗಾಗಿ ಜೀವ ಸವೆಸಿದವರು. ಶೇಷಗಿರಿಯವರದುದೈತ್ಯ ಶಕ್ತಿ.ಸಾಹಿತಿಯಾಗಿ, ಚಳುವಳಿಗಾರಗಾಗಿ, ಆಡಳಿತಗಾರರಾಗಿ, ಶಿಕ್ಷಕರಾಗಿ ಹೀಗೆ ಬಹುಮುಖವಾಗಿ ಜೀವನದುದ್ದಕ್ಕೂಕಾರ್ಯ ಮಾಡಿದರು ಎಂದರು.
ಶೇಷಗಿರಿರಾವ್‍ರ ಬದುಕು-ಬರಹಕುರಿತು ಮಾತನಾಡಿದಡಾ. ಜಿ. ಎಂ. ಹೆಗಡೆ, ಎಲ್.ಎಸ್. ಶೇಷಗಿರಿರಾವ್‍ರು ಹತ್ತಾರುಕನ್ನಡ ಚಳುವಳಿಗಳನ್ನು ಬೆಂಗಳೂರು ನೆಲದಲ್ಲಿಕಟ್ಟಿದವರು. ಅಂದಿನಗಿಂತಇಂದುಕನ್ನಡ ಚಳುವಳಿಗಳ ಅವಶ್ಯಕತೆಇದೆ.ಕಾಲೇಜುಗಳಲ್ಲಿ ಕನ್ನಡಉಪನ್ಯಾಸಕರ ನೇಮಕಾತಿಇಲ್ಲ. ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚಿಕೊಳ್ಳುತ್ತಿವೆ. ಇವುಗಳ ವಿರುದ್ಧಕನ್ನಡಿಗರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆಎಂದ ಹೆಗಡೆಎಲ್.ಎಸ್. ಮಕ್ಕಳ ಸಾಹಿತ್ಯ ಮೊದಲಗೊಂಡುಎಲ್ಲ ಸಾಹಿತ್ಯ ಪ್ರಕಾರಗಳನ್ನು ನೀಡಿದರು.ಜ್ಞಾನ ಭಾರತಿ, ಕನ್ನಡ ಭಾರತಿ, ಕಿರಿಯರಕರ್ನಾಟಕ ಹೀಗೆ ಬ್ರಹತ್ ಗೃಂಥಗಳನ್ನು ನೀಡಿದಂತೆಇನ್ನೊಬ್ಬರು ನೀಡಿಲ್ಲ. ಶೇಷಗಿರಿರಾವ್ ನುಡಿದಂತೆ ಬದುಕಿದರು. ಬದುಕಿದಂತೇ ನುಡಿದರು.ನಿಘಂಟುಗಳ ತಜ್ಞರಾಗಿಕನ್ನಡ, ಇಂಗ್ಲೀಷ ನಿಘಂಟುಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದರು.ಪ್ರಗತಿಶೀಲ ಸಾಹಿತ್ಯದಲ್ಲಿ ಬಹುದೊಡ್ಡಕಾರ್ಯ ಮಾಡಿದರುಎಂದುಅವರ ಸಾಹಿತ್ಯಗಳ ಪ್ರಕಾರಗಳನ್ನು ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿಯ ಗಳಗನಾಥ, ನಾ.ಶ್ರೀ.ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ ಮಾತನಾಡಿ ಹೊಸ ಸಾಹಿತ್ಯ ಹೊಸ ಭಾಷೆ ಬರಬೇಕೆಂದರೆಜೀವನ ವಿಕಸನಗೊಳ್ಳಬೇಕು ಎಂದರು.
ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ವೇದಿಕೆ ಮೇಲಿದ್ದರು.ಗುರು ಹಿರೇಮಠ ಸ್ವಾಗತಿಸಿದರು.ಶಂಕರ ಹಲಗತ್ತಿಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿಡಾ.ಅರವಿಂದ ಯಾಳಗಿ, ಡಾ. ಶಾಮಸುಂದರ ಬಿದರಕುಂದಿ, ಅಶೋಕ ನಿಡವಣಿ, ಲಕ್ಷ್ಮೀ ಕೊಟಗುಣಸಿ ಸೇರಿದಂತೆ ಮುಂತಾದವರಿದ್ದರು.