ಕನ್ನಡ ಭಾಷೆ ಅಭಿಮಾನ ಮಕ್ಕಳಲ್ಲಿ ಮೂಡಿಸಿ, ಅನ್ನದ ಭಾಷೆಯಾಗಲು ಹಗಲಿರುಳು ಸೇವೆ ಸಾಧನೆ ಅಗತ್ಯ: ಜೋಶಿ

ಕಲಬುರಗಿ.ನ.2: ನಗರದ ಆರ್ಯ ಈಡಿಗ ಸಮಾಜ ಆವರಣದಲ್ಲಿ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕಾಮರಾಜ ನಾಡರ್ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಕನ್ನಡ ಭಾಷೆ ಅಭಿಮಾನ ಮಕ್ಕಳಲ್ಲಿ ಮೂಡಿಸಿ, ಅನ್ನದ ಭಾಷೆಯಾಗಲು ಹಗಲಿರುಳು ಸೇವೆ ಸಾಧನೆ ಅಗತ್ಯ. ಪ್ರಾಥಮಿಕ ಹಂತದ ಶಾಲೆಗಳ ಕನ್ನಡ ಭಾಷಾ ಸ್ಪಷ್ಟ ಉಚ್ಚಾರಣೆಗೆ ಹಾಗು ಆಟ ಆಡುವುದರ ಮೂಲಕ ಶಬ್ದ ಸಂಗ್ರಹಕ್ಕೆ ಒತ್ತು ಕೊಡಬೇಕು ಈ ಮಕ್ಕಳಲ್ಲಿರುವ ಕನ್ನಡ ಅಭಿಮಾನ ಮೂಡಿಸಿ ಜಾಗತಿಕ ಮಟ್ಟಕ್ಕೆ ಭಾಷೆಯ ಹರಿವು ವಿಸ್ತರಿಸಲು ನಮ್ಮ ಜವಾಬ್ದಾರಿ ಅಡಗಿದೆ ಎಂದು ಅತಿಥಿಯಾಗಿ ಚಿತ್ರಕಲಾವಿದ ನಾರಾಯಣ ಎಂ. ಜೋಶಿ ಮಾತನಾಡಿದರು.
ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕಾಮರಾಜ ನಾಡರ್ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯ ಬಿ.ಎಂ.ರಾವೂರ, ಮಾತನಾಡಿ ಈಡಿಗ ಸಮಾಜದ ಹಿರಿಯ ಮುಖಂಡ ಹಾಗು ಕಲ್ಯಾಣ ಕರ್ನಾಟಕದಲ್ಲಿ ವಿವಿಧ ಸ್ಥಳಗಳಲ್ಲಿ ಹತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳು ಶಿಕ್ಷಣಕ್ಕೆ ಒತ್ತು ನೀಡಿರುವ ಸಾಹಿತಿ, ಶಿಕ್ಷಕ, ಸಮಾಜ ಸೇವಕ ಮಹಾದೇವಪ್ಪ ಕಡೇಚೂರ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಬಂದಿರುವುದಕ್ಕೆ ಹಾಗೂ ಇವರು ಈ ಶಾಲೆಯ ಮಾರ್ಗದೆರ್ಶಕರು ಮತ್ತು ಸಂಸ್ಥಾಪಕರು ಆಗಿದ್ದು ತಿಳಿಸುತ್ತಾ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕಾಮರಾಜ ನಾಡರ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗು ಶಿಕ್ಷಕ ಸಿಬ್ಬಂದಿ, ಪಾಲಕರು ಹರ್ಷವ್ಯಕ್ತಪಡಿಸಿದ್ದಾರೆ.
ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಕಾಮರಾಜ ನಾಡರ್ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನರಸಯ್ಯ ಕೆ. ಗುತ್ತೇದಾರ, ಸದಸ್ಯ ಬಿ.ಎಂ.ರಾವೂರ, ಶಾಲಾ ಮಕ್ಕಳು, ಶಿಕ್ಷಕ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.