ಕನ್ನಡ ಭಾಷೆ ಅಭಿಮಾನ ಬೆಳೆಸಿಕೊಳ್ಳಿ

ಬೀದರ್:ನ.10: ಪ್ರತಿಯೊಬ್ಬರೂ ಮಾತೃಭಾಷೆ ಕನ್ನಡದ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ರಾಜ್ಯಮಟ್ಟದ ಅಮೋಘ ವರ್ಷ ನೃಪತುಂಗ ಪ್ರಶಸ್ತಿ ಪುರಸ್ಕøತ ದಿಲೀಪಕುಮಾರ ಡೊಂಗರಗೆ ಅವರಿಗೆ ಅಭಿನಂದನೆ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಕ್ತಿತ್ವ ವಿಕಸನದಲ್ಲಿ ಮಾತೃಭಾಷೆ ಪಾತ್ರ ಬಹಳ ಮಹತ್ವದ್ದಾಗಿದೆ. ಕಾರಣ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕು. ಮಾತೃಭಾಷೆಯ ಹಿರಿಮೆ, ಗರಿಮೆ ಕಾಯ್ದುಕೊಂಡು ಹೋಗಬೇಕು ಎಂದು ತಿಳಿಸಿದರು.
ದಿಲೀಪಕುಮಾರ ಡೊಂಗರಗೆ ಆರೋಗ್ಯ ಇಲಾಖೆಯಲ್ಲಿ 30 ವರ್ಷಗಳಿಂದ ವಿದ್ಯುತ್ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದಾರೆ. ಅವರಿಗೆ ರಾಜ್ಯಮಟ್ಟದ ಅಮೋಘ ವರ್ಷ ನೃಪತುಂಗ ಪ್ರಶಸ್ತಿ ದೊರೆತಿರುವುದು ಸೂಕ್ತವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನುಡಿದರು.
ಪ್ರಶಸ್ತಿ, ಸನ್ಮಾನಗಳು ಅರ್ಹರಿಗೆ ಸಲ್ಲಬೇಕು. ಪ್ರಶಸ್ತಿಗಳ ಆಯ್ಕೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಡೊಂಗರಗೆ ಅವರಿಗೆ ಪ್ರಶಸ್ತಿ ಲಭಿಸಿರುವುದು ಅವರ ಪ್ರಾಮಾಣಿಕ ಸೇವೆಗೆ ಸಂದ ಗೌರವವಾಗಿದೆ ಎಂದು ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಬೆಲ್ದಾಳ ಸಿದ್ಧರಾಮ ಶರಣರು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಪ್ರೋತ್ಸಾಹಿಸಲು ಹಾಗೂ ಸಾಧಕರನ್ನು ಅಭಿನಂದಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಾಂಡುರಂಗ ಬೆಲ್ದಾರ್, ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ತಿಳಿಸಿದರು.
ದಿಲೀಪಕುಮಾರ ಡೊಂಗರಗೆ ದಂಪತಿಯನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 23 ಮಂದಿಗೆ ರಾಜ್ಯಮಟ್ಟದ ಕನ್ನಡ ರತ್ನ ಪ್ರಶಸ್ತಿ ಹಾಗೂ ಅನೇಕ ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು ರಾಜ್ಯ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ, ಕಲಬುರಗಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಸಂಗಮೇಶ ಹಿರೇಮಠ, ಪ್ರಮುಖರಾದ ಸುರೇಶ ಟಾಳೆ, ವೈಜಿನಾಥ ಸಾಗರ, ಶ್ರೀನಿವಾಸ ರೆಡ್ಡಿ ಮುದ್ನಾಳ್, ಪ್ರಶಾಂತ ರಾಗಾ, ಲಿಂಗರಾಜ ಭಾಲ್ಕೆ, ಗೋವಿಂದ ಪೂಜಾರಿ, ಡಾ. ಶಿವಾನಂದ ಚಿಕ್ಕಮಠ, ದೇವಿಪ್ರಸಾದ ಕಲಾಲ್, ಅನ್ಸರುಲ್ಲಾ ಬೇಗ್, ಬಾಬುರಾವ್ ಮಜಗೆ, ಪ್ರಕಾಶ ರೆಡ್ಡಿ, ಶ್ರೀನಿವಾಸ, ರಫಿನಿಸಾ ಬೇಗಂ, ತುಕಾರಾಮ ರೊಡ್ಡಾ, ಅಶೋಕ ತಾಂಬಳೆ, ಮಾರುತಿ ಜಟಗೊಂಡ, ಸಂಜುಕುಮಾರ ಮಾತ್ರೆ, ಸುವರ್ಣಾ ವಾಘಮಾರೆ ಇದ್ದರು. ಶರಣಪ್ಪ ಕಣಜಿ ನಿರೂಪಿಸಿದರು. ವೈಜಿನಾಥ ಸಾಳೆ ವಂದಿಸಿದರು.

ರಾಜ್ಯಮಟ್ಟದ ಕನ್ನಡ ರತ್ನ ಪ್ರಶಸ್ತಿ ಪುರಸ್ಕøತರು
ಸುನೀಲ್ ಆರ್, ಚನ್ನವೀರ ಜಮಾದಾರ್, ಬಾಲಾಜಿ ಕಾಂಬಳೆ, ಡಾ. ಮಹಮ್ಮದ್ ಅಬ್ದುಲ್ ಖಾದರ್, ಅನಂತ ಕುಲಕರ್ಣಿ, ಅರವಿಂದ ಕುಲಕರ್ಣಿ, ಶಿವಕುಮಾರ ಸದಾಪೂಲೆ, ಸೂರ್ಯಕಾಂತ ಸಿಂಗೆ, ಧೂಳಪ್ಪ ಬಿರಾದಾರ, ದಿನಕರ ಪಾಂಚಾಳ, ಆನಂದ ದೀನೆ, ಅಬ್ದುಲ್ ಸಾಹೇಬ ಅಲಾಸ್, ಪಿ.ಎಸ್. ಬಿರಾದಾರ, ಬಾಬುರಾವ್ ಮಾಳಗೆ, ರಸಿಕಾ ಕುಲಕರ್ಣಿ, ಸಾಯಮ್ಮ ಶ್ರೀಕಾಂತ, ರಾಜಮತಿ ಕುಡತೆ, ರಂಗೂಬಾಯಿ ತೊಂಡಾರೆ, ಸುಜಾತಾ, ವಾಣಿ ರವಿ, ಶಶಿರೇಖಾ ಪಿ, ಮಾಧುರಿ ಎಸ್.ಕೆ ಹಾಗೂ ಮಹಾದೇವಿ ರುಸ್ತಾಂಪುರೆ