ಕನ್ನಡ ಭಾಷೆಯ ಬಳಕೆ ಹೆಚ್ಚಾಗಲಿ 

ದಾವಣಗೆರೆ.ನ.೧೯ : ಕನ್ನಡ ಭಾಷೆ ನಮ್ಮ ಭಾಷೆ. ಭಾಷೆಗಾಗಿ ಪ್ರತಿಯೊಬ್ಬರೂ ದುಡಿಯಬೇಕು ನಮ್ಮ ಭಾಷೆಯನ್ನು ಬೆಳೆಸುವ ಕೆಲಸ ನಮ್ಮಿಂದ ಮಾತ್ರ ಸಾಧ್ಯ ಅನ್ಯ ಭಾಷಿಗರು ನಮ್ಮ ಭಾಷೆಯನ್ನು ಹಾಗೂ ರಾಜ್ಯವನ್ನು ಹಾಳು ಮಾಡಿದರು.  ಎಂದು ದೂರುವುದನ್ನು ಬಿಟ್ಟು ನಾವುಗಳೇ ನಮ್ಮ ಭಾಷೆ ಮೇಲೆ ಪ್ರೀತಿ ತೋರಿಸಿ ಹೆಚ್ಚೆಚ್ಚು  ಬಳಸಿದರೆ ಆಗ ಭಾಷೆ ತಾನಾಗೆ ಬೆಳೆದು ಬೃಹತ್ ಭಾಷೆಯಾಗಿ ಸಾವಿರಾರು ವರ್ಷಗಳ ಕಾಲ ಅದು ಚಾಲ್ತಿಯಲ್ಲಿ ಇರುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪ್ರೊ ವೆಂಕಟೇಶ್ ಬಾಬು ಹೇಳಿದರು. ನಗರದ ಅನಿಲ್ ಕೆರಿಯರ್ ಅಕಾಡೆಮಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮಗಳಿಂದ ಆಚರಿಸುವ ನವಂಬರ್ ತಿಂಗಳು ನಮ್ಮ ಪಾಲಿಗೆ ನಾಡ ಹಬ್ಬವೇ ಸರಿ ನಾಡು ನುಡಿಯ ಸ್ಮರಣೆ ಮಾಡಿಕೊಳ್ಳದೊಂದಿಗೆ ಕನ್ನಡ ನಾಡು ನುಡಿಯನ್ನು ಇನ್ನಷ್ಟು ಸಂಪತ್ ಭರಿತವಾಗಿ ಸೀಮಂತ ಗೊಳಿಸುವ ಬಗ್ಗೆ ಹೇಗೆ ಎಂದು ನಾವೆಲ್ಲರೂ ಯೋಚಿಸಬೇಕಾಗಿದೆ ಎಂದು ಹೇಳಿದರು.ಕನ್ನಡ ಅಭಿಮಾನವೆಂದರೆ ಇತರ ಭಾಷೆಗಳನ್ನು ದ್ವೇಷಿಸಬೇಕು ಎಂಬ ತಪ್ಪು ಕಲ್ಪನೆ  ಸರಿಯಲ್ಲ ಪ್ರತಿಯೊಬ್ಬರಲ್ಲೂ ನಮ್ಮ ಭಾಷೆ ಬಗ್ಗೆ ಗೌರವ ಪ್ರೀತಿ ಇದ್ದರೆ  ಬೆಳೆಯಲು ಸಾಧ್ಯ ದೇಶದಲ್ಲಿ ರಾಜ್ಯಕ್ಕೊಂದು ಜಿಲ್ಲೆಗೊಂದು ಭಾಷೆಗಳಿವೆ ಹಲವು ಭಾಷೆಗಳ ದೇಶ ನಮ್ಮದು ಎಲ್ಲಾ ಭಾಷೆಗಳನ್ನು ಗೌರವಿಸೋಣ ಆದರೆ ಕನ್ನಡವನ್ನು ಬಳಸೋಣ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅನಿಲ್ ಕೆರಿಯರ್   ಅಕಾಡೆಮಿಯ ಸಂಸ್ಥಾಪಕರಾದ ಅನಿಲ್ ಹಾಗೂ ಇತರ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.