ಕನ್ನಡ ಭಾಷೆಯ ಉಪಯೋಗ, ಭಾಷೆ ಬಗ್ಗೆ ಅಭಿಮಾನ ಬೆಳೆಸುವ ಪ್ರಯತ್ನ ನಡೆಯಲಿ: ಡಾ.ಶಿವಾನಂದ ಸ್ವಾಮೀಜಿ

ಬಸವಕಲ್ಯಾಣ: ಡಿ.29:ಗಡಿಭಾಗದ ಗ್ರಾಮಗಳಲ್ಲಿ ಕನ್ನಡ ಭಾಷೆ ಬೆಳೆಯಬೇಕಾದರೆ ಈ ಭಾಗದ ಜನರಿಗೆ ಕನ್ನಡ ಭಾಷೆಯ ಉಪಯೋಗ ಹಾಗೂ ಭಾಷೆ ಬಗ್ಗೆ ಅಭಿಮಾನ ಬೆಳೆಸುವ ಪ್ರಯತ್ನ ನಡೆಯಬೇಕು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಕನ್ನಡ ಭಾಷೆಯ ಕಹಳೆ ಸಾರುವ ಅಗತ್ಯತೆ ಇದೆ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಡಾ. ಶಿವಾನಂದ ಸ್ವಾಮೀಜಿ ತಿಳಿಸಿದರು.
ಹುಲಸೂರ ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷರಾಗಿದ್ದ ದಿ. ಸಂಗಮೇಶ ಭೋಪಳೆ ಅವರ ಸವಿನೆಪಿಗಾಗಿ “ಮರೆಯಲಾಗದ ಮಾಣಿಕ್ಯನ ನೆನಪಿನಂಗಳದಲ್ಲಿ” ಎಂಬ ನುಡಿಯೊಂದಿಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ದಿ.ಸಂಗಮೇಶ ಭೋಪಳೆ ಅವರು ಗಡಿಭಾಗದಲ್ಲಿ ಅಂಗಡಿ ಮುಂಗಟ್ಟುಗಳ ಮೇಲಿನ ನಾಮಫಲಕ 70 ರಷ್ಟು ಕನ್ನಡ ಭಾಷೆಯ ಬಳಕೆ ಆಗಬೇಕು. ಗಡಿಯಲ್ಲಿನ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳಿಸಬೇಕು. ವ್ಯವಹಾರಿಕ ಬಾಷೆ ಕನ್ನಡ ಭಾಷೆ ಬಳಸಬೇಕು ಎಂಬುದು ಅವರ ಆಶಯವಾಗಿತ್ತು. ಅವರ ಆಶಯದಂತೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, ಕನ್ನಡಕ್ಕಾಗಿ ಈ ಭಾಗದಲ್ಲಿ ಕಾರ್ಯ ನಿರ್ವಹಿಸಿದ ದಿ. ಸಂಗಮೇಶ ಭೋಪಳೆ ಅÀವರು ನಮ್ಮೆಲ್ಲರಿಗೂ ಮಾದರಿ. ಅವರು ಇನ್ನೂ ಕನ್ನಡಪರ ಮಾಡಬೇಕಾಗಿದ್ದ ಅಪೂರ್ಣ ಕಾರ್ಯವನ್ನು ತಾಲೂಕು ಕಸಾಪ ಮಾಡುತ್ತದೆ. ಈ ಕಾರ್ಯಕ್ಕೆ ಸಮಸ್ತ ಕನ್ನಡಾಭಿಮಾನಿಗಳ ಸಹಕಾರ ಅಗತ್ಯ. ಅವರು ಮಾಡಬೇಕಾಗಿದ್ದ ಕನ್ನಡದ ಕೆಲಸವನ್ನು ನಾವು ಮಾಡಿ ಮರೆಯಲಾಗದ ಮಾಣಿಕ್ಯನ ಹೆಸರು ಅಮರವಾಗಿಡೋಣ ಎಂದು ಹೇಳಿದರು.
ಈಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿ, ದಿ. ಸಂಗಮೇಶ ಭೋಪಳೆ ಧೈರ್ಯ ಹೊಂದಿರುವ ನಾಯಕತ್ವ ಅವರಲ್ಲಿತ್ತು ಹಾಗೂ ಈ ಭಾಗದಲ್ಲಿ ಯಾವ ರೀತಿಯಾಗಿ ಕನ್ನಡದ ಕೆಲಸವನ್ನು ಹೇಗೆ ಮಾಡಬೇಕೆಂದು ತೋರಿಸಿಕೊಟ್ಟ ಮಾಣಿಕ್ಯ ಆತನಾಗಿದ್ದ. ಆತ ಯಾವ ಯಾವ ಕನ್ನಡದ ಕೆಲಸವನ್ನು ಮಾಡಬೇಕೆಂದು ಯೋಚಿಸಿದ್ದ ಆ ಕೆಲಸ ಕಸಾಪದವರು ಮುಂದುವರಿಸಿ ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಪಿಎಸ್‍ಐ ನಾಗೇಂದ್ರ, ನಾಗೇಶ ಮೇತ್ರೆ, ಆಕಾಶ ಖಂಡಾಳೆ ಮಾತನಾಡಿದರು. ಕಸಾಪ ತಾಲೂಕು ಉಪಾಧ್ಯಕ್ಷ ಬಸವಕುಮಾರ ಕವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ದಿ. ಸಂಗಮೇಶ ಬೋಪಳೆ ಅವರ ಭಾವಚಿತ್ರಕ್ಕೆ ಅವರ ಅಭಿಮಾನಿಗಳಾದ ಅಭಿಷೇಕ, ಸಂತೋಷ ಮೋರೆ ಅವರಿಂದ ಕ್ಷೀರ ಅಭಿಷೇಕ ನಡೆಯಿತು. ದಿ. ಸಂಗಮೇಶ ಭೋಪಳೆ ಅವರ ಜನ್ಮ ದಿನದ ನಿಮಿತ್ಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 38 ಜನ ಸಾಧಕರಿಗೆ ಸನ್ಮಾನಿಸಲಾಯಿತು.
ಕಸಾಪ ಗೌರವ ಸಲಹೆಗಾರಾದ ವೀರಶೆಟ್ಟಿ ಮಲ್ಲಶೆಟ್ಟೆ, ಕಾಶಿನಾಥ್ ಪಾರಶೆಟ್ಟೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಡಾ.ಧಮೇರ್ಂದ್ರ ಭೋಸ್ಲೆ, ದಿ. ಸಂಗಮೇಶ ಭೋಪಳೆ ಅವರ ತಂದೆ ಚಂದ್ರಕಾಂತ ಭೋಪಳೆ, ಸೋಹದರ ಉಮೇಶ್, ಸೋಹದರಿಯರು ಭಾಗವಹಿಸಿದ್ದರು.
ಅರವಿಂದ್ ಹರಿಪಲ್ಲೆ, ದತ್ತು ಅಲಗೊಡ್ಕಕರ್, ಕಲ್ಯಾಣಿ ದಾನ, ಶ್ರೀಕಾಂತ್ ಕೌಟೆ, ರಾಜಕುಮಾರ ತೊಂಡಾರೆ, ಕಸಾಪ ಪದಾಧಿಕಾರಿಗಳಾದ ದೀಪಕ್ ಪಾಟೀಲ್, ಬಸವರಾಜ ಪಾಟೀಲ, ಸಚಿನ್ ಕೌಟೆ, ಶಂಕರ ಗೌಡಗಾಂವೆ, ಬಸವರಾಜ ಭೋಪಳೆ, ಕೇದಾರನಾಥ ಭೋಪಳೆ, ರಮೇಶ ಭೋಪಳೆ, ದಿ. ಸಂಗಮೇಶ ಭೋಪಳೆ ಅವರ ಗೆಳೆಯರು ಭಾಗವಹಿಸಿದ್ದರು. ರಾಜಕುಮಾರ ತೊಂಡಾರೆ ಸ್ವಾಗತಿಸಿ ವಂದಿಸಿದರೆ, ಕಸಾಪ ಸಂಘಟನಾ ಕಾರ್ಯದರ್ಶಿ ಡಿ.ಸಿ ಪಾಟೀಲ ನಿರೂಪಿಸಿದರು,