ಕನ್ನಡ ಭಾಷೆಯಲ್ಲ ಅದೊಂದು ಭಾವೈಕ್ಯದ ಸಂಕೇತ : ಮೂಲಗೆ

ಔರಾದ : ಜು.26:ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸುವುದು ಅನಿವಾರ್ಯವಿದೆ, ಭಾಷೆ ಉಳಿದಾಗ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯ, ಕನ್ನಡ ಭಾಷೆ ಸಂಭಂದ ಬೆಸೆದು ಬದುಕು ಕಟ್ಟಿ ಕೊಡುತ್ತದೆ, ಕನ್ನಡ ಕೇವಲ ಭಾಷೆಯಲ್ಲ ಅದು ಭಾವೈಕ್ಯದ ಸಂಕೇತ ಎಂದು ಸಾಹಿತಿ ಜಗನ್ನಾಥ ಮೂಲಗೆ ಅಭಿಪ್ರಾಯಪಟ್ಟರು.

ತಾಲೂಕಿನ ಗಡಿ ಭಾಗದ ಮಾನೂರ ಕೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ ವತಿಯಿಂದ ನಡೆದ ಸಾಹಿತ್ಯ ಸೊಬಗು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಕನ್ನಡ ಭಾಷೆ ಒಂದು ಸಂಸ್ಕೃತಿ, ಕನ್ನಡವನ್ನು ಕೇವಲ ಭಾಷೆಯಾಗಿ ನೋಡಬಾರದು, ಅದೂ ಕನ್ನಡಿಗರ ಸಮಸ್ತ ಶಕ್ತಿ ಕನ್ನಡ ನಮ್ಮ ಸಂಸ್ಕೃತಿಯ ಭಾಷೆ. ಕನ್ನಡದ ಉಳಿವು ಕನ್ನಡಗಿರಾದ ನಮ್ಮ ಕೈಯಲ್ಲಿದೆ. ಮಕ್ಕಳ ಮನಸ್ಸಿನಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡುವ ಮೂಲಕ ಕನ್ನಡ ಬೆಳೆಸಬೇಕು ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಾಲಿವಾನ ಉದಗಿರೆ ಅವರು ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಗಡಿ ಭಾಗದ ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮವನ್ನು ಹುಟ್ಟಿಸುವ ಕಾರ್ಯಕ್ರಮವೇ ಈ ಸಾಹಿತ್ಯ ಸೊಬಗು, ಮೂರು ರಾಜ್ಯಗಳ ಗಡಿ ಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು ಅತಿ ಸಂತೋಷ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಗುರು ದೇವಿದಾಸ ಮಡಿವಾಳ, ಎಂ.ಡಿ ನೈಮೋದಿನ, ಝರೆಪ್ಪ ಬಿರಾದರ, ಜ್ಞಾನೇಶ್ವರ ವಾಡಿಕಾರ, ಮಧುಕರ ಸುವರ್ಣಕಾರ, ಉದಯಕುಮಾರ ಬಡಚ್ಚಿ , ಸಂಜೀವಕುಮಾರ, ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.