ಕನ್ನಡ ಭಾಷೆಯನ್ನು ವೈಭವೀಕರಿಸಿದ ಕಲೆ ಕರಾವಳಿಯ ಯಕ್ಷಗಾನ

ದಾವಣಗೆರೆ.ಜ.೧೦; ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶ್ವವಿಖ್ಯಾತ ಐತಿಹಾಸಿಕ ಪರಂಪರೆಯ ಪುರಾತನ ಆರಾಧನಾ ಕಲೆ ಯಕ್ಷಗಾನ, ಕನ್ನಡ ಭಾಷೆಯನ್ನು ವೈಭವೀಕರಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ಸಂಭಾಷಣೆಯನ್ನು ಒಂದಕ್ಷರನೂ ಆಂಗ್ಲಪದ ಬಳಸದೇ ಯಕ್ಷಗಾನ ಪ್ರದರ್ಶನ ಕನ್ನಡ ನಾಡು-ನುಡಿಗೆ ಕಳಸಪ್ರಾಯ ಎಂದು ಹೇಳಿದರೆ ಅತಿಶಯೊಕ್ತಿಯಲ್ಲ. ಪಾರ್ಥಿಸುಬ್ಬರವರಂತಹ ಮಹಾನೀಯರು ಹುಟ್ಟು ಹಾಕಿದ ಈ ದೈವೀಕಲೆ ಕರಾವಳಿ ಜನತೆಯಲ್ಲಿ ರಕ್ತಗತವಾಗಿ ಬಂದಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಸೇರಿದಂತೆ ವಿವಿದ ಆಧ್ಯಾತ್ಮ ಕ್ಷೇತ್ರಗಳ ಆಶ್ರಯಗಳಲ್ಲಿ ಈ ಕಲಾ ಪ್ರಕಾರದ ಸಂಘಟನೆ ಅಂದಿನಿAದ ಇಂದಿನವರೆಗೆ ನಿತ್ಯ ನಿರಂತರವಾಗಿ ಬೆಳೆಯುತ್ತಿರುವುದು ಒಂದು ದಾಖಲೆ. ಪುರುಷ ಪ್ರಧಾನವಾದ ಗಂಡುಕಲೆ, ಗಡಸುಕಲೆಯಾದ ಯಕ್ಷಗಾನ ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರೂ ತಮ್ಮ ಅಪ್ರತಿಮ ಪ್ರತಿಭೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಇರುವುದು ಹೆಮ್ಮೆಯ ವಿಚಾರ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರೂ ಸೇರಿದಂತೆ ಅನೇಕ ಕಲಾ, ಸಾಹಿತ್ಯ ದಿಗ್ಗಜರು ಕಡಲಾಚೆಗೂ ಅಂತರಾಷ್ಟ್ರೀಯವಾಗಿ ಮೆರೆಸಿದ ಹೆಗ್ಗಳಿಕೆ ಪ್ರಸ್ತುತ ಯುವ ಪಿಳಿಗೆಗೆ ಮಾದರಿ ಎಂದು ದಾವಣಗೆರೆಯ ಕಲಾಕುಂಚ, ಯಕ್ಷರಂಗ ಸಂಸ್ಥೆಯ ಸಂಸ್ಥಾಪಕರೂ ಯಕ್ಷಗಾನ ಹವ್ಯಾಸಿ ಕಲಾವಿದರೂ ಆದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಬಯಲು ರಂಗ ಮಂದಿರದಲ್ಲಿ ಇತ್ತೀಚಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡ “ಯಕ್ಷ ಸಂಭ್ರಮ” 2 ದಿನಗಳ ಕಾರ್ಯಕ್ರಮದ ವಿಚಾರಗೋಷ್ಠಿಯಲ್ಲಿ  “ಕರ್ನಾಟಕ ಕರಾವಳಿ ಜಿಲ್ಲೆಗಳ ಯಕ್ಷಗಾನ ಕಲೆಯ ಸಾಮಾನ್ಯ ಸ್ವರೂಪ” ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ.ಎ.ಹೆಗಡೆಯವರು ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾದ ವೈ.ದೇವೇಂದ್ರಪ್ಪ ಸಮಾರಂಭ ಉದ್ಘಾಟಿಸಿರು, ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಹರಿಹರದ ಎಸ್.ಜೆ.ವಿ.ಪಿ. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎ.ಬಿ.ರಾಮಚಂದ್ರಪ್ಪ ವಹಿಸಿಕೊಂಡಿದ್ದರು.  “ಮೂಡಲಪಾಯ ಪರಿಷ್ಕರಣೆ” ಎಂಬ ವಿಚಾರವಾಗಿ ಹರಪನಹಳ್ಳಿ ಹಿರಿಯ ಮೂಡಲಪಾಯ ಕಲಾವಿದರಾದ ಬಿ.ಪರಶುರಾಮ್ ಉಪನ್ಯಾಸ ನೀಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟಾರ್ ಎಸ್.ಹೆಚ್. ಶಿವರುದ್ರಪ್ಪ,  ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ರಂಗಾರೆಡ್ಡಿ ಕೋಡಿ ರಾಂಪುರ ಮುನಿರೆಡ್ಡಿ ಸಿ., ಅರಸೀಕೆರೆಯ ಇಂಚರ ಗ್ರಾಮೀಣ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಕೆ.ಎಂ.ಕೊಟ್ರಯ್ಯ, ದಾವಣಗೆರೆಯ ಕರ್ನಾಟಕ ಗ್ರಾಮೀಣ ಹವ್ಯಾಸಿ ಯಕ್ಷಗಾನ ಮೂಡಲಪಾಯ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಎನ್.ಎಸ್.ರಾಜು, ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಜಿ.ಎಂ.ಗುರಮೂರ್ತಿಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.