ಕನ್ನಡ ಭಾಷೆಯನ್ನು ವಿಶ್ವವ್ಯಾಪ್ತಿಗೊಳಿಸಿದ ಏಕೈಕ ಕಲೆ ಯಕ್ಷಗಾನ


ಶಿವಮೊಗ್ಗ, ನ.೩೦; ಕರ್ನಾಟಕದ ಕರಾವಳಿ ಜಿಲ್ಲೆಗಳ ಐತಿಹಾಸಿಕ ಪರಂಪರೆಯ ಪುರಾತನ ಆರಾಧನಾ ಅಪ್ಪಟ ಜಾನಪದ ಕಲೆ ಯಕ್ಷಗಾನ ಅಚ್ಚ ಕನ್ನಡದ ಆಶು ಸಂಭಾಷಣೆಯೊAದಿಗೆ ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ವೈಭವೀಕರಿಸಿದ ಏಕೈಕ ಕಲಾ ಪ್ರಕಾರ ಯಕ್ಷಗಾನ ಪುರುಷ ಪ್ರಧಾನವಾದ ಈ ಗಂಡು ಕಲೆ ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರು ಬದ್ದತೆಯಿಂದ ಅನುಸರಿಸಿ, ಶಿಸ್ತುಬದ್ಧವಾಗಿ ಕಲಿತು ಮಹಿಳಾ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ, ಅಂತರಾಷ್ಟಿçÃಯ ಮಟ್ಟದಲ್ಲಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ದಾವಣಗೆರೆಯ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಸಂಸ್ಥಾಪಕರೂ, ಹವ್ಯಾಸಿ ಯಕ್ಷಗಾನ ಕಲಾವಿದರೂ, ಸಂಘಟಕರೂ ಆದ ಸಾಲಿಗ್ರಾಮ ಗಣೇಶ್ ಶೆಣೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಶಿವಮೊಗ್ಗದ ಕುವೆಂಪು ರಂಗಮAದಿರದಲ್ಲಿ ನಿನ್ನೆ ನಡೆದ ಶಿವಮೊಗ್ಗದ ಸುಮುಖ ಕಲಾಕೇಂದ್ರ ಯಕ್ಷಗಾನ ಸಂಸ್ಥೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಮಲೆನಾಡಿನ ಶಿವಮೊಗ್ಗದಲ್ಲಿ ನಿರಂತರವಾಗಿ ಯಕ್ಷಗಾನವನ್ನು ಕಠಿಣ ಪರಿಶ್ರಮದಿಂದ ಮಹಿಳೆಯರಿಗೆ, ಮಕ್ಕಳಿಗೆ ಕಲಿಸಿ, ಸೂಕ್ತ ಮುಕ್ತವಾದ ವೇದಿಕೆ ಕಲ್ಪಿಸಿ ಸಾಧನೆ ಮಾಡುತ್ತಿರುವ ಶ್ರೀಮತಿ ಕಿರಣ್‌ಪೈ ಯವರು ವಂಶಪರAಪರೆ, ರಕ್ತಗತವಾಗಿ ಬಂದಿರುವ ಯಕ್ಷಾಭಿಮಾನ ಇತರೆ ಮಹಿಳೆಯರಿಗೆ ಸಂಘಟಕರಿಗೆ ಮಾದರಿ ಎಂದರು. ಮುಂದುವರಿದು ಕರ್ನಾಟಕ ಘನ ಸರ್ಕಾರ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯಕ್ಷಗಾನ ಹಿರಿಯ ಸಾಧಕ ಕರಾವಳಿ ಜಿಲ್ಲೆಗಳನ್ನು ಕಡೆಗಣಿಸಿದ್ದು ವಿಷಾದದ ಸಂಗತಿ. ಕಳೆದ ಒಂದುವರೆ ವರ್ಷಗಳಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಕೀರ್ತಿಶೇಷ ಎಂ.ಎ.ಹೆಗಡೆಯವರು ಅಸ್ತಂಗತರಾದ ಮೇಲೆ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡದೇ ನಿರ್ಲಕ್ಷ ಮಾಡುತ್ತಿರುವುದು ಬೇಸರದ ವಿಚಾರ ಎಂದು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಹಳ್ಳಾಡಿ ಸುಬ್ರಾಯಮಲ್ಯ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಚಂಡೆ, ಮದ್ದಲೆವಾದಕ ವೈ.ಸದಾನಂದ ಪ್ರಭು ಏಳಜಿತ ಇವರಿಗೆ ಪ್ರದಾನ ಮಾಡಲಾಯಿತು. ಶಿವಮೊಗ್ಗದ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಸುನೀತಾ ಅಪ್ಪಣ್ಣ ಯಕ್ಷಗಾನ ಸಂಬಂಧಿ “ಪುಸ್ತಕಮನೆ” ಉದ್ಘಾಟನೆ ಮಾಡಿ, ಮುಂದಿನ ಪೀಳಿಗೆಗೆ ಯಕ್ಷಗಾನದ ಎಲ್ಲಾ ಮಜಲುಗಳ ಪರಂಪರೆಗಳ ಪರಿಚಯ ಅದರ ಪ್ರಾಧಾನ್ಯತೆಯ ಸಾಮಾನ್ಯ ಜ್ಞಾನದ ಅವರಿಗೆ ಯಕ್ಷಗಾನ ಸಂಬAಧಿತ ಈ ಪುಸ್ತಕ ಮನೆ ತುಂಬಾ ಅಗತ್ಯ ಎಂದರು. ಯಕ್ಷಗಾನ ಅಭಿಮಾನಿ ಪೋಷಕರು ಡಾ. ಎಂ.ಬಿ.ರವಿ ಪೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯಕ್ಷಗಾನ ಸಾಧಕರ ಪರಿಚಯವನ್ನು ಮನೋಹರ ಕಾಮತ್ ಮತ್ತು ಅರ್ಜುನ್ ಪೈ ಮಾಡಿಕೊಟ್ಟರು. ಶಿವಮೊಗ್ಗದ ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ಭಾಸ್ಕರ್ ಜಿ.ಕಾಮತ್, ಸಾಮಾಜಿಕ ಕಾರ್ಯಕರ್ತರು ಎಂ.ಎಂ.ದಿನೇಶ್ ಪೈ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.