ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ

ಮೈಸೂರು,ನ.6:- ಪರಿಸರ ಸ್ನೇಹಿ ತಂಡ ಹಾಗೂ ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಬನ್ನಿ ನಮ್ಮ ಸಂಗಡ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯ ವಿಜೇತರಿಗೆ ಚಾಮುಂಡಿಪುರಂ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹೆಸರಿನಲ್ಲಿ ಪಾರಿತೋಷಕ ಪ್ರಶಸ್ತಿ ನೀಡಲಾಯಿತು ಆನಂತರ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.
ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮೊದಲನೇ ಬಹುಮಾನ ಶ್ರೀನಗರದ ನಿವಾಸಿ ಕುಮಾರಿ ಅನನ್ಯ ಎಂ ರವರಿಗೆ 3000ನಗದು ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪಾರಿತೋಷಕ ಪ್ರಶಸ್ತಿ, ಎರಡನೇ ಬಹುಮಾನ ಎಚ್ ಡಿ ಕೋಟೆಯ ಸರಗೂರಿನ ನಿವಾಸಿ ಚಿನ್ಮಯಿ 2000ರೂ ನಗದು ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ಪಾರಿತೋಷಕ ಪ್ರಶಸ್ತಿ ತೃತೀಯ ಬಹುಮಾನ ಉಡುಪಿಯ ಬೈಂದೂರು ತಾಲ್ಲೂಕು ಕುಮಾರಿ ರಿಷಿಕಾ 1000ರೂ ನಗದು ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿನಲ್ಲಿ ಪಾರಿತೋಷಕ ಪ್ರಶಸ್ತಿ ನೀಡಲಾಯಿತು.
ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಕರ್ನಾಟಕ ರಾಜ್ಯಾದ್ಯಂತ 196ಸ್ಪರ್ಧಿಗಳು ಸ್ಪರ್ಧಿಗಳು 3ನಿಮಿಷದ ತುಣುಕು (ವಿಡಿಯೋ) ಗಳನ್ನು ಸಂಘಟನೆಯ ಸದಸ್ಯರ ವಾಟ್ಸಾಪ್ ಸಂಖ್ಯೆಗೆ ಕಲಿಸುವ ಮೂಲಕ ಸ್ಪರ್ಧೆಗೆ ಭಾಗವಹಿಸಿದ್ದು, ತೀರ್ಪುಗಾರರು ಸ್ಪರ್ಧಿಸಿದ ಪ್ರತಿಯೊಬ್ಬರ ವಿಡಿಯೋವನ್ನ ವೀಕ್ಷಣೆ ಮಾಡಿ ಅದರಲ್ಲಿ ಸ್ಪರ್ಧಿಗಳ ಭಾಷಾಶೈಲಿ, ಸಂವಹನ ಕೌಶಲ್ಯ, ಸ್ಪಷ್ಟತೆಯ ಆಧಾರದ ಮೇಲೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಭಾಷಣವನ್ನು ಮಹಾಪೌರರಾದ ಸುನಂದಾ ಪಾಲನೇತ್ರ ಮಾತನಡಿ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಹಾಗೂ ಅತ್ಯಂತ ಸುಂದರ ಭಾಷೆ, ಆಂಗ್ಲ ಭಾಷೆ ಹುಟ್ಟುವ ನೂರು ವರ್ಷದ ಮೊದಲೇ ಕನ್ನಡ ಭಾಷೆ ಅಭಿವೃದ್ಧಿ ಸಾಧಿಸಿತ್ತು ಎಂದರು.
ನವೆಂಬರ್ ತಿಂಗಳಿಗೆ ಕನ್ನಡ ಸೀಮಿತವಾಗದೆ ಇಡೀ ವರ್ಷವೂ ಕನ್ನಡ ನಾಡು, ನುಡಿಯ ಉಳಿವಿಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಭಾಷಣ ಮಾತನಾಡಿದ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇನ್ನೂ ಹಲವು ಪ್ರಶಸ್ತಿ ಪಡೆಯುವ ಸಾಮಥ್ರ್ಯ ಕನ್ನಡಕ್ಕಿದೆ. ಕನ್ನಡ ಪ್ರೇಮವನ್ನು ಜಾಗೃತಗೊಳಿಸುವುದರ ಜೊತೆಗೆ ಭಾಷೆಯ ವ್ಯಾಪಕ ಬಳಕೆಗೆ ಪ್ರೇರಣೆ ನೀಡಬೇಕು.
ನೂರಾರು ಇತಿಹಾಸ ಪ್ರಸಿದ್ಧ ರಾಜಮಹಾರಾಜರು ಆಳಿದ್ದು, ಕವಿಗಳು, ಸಾಹಿತಿಗಳು, ಸಾಕಷ್ಟು ಮಂದಿ ಕನ್ನಡದಲ್ಲಿ ಕೃಷಿ ಮಾಡಿದ್ದು, ಕನ್ನಡಿಗರೆಂದು ಹೇಳಿಕೊಳ್ಳಲು ಗರ್ವಪಡಬಹುದಾಗಿದೆ ಎಂದು ತಿಳಿಸಿದರು. ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ನೀಡಿರುವ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಉಳಿಸಲು ಮುಂದಾಗಬೇಕುನಮ್ಮ ಹಕ್ಕುಗಳಿಗಾಗಿ ನಾವೇ ಹೋರಾಟದ ಹಾದಿ ತುಳಿದು ನ್ಯಾಯ ಪಡೆಯಬೇಕು ಇಲ್ಲವಾದರೆ ಯಾರು ನಮ್ಮನ್ನು ನೋಡುವವರು ಸಿಗುವುದಿಲ್ಲ. ವಿದ್ಯೆ ಕಲಿತು ಒಳ್ಳೆಯ ಮನುಷ್ಯರಾಗಿ ಜೀವನ ಸಾಗಿಸಬೇಕು’ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾಪೌರರಾದ ಸುನಂದಾ ಪಾಲನೇತ್ರ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ನಗರ ಪಾಲಿಕಾ ಸದಸ್ಯರಾದ ಮಾ.ವಿ ರಾಮಪ್ರಸಾದ್, ಕಾಂಗ್ರೆಸ್ ಯುವ ಮುಖಂಡ ಎನ್.ಎಂ ನವೀನ್ ಕುಮಾರ್, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಬಿಜೆಪಿ ಮುಖಂಡರಾದ ಕೇಬಲ್ ಮಹೇಶ್, ಅಪೂರ್ವ ಸುರೇಶ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸುಚೇಂದ್ರ, ಚಕ್ರಪಾಣಿ, ಜೀವನ್ ಹಾಗೂ ಇನ್ನಿತರರು ಹಾಜರಿದ್ದರು.