
ಹುಮನಾಬಾದ್: ನ.2:ಪ್ರತಿಯೂಬ್ಬರು ಕನ್ನಡ ಭಾಷೆಗೆ ಮೊದಲ ಆಧ್ಯತೆ ನೀಡುವುದರ ಜತೆಗೆ ಕನ್ನಡ ನಾಡು, ನುಡಿ ಜಲ ಸರ್ಷಣೆಗೆ ಮುಂದಾಗಬೇಕು, ಎಂದು ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ನುಡಿದರು.
ಪಟ್ಟಣದ ನಗರೇಶ್ವರ ದೇವಸ್ಥಾನ ಹತ್ತಿರದ ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್ಟ್ನ್ ಕಚೇರಿಯಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನರವೇರಿಸಿ ಅವರು ಮಾತನಾಡಿದರು.
ನಮ್ಮ ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕøತಿಯು ಮನುಷ್ಯನ ಜೀವನದಲ್ಲಿ ಒಂದು ಹೊಸ ಹುರುಪು ತುಂಬುವಂತಹದ್ದು, ಯುವ ಸಮುದಾಯ ನಮ್ಮ ನಾಡಿನ ಸಂಗೀತ, ಸಾಹಿತ್ಯ, ಜಾನಪದ, ನೃತ್ಯ, ಕಲೆಯನ್ನು ಉಳಿಸಿ ಬೆಳೆಸಬೇಕು, ಎಂದು ಸಲಹೇ ನೀಡಿದರು.
ಶ್ರೀ ಅನ್ನಪುರ್ಣೇಶ್ವರಿ ದೇವಿ ಮಹಿಳಾ ಟ್ರಸ್‍ನ ತಾಲ್ಲೂಕು ಉಪಾಧ್ಯಕ್ಷೆ ಶೋಭಾ ಗುರಮಿಟಕಲ್, ಕಾರ್ಯದರ್ಶಿ ಸುರೇಖಾ ವಿಭೂತಿ, ಸದಸ್ಯರಾದ್ ದ್ರೌಪತಿ ಶಮಶಾಬಾದೆ, ವಿಮಲಾ ಸಂಗಮಕರ್, ಅನಿತಾ ಅಶೋಕ, ಇದ್ದರು.