ಕನ್ನಡ ಭಾಷೆಗೆ ಮೊದಲು ಆದ್ಯತೆ ಇರಲಿ

ದೇವನಹಳ್ಳಿ ಮಾ.೮-ಮಕ್ಕಳಿಗೆ ಟಿ.ವಿ, ಮೊಬೈಲ್ ಕೊಡಬೇಡಿ, ಎಂದು ಚಲನ ಚಿತ್ರನಟಿ ಸಂಯುಕ್ತ ಹೊರನಾಡ್ ಪೋಷಕರಿಗೆ ಮನವಿಮಾಡಿದ್ರು ನಾನು ಸಿನಿಮಾರಂಗದಲ್ಲಿದ್ದರು ಸಹ ನಮ್ಮ ಪೋಷಕರು ನನಗೆ ೧೮ ವರ್ಷ ಆಗುವವರೆಗೂ ಎಲ್ಲವನ್ನು ನಿಷೇದ ಮಾಡಿದ್ದರು. ಸಂಗೀತ ಕ್ರೀಡೆಗಳಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ಭಾಗವಹಿಸಲು ಪ್ರೋತ್ಸಾಹಿಸಿದರು ಎಂದರು.
ಪ್ರತಿಯೊಬ್ಬ ಮಕ್ಕಳ ತಂದೆ ತಾಯಿಗಳು ತಮ್ಮ ಮಕ್ಕಳು ಒಂದು ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂಬ ಕನಸನ್ನು ಹೊಂದಿರುತ್ತಾರ,ಅದರಂತೆಯೇ ಅವರು ಮಕ್ಕಳನ್ನು ಉತ್ತಮ ಶಿಕ್ಷಣವನ್ನು ನೀಡುವಂತಹ ಶಾಲೆಗಳಿಗೆ ಸೇರಿಸುವರು, ಅವರು ಯಾವುದೇ ಶಾಲೆಗಳಿಗೆ ಕಳುಹಿಸಿದರು ಸಹ ಮೊದಲು ಅವರು ತಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಲಿಸುವುದಲ್ಲದೆ, ಮಾತೃಭಾಷೆಗೆ ಪ್ರಾಧಾನ್ಯತೆ ನೀಡುವುದರಿಂದ ನಮ್ಮ ಭಾಷೆಗೆ ಗೌರವ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಸಬಾ ಹೋಬಳಿ ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಇನ್ನೋವೇಟರ್ಸ್ ಇಂಟರ್ನ್ಯಾಷನಲ್ ಶಾಲೆಯ ಪಿಯಸ್ತಾ ಐಡಿಯಾ ಪೆಸ್ಟಿವಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಮಕ್ಕಳು ವಿಜ್ಞಾನ ಗಣಿತ ಹಾಗೂ ಇತರೆ ವಿಷಯಗಳ ಬಗ್ಗೆ ಉತ್ತಮವಾದ ಪ್ರಯೋಗಗಳನ್ನು ಮಾಡಿರುವುದು ನನಗೆ ಖುಷಿಯಾಗಿದೆ, ಪೋಷಕರು ಯಾವುದೇ ಇಂಡಸ್ಟ್ರೀಯಲ್ಲಿ ಕೆಲಸ ಮಾಡಲಿ ನಮ್ಮ ಭಾಷೆಗೆ ಆದ್ಯತೆ ನೀಡಿ ನಾನು ಅನ್ಯ ಭಾಷೆಗಳಲ್ಲಿ ಕೆಲಸ ಮಾಡಿದರು ನನ್ನ ಡೈಲಾಗ್‌ಗಳನ್ನು ಕನ್ನಡದಲ್ಲೇ ಬರೆಯುತ್ತೇನೆ. ಮಾತೃಭಾಷೆಗೆ ಪ್ರಾಮುಖ್ಯತೆ ಕೊಟ್ಟು ಕನ್ನಡ ಕಲಿಸಿದರೆ ಇತರೆ ವಿಷಯಗಳು ಸರಾಗವಾಗಿ ಕಲಿಯಬಹುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ ಶಾಲೆಯ ಸಂಸ್ಥಾಪಕರಾದ ಅಶೋಕ್ ಅವರು ರೈತ ಕುಟುಂಬದಲ್ಲಿ ಹುಟ್ಟಿ ದೇವನಹಳ್ಳಿ ಪಟ್ಟಣದಲ್ಲಿ ಬಹಳ ವರ್ಷಗಳ ಹಿಂದೆ ಶಾಲೆಯನ್ನು ಪ್ರಾರಂಭಿಸಿ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದ್ದಾರೆ ನೂತನವಾಗಿ ಪ್ರಾರಂಭಿಸಿರುವ ಶಾಲೆ ಮತ್ತಷ್ಟು ಯಶಸ್ವಿಯಾಗಲಿ ಎಂದರು.
ನ್ನೋವೇಟರ್ಸ್ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ರಂಜಿತ ಸಿದ್ದಪ್ಪಾಜಿ ಮಾತನಾಡಿ ಗ್ರಾಮಾಂತರ ಭಾಗದಲ್ಲೂ ಮಕ್ಕಳಿಗೆ ಶಾಲಾ ಆರಂಭದ ಹಂತದಿಂದಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ ಮಕ್ಕಳು ಶಾಲೆಯ ಪೆಸ್ಟಿವಲ್‌ನಲ್ಲಿ ವೈಜ್ಞಾನಿಕ ಕೌಶಲ್ಯದಿಂದ ಮಾಡಿರುವಂತಹ ವಿಜ್ಞಾನ ಪ್ರಯೋಗಗಳನ್ನು ಅನಾವರಣ, ಕೃತಕ ತಂತ್ರಜ್ಞಾನಗಳ ಮೇಳದ ಜೊತೆ ಜೊತೆಗೆ, ಮಕ್ಕಳು ಹಾಗೂ ಪೋಷಕರು ವಿವಿಧ ಬಗೆಯ ಆಟಗಳನ್ನು ಆಯೋಜನೆ ಮಾಡಲಾಗಿದ್ದು,ಇದರಿಂದ ಪೋಷಕರು ಮಕ್ಕಳೊಟ್ಟಿಗೆ ಮನರಂಜನೆ ಯೊಂದಿಗೆ ಕಾಲ ಕಳೆಯುತ್ತಿದ್ದಾರೆ,

ಶಾಲೆಯ ಸಂಸ್ಥಾಪಕ ಕೆ.ಬಿ.ಅಶೋಕ್, ತ್ಯಾಗರಾಜು, ವೇಣುಗೋಪಾಲ್, ಶಾಲೆಯ ಮುಖ್ಯಶಿಕ್ಷಕಿ ರೆಪಿಟಲ್ ಸುಕನ್ಯ, ಸಹಶಿಕ್ಷಕರು ಹಾಜರಿದ್ದರು.