ಕನ್ನಡ ಭಾಷೆಗೆ ದೇವ ಭಾಷೆ ಸ್ಥಾನ ಕೊಟ್ಟವರು ಬಸವಾದಿ ಶರಣರು

ಭಾಲ್ಕಿ:ನ.23:ಪಟ್ಟಣದ ಚನ್ನಬಸವಾಶ್ರಮದಲ್ಲಿ 283 ನೆಯ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ದಿವ್ಯನೇತೃತ್ವ ವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಕನ್ನಡ ಭಾಷೆಗೆ ದೇವ ಭಾಷೆಯ ಸ್ಥಾನ ಕೊಟ್ಟವರು ಬಸವಾದಿ ಶರಣರು. ಕನ್ನಡ ಎಂಬುದು ಬರಿ ಒಂದು ಭಾಷೆಯಲ್ಲ. ಅದೊಂದು ಸಂಸ್ಕøತಿ, ಪರಂಪರೆಯಾಗಿದೆ. ಭಾರತೀಯ ಭಾಷೆಗಳಲ್ಲಿ ಶ್ರೇಷ್ಠ ಪರಂಪರೆ ಹೊಂದಿರುವ ಕನ್ನಡ ಭಾಷೆಗೆ ಅತ್ಯಂತ ಮೆರಗು ತಂದುಕೊಟ್ಟವರು ಬಸವಾದಿ ಶರಣರು. 12ನೇ ಶತಮಾನದಲ್ಲಿ ರೂಪತಾಳಿದ ಶರಣರ ಕ್ರಾಂತಿ ಅದು ಒಂದು ಅರ್ಥದಲ್ಲಿ ಭಾಷೆಯ ಕ್ರಾಂತಿಯಾಗಿತ್ತು. ಕನ್ನಡ ನಾಡಿನಲ್ಲಿ ಮೆರೆಯುತ್ತಿದ್ದ ಬೇರೆ ಭಾಷೆಯ ಅಕ್ರಮಣವನ್ನು ಶರಣರು ದೂರು ಸರಿಸಿ, ಈ ಗಂಧದ ಗುಡಿಯಲ್ಲಿ ಕನ್ನಡಾಂಬೆಯ ಪ್ರತಿಷ್ಠಾಪನೆ ಮಾಡಿದರು. ಶರಣ ಚಳುವಳಿಯಲ್ಲಿ ಭಾಗಿಯಾದ ಕಾಶ್ಮೀರದ ಮಹಾದೇವ ಭೂಪಾಲ, ಅಫ್‍ಘಾನಿಸ್ತಾನದ ಮರುಳಶಂಕರದೇವರು, ಮಹಾರಾಷ್ಟ್ರದ ಉರಿಲಿಂಗಪೆದ್ದಿ, ಸೌರಾಷ್ಟ್ರದ ಆದಯ್ಯ, ಆಂಧ್ರದ ಕಿನ್ನರಿ ಬೊಮ್ಮಯ್ಯ, ತಮಿಳುನಾಡಿನ ಮಾದಾರ ಚೆನ್ನಯ್ಯ, ಓರಿಸ್ಸಾದ ಸುಜ್ಞಾನಿದೇವ, ಕೇರಳದ ಗೊಗ್ಗವ್ವೆ ಮುಂತಾದ ಎಲ್ಲ ಶರಣರು ತಮ್ಮ ಭಾಷೆಯಲ್ಲಿ ವಚನಗಳು ಬರೆಯದೆ ಕನ್ನಡದಲ್ಲಿಯೇ ವಚನಗಳನ್ನು ಬರೆದಿದ್ದಾರೆ. ಇದು ಭಾರತೀಯ ಭಾಷಾ ಪರಂಪರೆಯ ಇತಿಹಾಸದಲ್ಲಿಯ ಬಹುದೊಡ್ಡ ಕ್ರಾಂತಿಯೆಂದೆ ಹೇಳಬಹುದು. ಬಸವಾದಿ ಶರಣರ ಶ್ರೇಷ್ಠ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದವರು ಡಾ. ಚನ್ನಬಸವ ಪಟ್ಟದ್ದೇವರು ಮತ್ತು ಡಾ.ಬಸವಲಿಂಗ ಪಟ್ಟದ್ದೇವರು. ಭಾಲ್ಕಿಯ ಮಠ ಕನ್ನಡದ ಮಠ. ಭಾಲ್ಕಿಯ ಪಟ್ಟದ್ದೇವರು ಕನ್ನಡದ ಪಟ್ಟದ್ದೇವರೆಂದು ಖ್ಯಾತಿ ಪಡೆದಿದ್ದಾರೆ. ಅದಕ್ಕೆ ಅವರು ಕನ್ನಡ ಮತ್ತು ಬಸವ ಈ ಎರಡು ತಮ್ಮ ಕಣ್ಣುಗಳಂತೆ ಭಾವಿಸಿ ಈ ಜಗತ್ತನ್ನು ಪ್ರೀತಿಸಿದರು. ಇಂತಹವರ ಭೂಮಿಯಲ್ಲಿ ಜನ್ಮತಾಳಿದ ನಾವೆಲ್ಲರೂ ಕನ್ನಡ ನಮ್ಮ ತಾಯಿ ಭಾಷೆ ಎಂದು ನಾವು ಎಂದೂ ಮರೆಯಬಾರದು. ನಮ್ಮ ಮನೆಯಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಬೇಕು ಅಂದರೆ ಕನ್ನಡ ಉಳಿಯುತ್ತದೆ ಬೆಳೆಯುತ್ತದೆ ಎಂದು ನುಡಿದರು.
ಸಮಾರಂಭದ ಉದ್ಘಾಟನೆ, ಶರಣ ಸುರೇಶ ಚನ್ನಶೆಟ್ಟಿ, ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೀದರ ನೆರವೇರಿಸಿರು. ಅಧ್ಯಕ್ಷತೆ, ಶರಣ ನಾಗಭೂಷಣ ಮಾಮಡಿ, ತಾಲ್ಲೂಕಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಭಾಲ್ಕಿ ಅನುಭಾವ, ಶರಣ ಗಿರೀಶ ಎಂ.ವಿ., ಮುಖ್ಯಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಡ್ಯಾಳ ಗೌರವ ಉಪಸ್ಥಿತಿ, ಶರಣ ಸಂತೋಷ ಬಿ.ಜಿ.ಪಾಟೀಲ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ನಗರ ಘಟಕ, ಭಾಲ್ಕಿ, ಶರಣ ಸಂಜುಕುಮಾರ ನಾವದಗಿ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ, ತಾಲೂಕಾ ಭಾಲ್ಕಿ, ಶರಣ ರಾಜಕುಮಾರ ಡಾವರಗಾಂವೆ, ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, ಯುವಸೇನೆ, ಭಾಲ್ಕಿ , ಶರಣ ಚಂದು ಸಂಪಂಗೆ, ಗೌರವಾಧ್ಯಕ್ಷರು, ಕ.ರ.ವೇ.ಸ್ವಾಭಿಮಾನಿ ಬಣ, ಭಾಲ್ಕಿ, ಶರಣ ವಿಜಯಕುಮಾರ ಕಾಸ್ಲೆ, ಕರುನಾಡ ಕಾರ್ಮಿಕರ ವೇದಿಕೆ, ಭಾಲ್ಕಿ , ಶರಣ ಅನೀಲ ಹಾಲಪುರ್ಗೆ, ಜಿಲ್ಲಾಧ್ಯಕ್ಷರು, ಕರುನಾಡು ಕಾರ್ಮಿಕ ವೇದಿಕೆ, ಬೀದರ ಶರಣ ಸಂಜುಕುಮಾರ ಪಾಟೀಲ, ತಾಲೂಕಾ ಅಧ್ಯಕ್ಷರು, ಜಯ ಕರ್ನಾಟಕ, ಜನಪರ ವೇದಿಕೆ, ಭಾಲ್ಕಿ ಶರಣ ಮಾಳಸ್ಕಾಂತ ಕೆ. ವಾಗೆ, ಅಧ್ಯಕ್ಷರು, ಜನ್ಮಭೂಮಿ ರಕ್ಷಣಾ ಪಡೆ, ಕಲ್ಯಾಣ ಕರ್ನಾಟಕ ವಿಭಾಗ, ಕಲಬುರಗಿ ಶರಣ ಭದ್ರೇಶ ಸ್ವಾಮಿ, ಜನ್ಮಭೂಮಿ ರಕ್ಷಣಾ ಪಡೆ, ತಾಲೂಕಾ ಘಟಕ, ಭಾಲ್ಕಿ, ಶರಣ ಸಂಗಮೇಶ ಜ್ಯಾಂತೆ, ಅವಿನಾಶ, ಶರಣೆ ಸುನೀತಾ ಮಮ್ಮಾ, ಅಧ್ಯಕ್ಷರು, ಕ.ಸಾ.ಪ.ನಗರ ಮಹಿಳಾ ಘಟಕ, ಭಾಲ್ಕಿ ಮುಂತಾದವರು ಉಪಸ್ಥಿತರಿದ್ದರು. ಶರಣ ದೀಪಕ ಥಮಕೆ ನಿರೂಪಣೆ ಮಾಡಿದರು. ಗುರುಪ್ರಸಾದ ಶಾಲೆಯ ಮಕ್ಕಳಿಮದ ನಾಡಗೀತೆ ಹಾಗೂ ವಿವಿಧ ಶಾಲೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಶರಣೆ ಮೀನಾಕ್ಷಿ ಶರಣ ಬಸವರಾಜ ಬಗ್ದುರಿ ಭಾಲ್ಕಿ ಮಸ್ಕತ್ ಅವರಿಂದ ದಾಸೋಹ ನಡೆಯಿತು.