ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ :ದರ್ಶನಾಪುರ

ಶಹಾಪೂರ:ಜ.17:ಕನ್ನಡ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕøತಿ, ಜಾನಪದ ಕನ್ನಡ-ಕನ್ನಡಿಗ-ಕರ್ನಾಟಕ ಹಾಗೂ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಕನ್ನಡ ಜನತೆ ಮೇಲೆ ಇದೆ ಎಂದು ಶಹಾಪೂರ ತಾಲೂಕು ಜನಪ್ರಿಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಶಾಸಕರ ಕಾರ್ಯಾಲಯದಲ್ಲಿ ನೂತನ ಶಹಾಪುರ ತಾಲೂಕಿನ ಭೀಗುಡಿ ವಲಯದ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶರಣಬಸವ ಪೆÇೀಲಿಸ್ ಬಿರಾದರ್ ಅವರಿಗೆ ಸನ್ಮಾನಿಸಿ ಮಾತನಾಡಿದರು ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ಇತಿಹಾಸ ಹೊಂದಿದೆ ಎಂದು ಹೇಳಿದರು .
ಶಹಾಪುರ ತಾಲೂಕ ಕಸಾಪ ಅಧ್ಯಕ್ಷರಾದ ಶ್ರೀ ರವೀಂದ್ರನಾಥ ಹೊಸ್ಮನಿ ಅವರು ಮಾತನಾಡಿ
ಸಾಹಿತಿ
ಚಿಂತನೆಗಳನ್ನು ಕಾರ್ಯಗತಗೊಳಿಸಲು ಕೋಟಿ, ಕೋಟಿ ಕನ್ನಡಿಗರ ಪ್ರೀತಿಪೂರ್ವಕ ಬೆಂಬಲ ಪಡೆದು ಅವರು ಉತ್ತಮ ಭಾವ ಹೊಂದಿ ನೂರಾರು ಮಹಾನುಭಾವರು ಶ್ರಮದಿಂದ ಕಟ್ಟಿರುವ, ಉನ್ನತವಾದ ಪರಂಪರೆಯನ್ನು ಹೊಂದಿರುವ, ವಿಶ್ವಮಾನ್ಯವಾದ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದಿದೆ ಆ ಮೂಲಕ ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು ಎಂದರು ಹೇಳಿದರು.

ಭೀಗುಡಿ ವಲಯದ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶರಣಬಸವ ಪೆÇೀಲಿಸ್ ಬಿರಾದರ್ ಸನ್ಮಾನ ಸ್ವೀಕರಿಸಿ ಕೊಂಡು ಮಾತನಾಡಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಕುರಿತು ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಸದುದ್ದೇಶದಿಂದ ಹಾಗೂ ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಷತ್ತಿನಲ್ಲಿ ಆಡಳಿತಾತ್ಮಕ ಸುಧಾರಣೆ ತರುವ ಸಲುವಾಗಿ ಎಲ್ಲರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ದೇವಿಂದ್ರಪ್ಪ ಮೇಟಿ,ಪರವತರಡ್ಡಿ ಪೆÇೀಲಿಸ್ ಪಾಟೀಲ್, ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ,ಸುಭಾಷ.ಪೂಜಾರಿ, ಗೋಗಿ ವಲಯದ ಕಸಾಪ ಅಧ್ಯಕ್ಷರಾದ ಶ್ರೀ ಮಲ್ಲಣಗೌಡ, ಕಸಾಪ ತಾಲೂಕು ಗೌರವ ಕಾರ್ಯದರ್ಶಿಯಾದ ಶ್ರೀ ಸುರೇಶ ಅರುಣಿ,ರಾಮು ಸಗರ, ಸಂಗಮೇಶ ಕುಂಬಾರ, ಭೀಮನಗೌಡ ಪೆÇೀಲಿಸ್ ಪಾಟೀಲ್ ಸೈದಾಪುರ,ಚಂದ್ರಶೇಖರ ಕರ್ನಾಳ, ನಿಂಗಣ್ಣ ತಿಪ್ಪನಹಳ್ಳಿ, ತಿಪ್ಪಣ್ಣ ಖ್ಯಾತನಾಳ, ಅಶೋಕ ಅಂಗಡಿ, ದೇವಿಂದ್ರಪ್ಪ ಕರಡಕಲ್,ಹಣಮಂತ ಬಿಂಗಿ, ಗೌಸಪಟೇಲ್ ಮುದನೂರ, ನಿಂಗಣ್ಣ ನಾಯ್ಕಲ್, ಶ್ರೀಕಾಂತ್ ರಾಠೋಡ ಹಾಗೂ ಇತರರಿದ್ದರು.