ಕನ್ನಡ ಭವನ ನಿರ್ಮಾಣ ಜಿಲ್ಲೆಯ ಐತಿಹಾಸಿಕ ಕ್ಷಣ: ಗುರುನಾಥ ಅಕ್ಕಣ್ಣ

ಬೀದರ:ಫೆ.5: ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣವಾಗಿರುವುದು ಐತಿಹಾಸಿಕ ಕ್ಷಣವಾಗಿದೆ. ಕನ್ನಡಕ್ಕಾಗಿ ಜಿಲ್ಲೆಯಲ್ಲಿದ್ದ ದೊಡ್ಡ ಕೊರತೆ ನೀಗಿದೆ ಎಂದು ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಭವನ ಉದ್ಘಾಟನಾ ಸಮಾರಂಭದ ಪ್ರಯುಕ್ತ ಫೆ.3ರಂದು ನೂತನ ಕನ್ನಡ ಭವನದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ಕವನ ರಚಿಸಿವುದು ಸುಲಭವಲ್ಲ. ಕವಿಯಾದವನ ತಪ್ಪಸ್ಸಿನ ಪರಿಕಲ್ಪನೆ ಯಲ್ಲಿ ಕವನ ಮೂಡುತ್ತದೆ. ಕವಿಯ ಧ್ಯಾನಸ್ಥ ಸ್ಥಿತಿಯಲ್ಲಿ ಕವನ ಮೂಡುತ್ತದೆ. ಹಾಗಾಗಿ ಹೊಸ ಕವಿಗಳು ಇದರತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಬೀದರ ಜಿಲ್ಲೆಯ ಮೊದಲ ಕವನ ಸಂಕಲನ 1963 ರಲ್ಲಿ ಬಂದಿತ್ತು. ಈ ಸುದೀರ್ಘ ಅವಧಿಯಲ್ಲಿ ದಾಖಲಾರ್ಹ ಕಾವ್ಯ ರಚನೆಯಾಗಿಲ್ಲ ಎನ್ನುವುದು ನೋವಿನ ಸಂಗತಿ. ಕವಿಗಳು ಅಧ್ಯಯನಶೀಲರಾಗಿ ಕವಿತೆ ಬರೆಯುತ್ತಿಲ್ಲ. ಕವಿಗಳು ಸತತ ಅಧ್ಯಯನ ಮಾಡಿ ಕವನಗಳನ್ನು ಬರೆದಲ್ಲಿ ದಾಖಲಾರ್ಹ ಕವನ ಸಂಕಲನಗಳು ಹೊರಬರಲು ಸಾಧ್ಯ ಎಂದರು.
ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪಾರ್ವತಿ ಸೋನಾರೆ ಮಾತನಾಡಿ, ಕನ್ನಡ ಭವನ ನಿರ್ಮಾಣಕ್ಕೆ ಅನೇಕರ ಶ್ರಮವಿದೆ. ಜಿಲ್ಲೆಯಲ್ಲಿ ಒಂದಿಷ್ಟು ಜೊಳ್ಳು ಕವಿಗಳು ಹುಟ್ಟಿಕೊಂಡಿದ್ದಾರೆ. ಕವಿಗೋಷ್ಟಿಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಎಂದರು.
ಆಶಯ ನುಡಿಗಳನ್ನಾಡಿದ ರಮೇಶ ಬಿರಾದಾರ ಅವರು, ಕಾವ್ಯ ಪುರಾತನವಾದುದು, ಕಾವ್ಯ ಜನರ ಧ್ವನಿಯಾಗಿರಬೇಕು. ಈ ದಿಶೆಯಲ್ಲಿ ಕವಿಗಳು ಕವಿತೆಗಳನ್ನು ರಚಿಸಲು ಮುಂದಾಗಬೇಕು ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ್, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ಬೀದರ ಬಿದ್ರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ ಸೌದಿ, ಕಸಾಪ ತಾಲ್ಲೂಕು ಅಧ್ಯಕ್ಷರಾದ ಎಮ್.ಎಸ್ ಮನೋಹರ, ಶಾಲೀವಾನ ಉದಗಿರೆ, ಪ್ರಶಾಂತ ಮಠಪತಿ, ನಾಗಭೂಷಣ ಮಾಮಡಿ, ಶಾಂತಲಿಂಗ ಮಠಪತಿ, ನಾಗರಾಜ ಹಾವಣ್ಣಾ, ಡಾ.ಸಿದ್ದಲಿಂಗ ಚಿಂಚೋಳಿ, ರಮೇಶ ಸಲಗರ, ಯುವ ಘಟಕದ ಅದ್ಯಕ್ಷ ಗುರುನಾಥ ರಾಜಗೀರಾ ಹಾಗೂ ಇತರರು ಉಪಸ್ಥಿತರಿದ್ದರು.
ರೂಪಾ ಪಟೀಲ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಡಾ.ಶ್ರೇಯಾ ಮಹೀಂದ್ರಕರ್ ವಂದಿಸಿದರು.
ಗಮನ ಸೆಳೆದ ಕವಿಗೋಷ್ಠಿ: ಜಿಲ್ಲೆಯ ವಿವಿಧೆಡೆಯಿಂದ ಅಸಗಮಿಸಿದ್ದ ಕವಿಗಳು ಕನ್ನಡ ಭವನ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಕವನಗಳನ್ನು ವಾಚಿಸಿದರು.
ಕವಿಗಳಾದ ಅಣ್ಣೆಪ್ಪ ರೊಡ್ಡ, ಎಂ.ಎ. ಪಾಟೀಲ, ಎಸ್.ಎಸ್ ಹೊಡಮನಿ, ಗೀತಾಂಜಲಿ ಎಸ್. ಪಾಟೀಲ, ಜಗದೇವಿ ದುಬಲಗುಂಡೆ, ಟಿ.ಜೆ. ಹಾದಿಮನಿ, ಡಾ. ಸಂಜೀವಕುಮಾರ ಅತಿವಾಳೆ, ತಾಜುದ್ದೀನ್ ಬಲ್ಲೂರ, ಧನಲಕ್ಷ್ಮಿ ಪಾಟೀಲ, ನರಸಪ್ಪ ಗೌನಳ್ಳಿ, ನಾಗಯ್ಯ ಸ್ವಾಮಿ ಮಸ್ಕಲ್, ನಿಜಗುಣ ಶಂಭು, ಪುಷ್ಪಾ ಕನಕ, ಬಸವರಾಜ ದಯಾಸಾಗರ, ಬುದ್ಧದೇವಿ ಅಶೋಕ, ಭೂತಾಳಸಿದ್ಧ ಡಿ.ಕಾಳಗಿ, ಮಲ್ಲಿಕಾರ್ಜುನ ಕಾಡಾದಿ, ಮಾಣಿಕ ನೇಳಗೆ, ಮಾಧುರಿ ಎಸ್.ಕೆ, ಮಾರುತಿ ಮಾಸ್ಟರ್, ಮೊ. ವಕೀಲ ಪಟೇಲ್, ವೀರಶೆಟ್ಟಿ ಪಾಟೀಲ, ಸಂಗಪ್ಪ ತೌಡಿ, ಸಂಗಮೇಶ ಮುರ್ಕೆ, ಸುನೀತಾ ಪಾಟೀಲ, ಮೇರಿ ಮಾರ್ಗರೇಟ್, ಆದ.ಎಂ.ಬಂಕಲಗಿ, ಶಿವರಾಜ ಕೊಳಾರ, ರಾಜು ಮಾರುತಿ ಪವಸರ, ನಾಗರಾಜ ಬುಳ್ಳಾ, ಮಹೇಶ ಕುಂಬಾರ, ಆಶಾ, ಪುಷ್ಪಾ ಚಕೋತೆ, ಶ್ರೀದೇವಿ ಪಾಟೀಲ, ನಾಗನಾಥ ಹುಲಸೂರೆ, ಮಲ್ಲಿಕಾರ್ಜುನ ಕುರಕೋಟೆ, ಶಿವಾನಿ, ಸುನೀತಾ, ಧನರಾಜ ತಡಕಲ್, ಹಾವಶೆಟ್ಟಿ ಪಾಟೀಲ, ನಾಗನಾಥ ಹೊಸಾಳೆ, ಡಾ.ಶ್ರೇಯಾ ಮಹೇಂದ್ರಕರ್, ಸ್ವರೂಪಾರಾಣಿ ನಾಗೂರೆ, ಅವಿನಾಶ, ಲೀಲಾ ಸಂಗ್ರಾಮ್ ಸೇರಿದಂತೆ ಇತರರು ಕವನ ವಾಚನ ಮಾಡಿದರು.