ಕನ್ನಡ ಭವನ ಕಾಮಗಾರಿ ಶೀಘ್ರ ಪೂರ್ಣ: ಪ್ರಭು ಚವ್ಹಾಣ

(ಸಂಜೆವಾಣಿ ವಾರ್ತೆ)
ಬೀದರ: ನ.1:ಸ್ವತಂತ್ರಕ್ಕಿಂತ ಪೂವ್ದಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಸ್ವಂತ ನಿವೇಶನವಾಗಲಿ ಅಥವಾ ಸ್ವತದ ಕಾರ್ಯಾಲಯವಾಗಲಿ ಇದ್ದಿಲ್ಲ. ಸ್ವತಂತ್ರ ಬಂದು ಏಳು ದಶಕಗಳೇ ಕಳೆದರೂ ಕನ್ನಡ ಸಾಂಸ್ಕøತಿಕ ಚಟುವಟಿಕೆಗಳು ನಡೆಸಲು ಒಂದು ಸ್ವಂತದ ಕಟ್ಟಡ ಇರಲಿಲ್ಲ. ತಾನು ಮಂತ್ರಿಯಾದ ಬಳಿಕ ಈ ಕಾರ್ಯ ಕೈಗೆತ್ತಿಕೊಂಡು ಕನ್ನಡ ಭವನದ ಕಾಮಗಾರಿಗೆ ನಮ್ಮ ಸರ್ಕಾರ ಎರಡು ಕೋಟಿ ಹಣ ನಿಗದಿಪಡಿಸಿತು. ಕೋವಿಡ್ ಮಹಾಮಾರಿ ಕಾರಣ ಒಂದು ಕೋಟಿ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಿಂಪಡೆದುಕೊಂಡಿತ್ತು. ಅದನ್ನು ಮರಳಿ ಮತ್ತೆ ನೀಡುವಂತೆ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಶೇಖರ ಅವರಿಗೆ ವಿನಂತಿಸಲಾಗಿದೆ. ಆ ಹಣ ಬೇಗ ಬರುವ ವಿಶ್ವಾಸವಿದ್ದು, ಕಾಮಗಾರಿ ಅತೀ ಶೀಘ್ರದಲ್ಲಿಯೇ ಮುಗಿದು ಕನ್ನಡ ಭವನದ ಉದ್ಘಾಟನೆ ಸಮಾರಂಭ ಸಹ ಜರುಗಲಿದೆ ಎಂದು ರಾಜ್ಯದ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತಿಳಿಸಿದರು.
ಇಂದು ನಗರದ ಮಂಗಲಪೇಟ್ ಬಡಾವಣೆಯಲ್ಲಿರುವ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳ ಕಚೇರಿಯ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಹಯೋಗದಲ್ಲಿ ಜರುಗಿದ 65ನೇ ಕನ್ನಡ ರಾಜ್ಯೋತ್ಸವ ನಿಮಿತ್ಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಗಡಿ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಿಗೆ ಮತ್ತೊಂದು ಮನವಿ ಮಾಡಿ, ನಮ್ಮ ಜಿಲ್ಲೆಗೆ ಸಾಂಸ್ಕøತಿಕ ಹಾಗೂ ಕನ್ನಡಪರ ಚಟುವಟಿಕೆಗಳಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಕಳೆದ ವರ್ಷದಿಂದ ಜಿಲ್ಲೆಯ ಹಿರಿಯ ಸಾಹಿತಿಗಳ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದ್ದು, ಈ ವರ್ಷ ಸಹ ಈ ಕಾರ್ಯಕ್ರಮ ಮುಗಿದ ಬಳಿಕ ಎಲ್ಲ ಜನಪ್ರತಿನಿಧಿಗಳೊಂದಿಗೆ ಕೂಡಿಕೊಂಡು ಸಾಹಿತಿಗಳ ಮನೆಗೆ ಹೆಜ್ಜೆ ಹಾಕಲಿದ್ದೇವೆ. ಕನ್ನಡಕ್ಕಾಗಿ ಅವರು ಮಾಡಿದ ತ್ಯಾಗವನ್ನು ಸ್ಮರಿಸಲು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಔರಾದ್ ತಾಲೂಕು ಕನ್ನಡ ಭಾಷಾಭಿಮಾನದಿಂದ ಅತ್ಯಂತ ಹಿಂದುಳಿದ ತಾಲೂಕುಗಾಗಿದ್ದು, ಅಲ್ಲಿಯ ಕನ್ನಡ ಶಾಲೆಗಳ ಜೀರ್ಣೋದ್ದಾರಕ್ಕಾಗಿ ಕ್ರಮ ವಹಿಸಲಾಗಿದೆ. ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕøತಿ ಇವೆಲ್ಲವಯಗಳ ಬಗ್ಗೆ ನಮ್ಮೇಲ್ಲರಿಗೆ ಅಭಿಮನ ಇದ್ದಾಗ ಮಾತ್ರ ಸ್ವಾಭಿಮಾನ ಸಾಧ್ಯವಿದೆ ಎಂದರು.
ಜಿಲ್ಲೆಯನ್ನು ಕೋವಿಡ್‍ನಿಂದ ಮುಕ್ತವಾಗಿಸಲು ಹಲವು ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಕೋವಿಡ್ ಲಸಿಕೆ ಎಲ್ಲರಿಗೂ ನೀಡುವ ಮೂಲಕ ಶತ ಪ್ರತಿಶತ ಜನರಿಗೆ ಲಸಿಕೆ ನೀಡಿ ಭವಿಷ್ಯದಲ್ಲಿ ಹಿಂದೆ ಆದ ಘಟನೆಗಳು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಂಟು ವಿವಿಧ ತುಕಡಿಗಳಿಂದ ಪರೇಡ್ ವಂದನೆ ಸ್ವೀಕರಿಸಿದರು. ಸಾಹಿತ್ಯ, ಸಂಸ್ಕøತಿ, ಕಲೆ, ಪತ್ರಿಕೆ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳಲ್ಲಿ ಗಣನಿಯ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಲಾಯಿತು.
ಸ್ಥಳಿಯ ಶಾಸಕ ರಹಿಮ್ ಖಾನ್, ಕೇಂದ್ರ ಸರ್ಕಾರದ ನವಿಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ, ಕರ್ನಾಟಕ ರಾಜ್ಯ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಥ ಮಲ್ಕಾಪುರೆ, ವಿಜಯಸಿಂಗ, ಅರವಿಂದಕುಮಾರ ಅರಳಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಕರ್ನಟಕ ಹಜ್ ಕಮಿಟಿ ಅಧ್ಯಕ್ಷ ರೌಫೋದ್ದಿನ್ ಕಚೇರಿವಾಲೆ, ಜಿಲ್ಲಾಧಿಕಾರಿ ರಾಮಚಂದ್ರನ್.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹಿರಾ ನಸಿಮ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಿ.ಎಲ್ ನಾಗೇಶ ಸೇರಿದಂತೆ ಜಿಲ್ಲೆಯ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿದ್ದರು.