ಕನ್ನಡ ಬಾರದ ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕರಿಗೆ ತೊಂದರೆ

ಚಿಂಚೋಳಿ,ಮಾ.30- ಪಟ್ಟಣದ ಚಂದಾಪುರದ (ಎಸ್‍ಬಿಐ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳು ಕನ್ನಡ ಭಾಷೆ ಮಾತನಾಡದೆ ಇರುವುದರದ ಬ್ಯಾಂಕಿನ ಗ್ರಾಹಕರ ವ್ಯವಹಾರಕ್ಕೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು, ಮತ್ತು ಬ್ಯಾಂಕಿನ ಡೆಪಾಸಿಟ್ ಮಷೀನ್ 24/7 ತೆಗೆದು ಜನಗಳಿಗೆ ಸಹಾಯ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಬ್ಯಾಂಕಿನ ಸಿಬಂಧಿಗಳು, ಜನರ ಜೊತೆ ಕನ್ನಡದಲ್ಲೇ ವ್ಯವಹರಿಸಬೇಕು ಎಂದು ನವ ಕರ್ನಾಟಕ ಜನಪರ ಸಂಘಟನೆ ನೆತೃತ್ವದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಮ್ಯಾನೇಜರಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನವ ಕರ್ನಾಟಕ ಜನಪರ
ಸಂಘದ ಅಧ್ಯಕ್ಷರಾದ ಶಿವು ಕಟ್ಟಿಮನಿ, ಮುಖಂಡರಾದ ನಾಗೇಶ್ ಪಿತ್ತಾಲ್, ಸಂತೋಷ ಅಲ್ಲಾಪೂರ್, ನಾಗೇಶ್ ಹಲ್ಛೇರಿ, ರಮೇಶ್ ಕೆ, ನವೀನ್ ಕೆ, ಪುಟ್ಟು ಬೀರ್ನಲ್ಲಿ, ಪವನ್, ಕಲೀಮ್,ಪೂರ್ಣ, ಪ್ರವೀಣ್ ಮತ್ತು ಅನೇಕ ಸಂಘದ ಸದಸ್ಯರು ಇದ್ದರು.