
ಕಲಬುರಗಿ: ಆ.31:ವ್ಯಕ್ತಿಯನ್ನು ಕೊಲ್ಲುವುದು ಸಹಜ. ಆದರೆ ವಿಚಾರಗಳನ್ನು ಕೊಲ್ಲಲಾಗುವುದಿಲ್ಲ ಎಂದು ಪ್ರಗತಿಪರ ಚಿಂತಕ ಪೆÇ್ರ. ಆರ್.ಕೆ. ಹುಡಗಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಡಾ. ಎಂ.ಎಂ. ಕಲಬುರಗಿ ವಿಚಾರ ವೇದಿಕೆ ಹಾಗೂ ಎಲ್ಲ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಹಾ ಸತ್ಯಾರ್ಥಿ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಸಂಸ್ಮರಣೆಯಲ್ಲಿ ಕೊಂದವರುಳಿವರೆ? ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಬುರ್ಗಿಯವರನ್ನು ಕೊಂದವರು ನಿರ್ನಾಮವಾಗಿದ್ದಾರೆ. ಆದರೆ ಕೊಲೆಯಾದವರು ಉಳಿದಿದ್ದಾರೆ ಎಂಬುದಕ್ಕೆ ಹುತಾತ್ಮ ಡಾ. ಎಂ.ಎಂ. ಕಲಬುರ್ಗಿ ಮಹತ್ವದ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದರು.
ರೋಮ್ ಸಾಮ್ರಾಜ್ಯದಲ್ಲಿ ಗುಲಾಮಗಿರಿ ವಿರುದ್ಧ ದಂಗೆ ಎದ್ದ ಸ್ಪಾಟಕಸ್ ದಮನ ಮಾಡುವುದು ರಾಜನಿಗೆ ಎಷ್ಟು ತೊಂದರೆಯಾತು. ಅದರಂತೆ ಕಲಬುರ್ಗಿ ಸತ್ತಿರಬಹುದು. ಆದರೆ ಅವರ ವಿಚಾರಧಾರೆಯನ್ನು ಕೊಲ್ಲಲಾಗುವುದಿಲ್ಲ ಎಂದು ತಿಳಿಸಿದರು.
ನರೇಂದ್ರ ಧಾಬೋಲಕರ್, ಗೋವಿಂದ ಪನ್ಸಾರೆ, ಗೌರಿ ಲಂಕೇಶ, ಲಿಂಗಣ್ಣ ಸತ್ಯಂಪೇಟೆ ಮುಂತಾದವರನ್ನು ಕೊಲೆ ಮಾಡಿದವರು ಅಮಾಯಕರು. ಕೊಲೆಗೆ ಪ್ರಚೋದನೆ ಮಾಡಿದ ಸಿದ್ಧಾಂತದ ವಿರುದ್ಧ ಹೋರಾಡಿದಾಗ ಮಾತ್ರ ವೈಚಾರಿಕತೆ ಉಳಿಯಲು ಸಾಧ್ಯ ಎಂದು ವಿವರಿಸಿದರು.
ಕೊಂದವರುಳಿದರೆ? ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ, ಹಿಡಿದುದ್ದನ್ನು ಬಿಡದ ಹಟವಾದಿಯಾಗಿದ್ದ ಕಲಬುರ್ಗಿಯವರು ಲಿಂಗಾಯತ ಧರ್ಮ ಗ್ರಂಥವಾಗಿರುವ ವಚನಗಳ ವಿಶ್ವಾಸಾರ್ಹವಾದ ಪಠ್ಯಗಳನ್ನು ಸಂಪಾದಿಸುವುದಕ್ಕಾಗಿ ಮೀಸಲಾಗಿಟ್ಟಿದ್ದರು ಎಂದು ತಿಳಿಸಿದರು.
ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನರಿಯರು ಎಂಬಂತೆ ಸತ್ಯವಂತರಾಗಿದ್ದ ಕಲಬುರ್ಗಿಯವರಿಗೆ ಸಾವಿಲ್ಲ. ಸತ್ಯವೆಂಬ ಭೂತಕಾಲದ ಬಲದಿಂದ ಅಸತ್ಯವೆಂಬ ಸರಿಪಡಿಸುವುದಾಗಿದೆ. ಎಲ್ಲಿಯವರೆಗೆ ಅವರ ವಿಚಾರಗಳಿರುತ್ತವೋ ಅಲ್ಲಿಯವರೆಗೆ ಒಬ್ಬ ವ್ಯಕ್ತಿ ಜೀವಂತವಾಗಿರುತ್ತಾನೆ ಎಂದರು.
ನನಗೆ ಬರುವ ಸಂಬಳ ಹೆಚ್ಚಾಗಿದೆ ಎಂದೆನಿಸುತ್ತದೆ. ನೀರಿನಂತೆ ಗಳಿಸಬೇಕು, ತೀರ್ಥದಂತೆ ಖರ್ಚು ಮಾಡಬೇಕೆಂಬ ಕಲಬುರ್ಗಿ ನುಡಿಗಳು ಬದುಕಿಗೆ ಬೆಳಕಾಗಬಲ್ಲವು ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಆಳಂದ ತೋಂಟದಾರ್ಯ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ವ್ಯಕ್ತಿಯನ್ನು ಹತ್ಯೆ ಮಾಡಬಹುದು. ಆದರೆ ವ್ಯಕ್ತಿತ್ವವನ್ನಲ್ಲ. ಸಾಮಾಜಿಕ, ಸಾಂಸ್ಕøತಿಕ ಕಾಳಜಿವುಳ್ಳ ಉನ್ನತ ಮಟ್ಟದ ಸಂಶೋಧಕರಾಗಿದ್ದ ಕಲಬುರ್ಗಿ ಯವರು ಕನ್ನಡ ಮತ್ತು ಬಸವತತ್ವವನ್ನು ಉಸಿರಾಗಿಸಿಕೊಂಡಿದ್ದರು. ಲಿಂಗಾಯತ ಸ್ವತಂತ್ರ ಧರ್ಮದ ಚರ್ಚೆಗೆ ಬೀಜಾಂಕುರ ಮಾಡಿದವರು ಎಂದು ನುಡಿದರು.
ಸಂಸ್ಕೃತಿ ಚಿಂತಕ ಮಾರುತಿ ಗೋಕಲೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ವೇದಿಕೆಯಲ್ಲಿದ್ದರು.
ಡಾ. ಶಿವರಂಜನ ಸತ್ಯಂಪೇಟೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಶೆಟಕಾರ ನಿರೂಪಿಸಿದರು. ಮಹಾಂತೇಶ ಹಳ್ಳದ ಮಠ ಪ್ರಾರ್ಥನೆಗೀತೆ ಹಾಡಿದರು. ಮಹಾಂತೇಶ ಕಲಬುರ್ಗಿ ವಂದಿಸಿದರು.
ಶಿವಶರಣಪ್ಪ ದೇಗಾಂವ, ಸುಭಾಷ ಶೀಲವಂತ, ಆರ್.ಜಿ.ಶೆಟಗಾರ, ದತ್ತಾತ್ರೇಯ ಇಕ್ಕಳಕಿ, ಡಾ. ಸೂರ್ಯಕಾಂತ ಪಾಟೀಲ, ಶಿವಶರಣಪ್ಪ ಮೂಳೆಗಾಂವ, ಮಹಾಂತೇಶ ನವಲಕಲ್ , ಬಸವರಾಜ ಭಾವಿ, ಸತೀಶ ಸಜ್ಜನಶೆಟ್ಟಿ ಇತರರಿದ್ದರು.