ಕನ್ನಡ ಬಳಕೆ ಜಾಗೃತಿ ಕಾರ್ಯಕ್ರಮ

ಕೆ.ಆರ್.ಪುರ,ಡಿ.೨೯- ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆ.ಆರ್.ಪುರ ಕ್ಷೇತ್ರದ ಹೊರಮಾವಿನಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಬ್ಯಾಂಕ್‌ಗಳು ಜನ ಜೀವನದ ಜೀವನಾಡಿಗಳಾಗಿದ್ದು ಇಲ್ಲಿ ಕನ್ನಡದ ಅವಶ್ಯಕತೆ ಹೆಚ್ಚಾಗಿದೆ ರಾಜ್ಯದಲ್ಲಿ ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡುವಂತೆ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರೇತರ ಸದಸ್ಯ ವಿ.ಮಂಜುನಾಥ್ ಅವರು ತಿಳಿಸಿದರು.
ಬ್ಯಾಂಕ್‌ನ ಸಾಮಾಜಿಕ ಜಾಲತಾಣಗಳಲ್ಲಿ, ಸೂಚಾನಾಫಲಕ ಸೇರಿದಂತೆ ವಿವಿಧೆಡೆ ಮಾತೃಭಾಷೆಗೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದರು.
ಕರ್ನಾಟಕ ಕನ್ನಡ ಭಾಷೆಯೆ ಸಾರ್ವಭೌಮವಾಗಿದ್ದು ಆದ್ದರಿಂದ ಕನ್ನಡಭಾಷೆಯ ವ್ಯವಹಾರವನ್ನು ಸರ್ಮಪಕ ವಾಗಿ ಅನುಷ್ಠಾನ ಮಾಡುವಂತೆ ಸಲಹೆ ನೀಡಿದರು.
ಎಟಿಎಂಗಳಲ್ಲಿ ಕನ್ನಡ ವ್ಯವಹಾರ ಮಾಡುವುದರಿಂದ ಕನ್ನಡಿಗರಿಗೆ ಹೆಚ್ಚು ಅನುಕೂಲವಾಗಲಿದ್ದು, ಇದರಿಂದ ವಂಚನೆ ಪ್ರಕರಣ ಕಡಿಮೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರಾದ ಕಿರಣ್ ರೆಡ್ಡಿ, ,ಗೆದ್ದಲಹಳ್ಳಿ ಮಂಜು, , ಶಾಂತರಾಜ್, ಈಶ್ವರ್, ಮುನಿಸ್ವಾಮಿ, ಪುನೀತ್, ವಿನೋದ್, ರಾಧಾಕೃಷ್ಣ, ಬತೇಶ್, ಕಿಶನ್, ಯೋಗಿ ಇದ್ದರು.