ಕನ್ನಡ ಪ್ರತಿಯೊಬ್ಬರ ಉಸಿರಾಗಲಿ:ಎಂ.ವೈ.ಪಾಟೀಲ್

ಅಫಜಲಪೂರ:ನ.2: ನಮ್ಮನಾಡು ಭಾಷೆ ಕನ್ನಡ ಪ್ರತಿಯೊಬ್ಬರ ಉಸಿರಾದಾಗ ಮಾತ್ರ ಅದು ಬಹು ದೀರ್ಘಕಾಲ ಉಳಿಯಲು ಸಾಧ್ಯ ಹಾಗೂ ಕನ್ನಡ ಉಳಿವಿಗಾಗಿ ಮತ್ತು ಅದನ್ನು ಮುಂದಿನ ಪೀಳಿಗೆಗಾಗಿ ಬೆಳೆಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಈ ನಾಡು ಮುತ್ತು, ರತ್ನ, ಹವಳಗಳ ವ್ಯಾಪಾರದ ನಾಡಾಗಿದ್ದ ವಿವಿಧ ಭಾಗಗಳಲ್ಲಿ ಹಂಚಿಹೋದ ಕನ್ನಡಿಗರನ್ನು ಒಂದುಗೂಡಿಸುವ ಕಾರ್ಯ ಮಾಡಿದ ಮಹನೀಯರಿಗೆ ಇಲ್ಲಿ ನಾವು ಸ್ಮರಿಸಬೇಕು.1973ರಲ್ಲಿ ಕರ್ನಾಟಕ ಏಕೀಕರಣವಾದ ದಿನ ಅದಕ್ಕಾಗಿ ಹೋರಾಟ ಮಾಡಿದ ಘಳಿಗೆಗಳನ್ನು ನಾವು ಅರಿತುಕೊಂಡರೆ ಕನ್ನಡ ಬಗ್ಗೆ ನಮ್ಮಲ್ಲಿ ಪ್ರೀತಿ ಹುಟ್ಟುತ್ತದೆ. ಯೋಧರಂತೆ ಕನ್ನಡ ನಾಡಿಗಾಗಿ ಹೋರಾಡಿದಲ್ಲದೆ ಹೊರರಾಜ್ಯಗಳಲ್ಲಿ ಕನ್ನಡ ಧ್ವಜ ಹರಿಸಿರುವ ಕೀರ್ತಿ ಕನ್ನಡಿಗರಿಗೆ ಸಲ್ಲುತ್ತದೆ.ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ನಮ್ಮ ಕನ್ನಡಿಗರ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಇಂದು ಅನೇಕ ಶ್ರೀಮಂತ ರಾಷ್ಟ್ರಗಳಲ್ಲಿ ಸಂಸ್ಕøತಿ ಮಾನವೀಯತೆಯಂಥ ಉದಾತ್ತ ಗುಣಗಳ ಕೊರತೆಯಿಂದಾಗಿ ಆ ದೇಶಗಳ ಸಾರ್ವಜನಿಕರ ಬದುಕಿನಲ್ಲಿಯೂ ಖಿನ್ನತೆ ಹೆಚ್ಚಾಗುತ್ತಿದೆ.ಮಾನವೀಯ ಸಂಬಂಧ ಕಡಿಮೆಯಾಗುತ್ತಿದೆ ಎಂಬುದನ್ನು ಮನಃಶಾಸ್ತ್ರಜ್ಞರು ಸಂಶೋಧನೆ ಮಾಡಿದ್ದಾರೆ. ನಮ್ಮ ಕನ್ನಡ ಭಾಷೆ ಸಮೃದ್ಧಿಯಾಗಿದೆ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಏಕೆಂದರೆ ಇಂಗ್ಲಿಷ್ ಸೇರಿದಂತೆ ಕೆಲವು ಭಾಷೆಗಳ ಅತಿಯಾದ ದಾಳಿ ಕನ್ನಡದ ಮೇಲಾಗುತ್ತಿದೆ. ಅಲ್ಲದೆ ಇಂದಿನ ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವ ಜನಾಂಗದಲ್ಲಿ ಮತ್ತು ಮಕ್ಕಳಲ್ಲಿಯೂ ಆಸಕ್ತ ಮೂಡಿಸುವ ಕೆಲಸವನ್ನು ಪಾಲಕರು ಮಾಡಬೇಕಾಗಿದೆ ಎಂದು ಕರೆ ನೀಡಿದರು.ಕನ್ನಡ ರಾಜ್ಯೋತ್ಸವದ 66ನೇ ಧ್ವಜಾರೋಹಣವನ್ನು ತಹಶೀಲ್ದಾರ್ ನಾಗಮ್ಮ ಎಂ.ಕೆ ನೆರವೇರಿಸಿದರು.ಈಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ, ತಾಲೂಕು ವೈದ್ಯಾಧಿಕಾರಿ ರತ್ನಾಕರ್ ತೋರಣ, ಸಮಾಜ ಕಲ್ಯಾಣ ಅಧಿಕಾರಿ ಚೇತನ ಗುರಿಕಾರ, ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಗಡಗೀಮನಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸುರೇಂದ್ರನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಸಿದ್ಧರಾಮ ಅಜಗೊಂಡ, ಪುರಸಭೆ ಮುಖ್ಯಾಧಿಕಾರಿ ಪ್ರಭುಲಿಂಗ ದೇಸಾಯಿ, ಮುಖಂಡರಾದ ರಾಜಶೇಖರ್ ಪಾಟೀಲ್,ಶ್ರೀಮಂತ ಬಿರಾದಾರ,ರಾಜು ಆರೇಕರ, ಜಮೀಲ್ ಗೌಂಡಿ,ನಿಂಗು ಚಲವಾದಿ, ರವಿ ನಂದಶೇಟ್ಟಿ, ಸುರೇಶ ಅವಟೆ ಸೇರಿದಂತೆ ಇನ್ನಿತರು ಇದ್ದರು.