ಕನ್ನಡ ಪ್ರಜ್ಞೆ ಸದಾ ಜಾಗೃತವಾಗಿರಬೇಕುಃ ಡಾ.ಪವಾರ

ವಿಜಯಪುರ, ನ.3-ಕನ್ನಡ ನಾಡಿನಲ್ಲಿರುವ ಪ್ರತಿಯೊಬ್ಬರಲ್ಲಿ ಕನ್ನಡ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ಕನ್ನಡ ಒಂದು ಸಂಸ್ಕøತಿ. ಇದನ್ನು ಪ್ರತಿನಿಧಿಸುವ ಹಾಗೆ ನಾವೆಲ್ಲ ಬದುಕಬೇಕು. ಕನ್ನಡ ಪ್ರಾಚಿನವಾದ ವಿದ್ವತ್ ಶ್ರೀಮಂತಿಕೆಯನ್ನು ಹೊಂದಿದ ಭಾಷೆ. ವಸಾಹತು ಕಾಲದ ಸಂದರ್ಭದಲ್ಲಿ ನಮ್ಮ ಹಿರಿಯರು ಕರ್ನಾಟಕ ಏಕೀಕರಣಕ್ಕೆ ತಮ್ಮ ತನುಮನವನ್ನು ಅರ್ಪಿಸಿ ದುಡಿದರು. ಅವರೆಲ್ಲರ ಶ್ರಮದ ಪ್ರತಿಫಲವಾಗಿ ಕನ್ನಡ ನಾಡು ಒಂದಾಗಿ ವಿಶೇಷ ವೈಶಿಷ್ಟಗಳ ಮೂಲಕ ದೇಶದಲ್ಲಿಯೇ ಖ್ಯಾತಿಗೊಂಡಿದೆ. ಇದಕ್ಕೆ ಗೌರವ ಕೊಟ್ಟು ಕನ್ನಡಾಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಾರಾಯಣ ಪವಾರ ಇಂದಿಲ್ಲಿ ಅಭಿಪ್ರಾಯ ಪಟ್ಟರು.
ಅವರು ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ಎ.ಆರ.ಎಸ್.ಇನಾಮದಾರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಏರ್ಪಡಿಸಿದ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು
ಮೂಂದುವರೆದ ಅವರು ಕನ್ನಡ ನಾಡಿನಲ್ಲಿ ಎಲ್ಲ ಧರ್ಮದ ಜನರು ಒಟ್ಟಾಗಿ ಬಾಳುತ್ತಿದ್ದೇವೆ. ಇದು ನಮ್ಮ ಆತ್ಮಾಭಿಮಾನವನ್ನು ಹೆಚ್ಚಿಸುತ್ತದೆ. ನಮ್ಮೆಲ್ಲರ ವ್ಯವಹಾರ ಕನ್ನಡದಲ್ಲಿ ನಡೆಯುವ ಮೂಲಕ ನಾವು ಕನ್ನಡಕ್ಕೆ ಗೌರವವನ್ನು ಕೊಡಬೇಕು. ನಾಡು-ನುಡಿಯಲ್ಲಿ ಶೃದ್ದೆಯನ್ನಿಟ್ಟು ಇದರ ಶ್ರೀಮಂತಿಕೆ ಹೆಚ್ಚಿಸುವಂತೆ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕÁರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡ ವಾಯುದಳದ ವಿಶ್ರಾಂತ ಅಧಿಕಾರಿಗಳಾದ ಎಸ್.ಎಮ್.ಗುಡ್ಡದ ಅವರು ಮಾತನಾಡಿ ಕನ್ನಡ ಭಾಷಾ ವೈವಿದ್ಯತೆಯನ್ನು ಕುರಿತು ಹಾಗೂ ಕನ್ನಡ ಮತ್ತು ಮರಾಠಿ ಬಾಂದವ್ಯದ ಕುರಿತು ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಮಹಮ್ಮದ ಅಪ್ಜಲ್ ಅವರು ಮಾತನಾಡಿ ಕನ್ನಡ ಭಾರತಿಯ ಭಾಷೆಗಳಲ್ಲಿ ಶ್ರೀಮಂತವಾದ ಶಕ್ತಿಯುತ ಭಾಷೆಯಾಗಿದೆ. ನಾಡಿನ ಜೀವನಾಡಿಯಾಗಿರುವ ಕನ್ನಡವನ್ನು ಸರಿಯಾಗಿ ಬಳಸುವ ಮೂಲಕ ಅದನ್ನು ಬೆಳೆಸೊಣ ಹಾಗೂ ಉಳಿಸೊಣ ಎಂದು ತಿಳಿಸಿದರು.
ಸಮಾರಂಭದಲ್ಲಿ ಸರ್ವರು ಕುವೆಂಪುರವರ ಭಾರಿಸು ಕನ್ನಡ ಡಿಂಡಿಮವ, ಕೆ.ಎಸ್.ನಿಸಾರ ಅಹಮ್ಮದ ಅವರ ನಿತ್ಯೋತ್ಸವ ಹಾಗೂ ಹಂಸಲೇಖ ಸಂಗೀತ ಸಂಯೋಜಿಸಿರುವ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕು.ಶರೀಫಾ ಕುರಾನ್ ಪಠಣ ಮಾಡಿದರು. ಭಗವದ್ಗೀತೆ ವಾಚನವನ್ನು ಕು.ಪ್ರೀಯಾಂಕಾ ಭೂಶೆಟ್ಟಿ ಹಾಗೂ ಸೋನಾಲಿ ಪವಾರ ನಡೆಸಿಕೊಟ್ಟರು. ನಾಡಗೀತೆಯನ್ನು ಕು.ಸರಸ್ವತಿ ಘಾಟಗೆ, ಕು.ಶ್ವೇತಾ ನಿಡೋಣಿ ಮತ್ತು ಕು.ಕಾವೇರಿ ಹಾದಿಮನಿ ಹಾಡಿದರು. ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಮೇತ್ರಿ ನಡೆಸಿಕೊಟ್ಟರು ಪ್ರೊ.ಐ.ಜಿ.ಕೊಡೆಕಲಮಠ ವಂದನಾರ್ಪಣೆ ಮಾಡಿದರು. ಕು.ಪ್ರೀತಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಅರ್ಥಪೂರ್ಣವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೋಂಡಿದ್ದರು.