ಕನ್ನಡ ಪುಸ್ತಕ ಹಂಚುವ, ಓದುವ ಪರಂಪರೆ ಶ್ರೇಷ್ಠ


ಬಾಗಲಕೋಟೆ,ಜೂ.15: ಕಂಪ್ಯೂಟರ್ ಯುಗದಲ್ಲಿರುವ ಇಂದಿನ ಯುವ ಸಮೂಹವು ಕನ್ನಡ ಪುಸ್ತಕಗಳನ್ನು ಓದುಗರಿಗೆ ಹಂಚುವ ಹಾಗೂ ಓದುವ ಪರಂಪರೆ ಬೆಳೆಸುವುದು ಉತ್ತಮ ಎಂದು ಡಾ.ಲಕ್ಷ್ಮೀಕಾಂತ ಪಾಂಚಾಳ ಹೇಳಿದರು.
ರಾಂಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಲಕ್ಷ್ಮೀಕಾಂತ ಪಂಚಾಳ ಅವರು ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿ?Àತ್ತಿಗೆ ಭೇಟಿ ನೀಡಿ, ತಮ್ಮ ಯೋಜನಾ ಸಂಚಾಲಕತ್ವದಲ್ಲಿ ಕಲಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದ ‘ಕನ್ನಡ ಸಾಹಿತ್ಯ ಪುನರಾವಲೋಕನ ಮಾಲೆ’ ಹತ್ತು ಸಂಪುಟಗಳ ಗ್ರಂಥಗಳನ್ನು ಹಾಗೂ 101 ಮೌಲ್ಯಯುತ ಕನ್ನಡ ಲೇಖನಗಳನ್ನು ಹೊಂದಿರುವ ‘ಸೌಹಾರ್ದ ಪಥ’ ಮಹಾಗ್ರಂಥವನ್ನು ಬಾಗಲಕೋಟೆ ಕಸಾಪ ಜಿಲ್ಲಾಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಅವರಿಗೆ ನೀಡಿದರು. ಕನ್ನಡ ಪುಸ್ತಕಗಳನ್ನು ಹಂಚುವದರೊಂದಿಗೆ ಓದುವ ಪರಂಪರೆ ಮತ್ತು ಪ್ರೇರಣೆ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಅವರು ಕನ್ನಡ ಪುಸ್ತಗಳನ್ನು ಸ್ವೀಕರಿಸಿ ಮಾತನಾಡಿ, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಲಕ್ಷ್ಮೀಕಾಂತ ಪಾಂಚಾಳ ಅವರು ಕನ್ನಡ ಪುಸ್ತಕಗಳು ಹಂಚುವ ಕಾರ್ಯ ಓದುಗರಿಗೆ ಮಾದರಿಯಾಗಿದ್ದು, ಸಹೃದಯರ ಮನಸ್ಸಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿ ಕನ್ನಡ ನಾಡು ನುಡಿಗಳಿಗೆ ಪ್ರೇರಣೆಯಾಗುವ ಕನ್ನಡದ ಪುಸ್ತಕಗಳು ಸದಾ ಓದುವುದರಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಎಲ್ಲರೂ ಕನ್ನಡ ಪುಸ್ತಕ ಓದುವ ಪ್ರೀತಿಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಸಾಹಿತಿಗಳಾದ ಡಾ.ಪ್ರಕಾಶ ಖಾಡೆ, ಡಾ.ಮೈನುದ್ದೀನ್ ರೇವಡಿಗಾರ, ಪೆÇ್ರ.ನಾಡಗೌಡರ, ರಾಜೇಂದ್ರ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.